2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!

ಇದ್ದ ಸಾವಿರದ ನೋಟನ್ನೇ ನಿಷೇಧಿಸಬೇಕೆಂಬ ಬೇಡಿಕೆ ಇದ್ದ ಬೆನ್ನಲ್ಲೇ 2000 ರೂ. ನೋಟು ಬಿಡುಗಡೆ ಮಾಡಿ, ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂಬ ಆರೋಪ ಆಗಲೇ ಕೇಳಿ ಬಂದಿತ್ತು. ಇದೀಗ ಮೋದಿಗೆ ಈ ಬಗ್ಗೆ ಒಲವು ಇರಲಿಲ್ಲ ಎಂಬುವುದು ಬಹಿರಂಗವಾಗಿದೆ. 

PM Modi was against releasing 2000 Rs note during demonetization

ನವದೆಹಲಿ (ಸೆ.18): 2016 ನ.8ರಂದು ನೋಟ್‌ ಬ್ಯಾನ್‌ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, 1000 ರು. ಬದಲು 2000 ರು. ಹೊಸ ನೋಟನ್ನು ಬಿಡುಗಡೆ ಮಾಡುವ ಕುರಿತು ಒಲವನ್ನು ಹೊಂದಿರಲಿಲ್ಲ. ಆದರೆ, ಸಮಾಲೋಚನೆಯ ಬಳಿಕ ಈ ಸಲಹೆಯನ್ನು ಒಪ್ಪಿಕೊಂಡಿದ್ದರು ಎಂಬ ಸಂಗತಿಯನ್ನು ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಬಹಿರಂಗ ಪಡಿಸಿದ್ದಾರೆ.

ಮೋದಿ ಅವರ ಜನ್ಮ ದಿನದ ನಿಮಿತ್ತ ಆಂಗ್ಲ ಪತ್ರಿಕೆಯೊಂದಕ್ಕೆ ಲೇಖನ ಬರೆದಿರುವ ಅವರು ನೋಟು ಅಪನಗದೀಕರಣದ ಸಿದ್ಧತೆಯ ವೇಳೆ 1000 ರು. ನೋಟಿನ ಬದಲು 2000 ರು. ನೋಟನ್ನು ಹೊರತರುವುದಕ್ಕೆ ಮೋದಿ ಅಷ್ಟೇನು ಒಲವು ಹೊಂದಿರಲಿಲ್ಲ. ಆದರೆ, ಹಣದ ಹರಿವು ಹೆಚ್ಚಿಸಲು 2000 ನೋಟು ಮುದ್ರಣ ಅನಿವಾರ್ಯ ಎಂಬ ಸಲಹೆ ನೀಡಲಾಯಿತು. ಹೀಗಾಗಿ ಈ ಸಲಹೆಯನ್ನು ಮೋದಿ ಒಪ್ಪಿಕೊಂಡಿದ್ದರು. ಬಳಿಕ ಈ ನಿರ್ಧಾರದ ಬಗ್ಗೆ ಹಲವು ಟೀಕೆ ಎದುರಾದರೂ, ಅದರ ಎಲ್ಲಾ ಹೊಣೆಯನ್ನು ಮೋದಿ ಸ್ವತಃ ತಾವೇ ಹೊತ್ತುಕೊಂಡದೇ ಹೊರತೂ ಯಾರನ್ನೂ ದೂಷಿಸಲಿಲ್ಲ. ಎಂದು ಹೇಳಿದ್ದಾರೆ.

ಎರಡು ವರ್ಷ ಮೋದಿ ಹಿಮಾಲಯದಲ್ಲಿ ಏನು ಮಾಡಿದ್ದರು ಗೊತ್ತಾ?

ಕೆಲವೊಂದು ವಿಷಯಗಳ ಬಗ್ಗೆ ತಮ್ಮ ಪೂರ್ಣ ಸಮ್ಮತಿ ಇಲ್ಲದ ಹೊರತಾಗಿಯೂ, ಜೊತೆಗಾರರ ಸಲಹೆಯನ್ನು ಒಪ್ಪಿಕೊಂಡು ಅದನ್ನು ಮಾನ್ಯ ಮಾಡುವ ಗುಣ ಮೋದಿ ಅವರಲ್ಲಿದೆ. ಇಂಥ ಹಲವು ಉದಾಹರಣೆಗಳಿವೆ ಎಂದು ತಿಳಿಸಿದ್ದಾರೆ.

PM Modi was against releasing 2000 Rs note during demonetization

 

Latest Videos
Follow Us:
Download App:
  • android
  • ios