ಕೊರೋನಾ ಮಧ್ಯೆ ಆರ್ಥಿಕತೆಗೆ ಟಾನಿಕ್ ನೀಡುವ ಸವಾಲು| ನಿರ್ಮಲಾ ಸೀತಾರಾಮನ್ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ| ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ
ನವದೆಹಲಿ(ಫೆ. 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೊರೋನಾದಿಂದಾಗಿ ನಲುಗಿದ್ದ ದೇಶದ ಆರ್ಥಿಕತೆಗೆ ಬಜೆಟ್ ಮೂಲಕ ಟಾನಿಕ್ ನೀಡಿರುವ ನಿರ್ಮಲಾ ಲೆಕ್ಕಾಚಾರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
"
ಕೊರೋನಾ ಸೇರಿ ಪ್ರಸ್ತುತ ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ. ಬಜೆಟ್ ಮಂಡಿಸುವ ಸವಾಲು ಸ್ವೀಕರಿಸಿ, ಅದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ನಿಜಕ್ಕೂ ಅಭಿನಂನೆಗೆ ಅರ್ಹ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Speaking on #AatmanirbharBharatKaBudget. Watch. https://t.co/T05iiEjKLK
— Narendra Modi (@narendramodi) February 1, 2021
ಈ ಬಜೆಟ್ ಆತ್ಮನಿರ್ಭರ್ ಭಾರತದತ್ತ ದೃಢ ಹೆಜ್ಜೆಯನ್ನಿಟ್ಟಿದ್ದು, ಭಾರತೀಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಕ್ಕೆ ನಿರ್ಮಲಾ ಸೀತಾರಾಮನ್ ತಂಡಕ್ಕೆ ಅಭಿನಂದನೆ. ಕೊರೋನಾನಾ ಹಾವಳಿ ನಡುವೆ ದೇಶದ ಅರ್ಥವ್ಯವಸ್ಥೆಯನ್ನು ನಿಗದಿತ ಮಾರ್ಗದಲ್ಲಿ ಮುನ್ನಡೆಸುವುದು ಸುಲಭದ ವಿಚಾರವಲ್ಲ. ಹೀಗಿದ್ದರೂ ಈ ಬಾರಿಯ ಬಜೆಟ್ ಈ ನಿಟ್ಟಿನಲ್ಲಿ ನಮ್ಮನ್ನು ಪ್ರೆರೇಪಿಸುವ ಕೆಲಸ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಷ್ಟ ಎದುರಿಸುತ್ತಿರುವ ಉದ್ಯಮಗಳನ್ನು ಮೇಲೆಕ್ಕೆತ್ತಲು ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಈ ಬಜೆಟ್ ಈ ಹಿಂದೆ ಘೋಷಣೆ ಮಾಡಲಾದ ಪ್ಯಾಕೇಜ್‌ಗೆ ಪೂರಕವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 1, 2021, 4:47 PM IST