pm surya ghar free Electricity Scheme : ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ನಿಯಮ ಬದಲಾಗಿದೆ. ನೀವು ಶೀಘ್ರವೇ ಇದ್ರ ಲಾಭ ಪಡೆಯಬಹುದು. ಯೋಜನೆಗೆ ಹೆಸರು ನೋಂದಾಯಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ನವೀಕರಣ ಮಾಡಲಾಗಿದೆ. ಇದರ ಅಡಿಯಲ್ಲಿ ಇಲ್ಲಿಯವರೆಗೆ 4 ಮಿಲಿಯನ್ಗಿಂತಲೂ ಹೆಚ್ಚು ಕುಟುಂಬಗಳು ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಂಡಿವೆ. ಪ್ರತಿ 100,000 ಜನರು ಈಗ 8 ದಿನಗಳಲ್ಲಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ

ಈ ಹಿಂದೆ 47 ದಿನಗಳಾದ್ರೂ ಯೋಜನೆ ಲಾಭ ಜನಸಾಮಾನ್ಯರಿಗೆ ಸಿಗ್ತಿರಲಿಲ್ಲ. ಆದ್ರೀಗ ಯೋಜನೆ ಸುಲಭವಾಗಿ ಜನಸಾಮಾನ್ಯರ ಕೈಗೆ ಸಿಗ್ತಿದೆ. ದೇಶಾದ್ಯಂತ ಪ್ರತಿದಿನ 12,000 ಜನರು ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಮೇಲ್ಛಾವಣಿ ಸೌರ ಯೋಜನೆಯಾಗಿದ್ದು, ಇದು ಶುದ್ಧ ಶಕ್ತಿಯನ್ನು ಉತ್ತೇಜಿಸುವುದರ ಜೊತೆಗೆ ಮನೆಯ ವಿದ್ಯುತ್ ಬಿಲ್ಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಉಚಿತ ವಿದ್ಯುತ್ ಯೋಜನೆ ಎಂದರೇನು?

ಈ ಯೋಜನೆಯು ಅರ್ಹ ಮನೆಗಳಿಗೆ ಗ್ರಿಡ್-ಸಂಪರ್ಕಿತ ಮೇಲ್ಛಾವಣಿ ಸೌರಶಕ್ತಿ ಫಲಕಗಳಿಂದ ತಿಂಗಳಿಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಸಕ್ರಿಯ ವಿದ್ಯುತ್ ಸಂಪರ್ಕ ಹೊಂದಿರುವ ವಸತಿ ಗ್ರಾಹಕರಿಗೆ ಈ ಯೋಜನೆ ಉಚಿತವಾಗಿದೆ. ಸೌರ ಫಲಕಗಳನ್ನು ಸ್ಥಾಪಿಸುವ ಆರಂಭಿಕ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಕೇಂದ್ರ ಹಣಕಾಸು ಸಹಾಯವನ್ನು (CFA) ನೀಡುತ್ತದೆ. ಯೋಜನೆ ಪ್ರಾರಂಭವಾದಾಗಿನಿಂದ, ಸಬ್ಸಿಡಿ ಸಹಾಯವಾಗಿ ಫಲಾನುಭವಿಗಳಿಗೆ 17,967 ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ.

ಚಿನ್ನ-ಬೆಳ್ಳಿ ದರದಲ್ಲಿ ಅನಿರೀಕ್ಷಿತ ಕುಸಿತ: ಒಂದು ವಾರದಲ್ಲಿ ಕಡಿಮೆಯಾಗಿದೆಷ್ಟು? ಇವತ್ತು ಇಳಿಕೆ

ಪ್ರಯೋಜನಗಳೇನು?

ಕಡಿಮೆಯಾಗುವ ವಿದ್ಯುತ್ ಬಿಲ್ : ಮೇಲ್ಛಾವಣಿಗಳ ಮೇಲೆ ಸೌರ ಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸುವುದರಿಂದ ಕುಟುಂಬದ ಮಾಸಿಕ ವಿದ್ಯುತ್ ಬಿಲ್ಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ : ಅರ್ಹ ಫಲಾನುಭವಿಗಳು ಸೌರಶಕ್ತಿ ಉತ್ಪಾದನೆಯ ಮೂಲಕ ತಮ್ಮ ವಿದ್ಯುತ್ ಬಳಕೆಯನ್ನು ಸರಿದೂಗಿಸಬಹುದು. ಇದರಿಂದಾಗಿ ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ.

ಸರ್ಕಾರಿ ಸಬ್ಸಿಡಿ: ಸರ್ಕಾರ ಈ ಯೋಜನೆಯಡಿ ಸಬ್ಸಿಡಿ ನೀಡುತ್ತಿದೆ. 2 kW ವರೆಗಿನ ವ್ಯವಸ್ಥೆಯ ವೆಚ್ಚದ ಶೇಕಡಾ 60ರಷ್ಟು, 2-3 kW ಹೆಚ್ಚುವರಿ ಸಾಮರ್ಥ್ಯಕ್ಕೆ ಹೆಚ್ಚುವರಿ ವೆಚ್ಚದ ಶೇಕಡಾ 40 ರಷ್ಟು ಮತ್ತು 3 kW ವ್ಯವಸ್ಥೆಗೆ ಗರಿಷ್ಠ 78,000 ರೂಪಾಯಿ ಸಬ್ಸಿಡಿ ಮತ್ತು 3 kW ವ್ಯವಸ್ಥೆಯನ್ನು ಸ್ಥಾಪಿಸುವ ಕುಟುಂಬಕ್ಕೆ 78,000 ವರೆಗೆ ಸಬ್ಸಿಡಿಯನ್ನು ಸರ್ಕಾರ ನೀಡ್ತಿದೆ.

ಹೆಚ್ಚುವರಿ ಶಕ್ತಿಯಿಂದ ಗಳಿಕೆ : ಒಂದು ಕುಟುಂಬವು ತಾನು ಬಳಸುವುದಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸಿದರೆ, ಹೆಚ್ಚುವರಿ ವಿದ್ಯುತ್ ಅನ್ನು ನಿವ್ವಳ ಮೀಟರಿಂಗ್ ವ್ಯವಸ್ಥೆಯ ಅಡಿಯಲ್ಲಿ ಗ್ರಿಡ್ಗೆ ರಫ್ತು ಮಾಡಬಹುದು. ಇದರಿಂದ ಹೆಚ್ಚುವರಿ ಆದಾಯವನ್ನು ಗಳಿಸಬಹುದು.

ಯಾರು ಪ್ರಯೋಜನ ಪಡೆಯಬಹುದು?

ಈ ಯೋಜನೆ ಲಾಭ ಪಡೆಯಲು ನೀವು ಭಾರತೀಯ ನಾಗರಿಕರಾಗಿರಬೇಕು. ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನು ಹೊಂದಿರುವ ಮನೆ ಹೊಂದಿರಬೇಕು. ಮಾನ್ಯ ಮತ್ತು ಸಕ್ರಿಯ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.

Business Idea For Women: ಕಡಿಮೆ ಬಜೆಟ್‌ನಲ್ಲಿ ಮನೆಯಿಂದಲೇ ಆರಂಭಿಸಿ ಈ 3 ಉದ್ಯೋ

ಅರ್ಜಿ ಸಲ್ಲಿಸುವುದು ಹೇಗೆ? 

ಆನ್ಲೈನ್ ನಲ್ಲಿ ನೀವು ಅರ್ಜಿ ಸಲ್ಲಿಸಬೇಕು. ಮೊದಲು, ಪ್ರಧಾನ ಮಂತ್ರಿ ಸೂರ್ಯ ಘರ್ ರಾಷ್ಟ್ರೀಯ ಪೋರ್ಟಲ್ಗೆ ಭೇಟಿ ನೀಡಿ. ನಿಮ್ಮ ರಾಜ್ಯ, DISCOM ವಿವರಗಳು, ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ನೋಂದಾಯಿಸಿ. ಲಾಗಿನ್ ಮಾಡಿ ಮತ್ತು ಮೇಲ್ಛಾವಣಿ ಸೌರಶಕ್ತಿಗಾಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಸ್ಥಳೀಯ DISCOM ನಿಂದ ಅನುಮೋದನೆ ನೀಡುತ್ತದೆ. ಇದರ ನಂತ್ರ ನೋಂದಾಯಿತ ಮಾರಾಟಗಾರರ ಮೂಲಕ ಸೌರಶಕ್ತಿ ವ್ಯವಸ್ಥೆಯನ್ನು ಸ್ಥಾಪಿಸಿ. ಅನುಸ್ಥಾಪನೆಯ ನಂತರ ನಿವ್ವಳ ಮೀಟರಿಂಗ್ಗೆ ಅರ್ಜಿ ಸಲ್ಲಿಸಿ. ಪರಿಶೀಲನೆ ಮತ್ತು ಕಾರ್ಯಾರಂಭದ ಅನುಮೋದನೆಯ ನಂತರ, ಬ್ಯಾಂಕ್ ವಿವರಗಳನ್ನು ಸಲ್ಲಿಸಿ. ಪರಿಶೀಲನೆಯ ನಂತರ, ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮಾನ್ಯ ಅನುಮೋದನೆ ಪಡೆದ 15 ದಿನಗಳಲ್ಲಿ ಸಬ್ಸಿಡಿ ವರ್ಗಾವಣೆಗಳನ್ನು ಸಾಮಾನ್ಯವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ.