ಓವಲ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಜಯ್ ಮಲ್ಯ| ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ| ಭಾರತ-ಆಸ್ಟ್ರೆಲೀಯಾ ವಿಶ್ವಕಪ್ ಪಂದ್ಯ ವೀಕ್ಷಣೆ| ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸಿಕ್ಕ ವಿಜಯ್ ಮಲ್ಯ| ಪಂದ್ಯ ವೀಕ್ಷಣೆಗೆ ಬಂದಿರುವುದಾಗಿ ತಿಳಿಸಿದ ವಂಚಕ|

ಲಂಡನ್(ಜೂ.09): ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಭಾರತ-ಆಸ್ಟ್ರೆಲೀಯಾ ನಡುವಿನ ವಿಶ್ವಕಪ್ ಪಂದ್ಯ ವಿಕ್ಷೀಸಲು ಓವಲ್ ಮೈದಾನಕ್ಕೆ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಓವಲ್ ಮೈದಾನಕ್ಕೆ ಆಗಮಿಸಿದ ವಿಜಯ್ ಮಲ್ಯ ಅವರನ್ನು ಮಾಧ್ಯಮದ ಪ್ರತಿನಿಧಿಗಳು ಸುತ್ತುವರೆದಾಗ, ತಾವು ಕೇವಲ ಪಂದ್ಯ ವೀಕ್ಷಣೆಗೆ ಬಂದಿರುವುದಾಗಿ ತಿಳಿಸಿದ್ದಾರೆ.

Scroll to load tweet…


ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾರತದಲ್ಲಿ ಮಲ್ಯ ವಿರುದ್ಧ ಹಲವು ಪ್ರಕರಣಗಳ ದಾಖಲಾಗಿದ್ದು, ಈಗಾಗಲೇ ಬ್ರಿಟನ್ ಕೋರ್ಟ್ ಮಲ್ಯ ಗಡಿಪಾರು ಮಾಡುವ ಸಂಬಂಧ ಪ್ರಕರಣದ ವಿಚಾರಣೆ ನಡೆಸುತ್ತಿದೆ.