ಮೋದಿ ವಾರಾಣಸಿ ಕಚೇರಿ ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ!|  ನಾಲ್ವರ ಬಂಧನ

ವಾರಾಣಸಿ(ಡಿ.19): ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿ ಲೋಕಸಭಾ ಕ್ಷೇತ್ರದ ಕಚೇರಿಯನ್ನು ಕಿಡಿಗೇಡಿಗಳು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರು ವಾರಾಣಸಿಯ ಜವಾಹರ ನಗರದಲ್ಲಿರುವ ‘ಜನಸಂಪರ್ಕ ಕಾರ್ಯಾಲಯ’ವನ್ನು ಒಎಲ್‌ಎಕ್ಸ್‌ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿಟ್ಟಿರುವುದಾಗಿ ಪೋಸ್ಟ್‌ ಮಾಡಿದ್ದರು. ಅದು ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ ಎಂದು ವಾರಾಣಸಿ ಎಸ್‌ಎಸ್‌ಪಿ ಅಮಿತ್‌ ಪಾಠಕ್‌ ತಿಳಿಸಿದ್ದಾರೆ.

ಒಎಲ್‌ಎಕ್ಸ್‌ ಪೋಸ್ಟ್‌ನಲ್ಲಿ ಇವರು ಸಂಸದರ ಕಚೇರಿಯ ಫೋಟೋಗಳನ್ನೂ ಅಪ್‌ಲೋಡ್‌ ಮಾಡಿದ್ದರು. ಬಂಧಿತರಲ್ಲಿ ಫೋಟೋ ಅಪ್‌ಲೋಡ್‌ ಮಾಡಿದಾತನೂ ಸೇರಿದ್ದಾನೆ. ಮೋದಿ ಅವರು 2014ರಲ್ಲಿ ಮೊದಲ ಬಾರಿ ಹಾಗೂ 2019ರಲ್ಲಿ ಎರಡನೇ ಬಾರಿ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.