2.8 ಲಕ್ಷ ಮಂದಿಗೆ ಉದ್ಯೋಗ, ರಾಜ್ಯಗಳ ಆದಾಯ ಹೆಚ್ಚಿಸಲು ಮೋದಿ ಮೆಗಾ ಪ್ಲಾನ್!

 ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ದೇಶವನ್ನು ಮೇಲಕ್ಕೆತ್ತಲು ಕೇಂದ್ರದ ಮಹತ್ವದ ಹೆಜ್ಜೆ| ಖಾಸಗಿ ಕ್ಷೇತ್ರದಲ್ಲಿ 41 ಕಲ್ಲಿದ್ದಲು ಗಣಿಯ ಹರಾಜು ಪ್ರಕ್ರಿಯೆ ಆರಂಭ| ದೇಶದ ಆರ್ಥಿಕತೆಗೆ ಮತ್ತಷ್ಟು ವೇಗ ಕೊಡುವ ಭರವಸೆ

PM Modi launches auction of coal mines says India will turn Covid crisis into opportunity

ನವದೆಹಲಿ(ಜೂ.18): ಮೋದಿ ಸರ್ಕಾರ ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ದೇಶವನ್ನು ಮೇಲಕ್ಕೆತ್ತಲು ಹಾಗೂ ಭಾರತವನ್ನು ಆತ್ಮನಿರ್ಭರವಾಗಿಸಲು ಭಾರೀ ಯತ್ನ ನಡೆಸುತ್ತಿದೆ. ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಾಸಗಿ ಕ್ಷೇತ್ರದಲ್ಲಿ 41 ಕಲ್ಲಿದ್ದಲು ಗಣಿಯ ಹರಾಜು ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪಿಎಂ ಮೋದಿ ಕಲ್ಲಿದ್ದಲು ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಹಾಗೂ ಇಲ್ಲಿ ಆಗುವ ಹೂಡಿಕೆಯಿಂದ ಜನರ ಜೀವನದಲ್ಲಿ ಭಾರೀ ಬದಲಾವಣೆ ತರಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಇದು ಮತ್ತಷ್ಟು ವೇಗ ಕೊಡಲಿದೆ ಎಂದಿದ್ದಾರೆ.

ಮೋದಿ ಸರ್ಕಾರ ಸದ್ಯ ದೇಶದ ಕಲ್ಲಿದ್ದಲು ಕ್ಷೇತ್ರವನ್ನು ಸಂಪೂರ್ವಾಗಿ ಆತ್ಮನಿರ್ಭರಗೊಳಿಸುವ ಯತ್ನದಲ್ಲಿದೆ. ಇನ್ನು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಇದು ಮಹತ್ವಪೂರ್ಣ ಹೆಜ್ಜೆಯಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಪಿಎಂ ಮೋದಿ ತಮ್ಮ ಭಾಷಣದಲ್ಲಿ ಭಾರತ ಕಲ್ಲಿದ್ದಲು ಹಾಗೂ ಗಣಿಗಾರಿಕೆ ಕ್ಷೇತ್ರದಲ್ಲಿ ಸ್ಪರ್ಧೆ ಹಾಗೂ ಹೂಡಿಕೆ ಹೊರತುಪಡಿಸಿ ಸಹಭಾಗಿತ್ವ ಹಾಗೂ ತಂತ್ರಜ್ಞಾನಕ್ಕಾಗಿ ಸಂಪೂರ್ಣವಾಗಿ ತೆರೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ. ಈ ಸುಧಾರಣೆಗಳ ಬಳಿಕ ಇನ್ನು ಕಲ್ಲಿದ್ದಲು ಉತ್ಪಾದನೆ ಹಾಗೂ ಸಂಪೂರ್ಣ ಕ್ಷೇತ್ರ ಒಂದು ರೀತಿಯಲ್ಲಿ ಆತ್ಮ ನಿರ್ಭರವಾಗಲಿದೆ ಎಂದಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಪಾರದರ್ಶಕತೆ ಇರಲಿಲ್ಲ

ಇನ್ನು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನೇಕ ಕಲ್ಲಿದ್ದಲು ಹಗರಣಗಳು ನಡೆದಿದ್ದು, ಇದು ಕಲ್ಲಿದ್ದಲು ಕ್ಷೇತ್ರದಲ್ಲಿ ಬಹಳ ಕೆಟ್ಟ ಪರಿಣಾಮ ಬೀರಿದೆ. ಈ ಸಂಬಂಧ ಮಾತನಾಡಿದ ಪಿಎಂ ಮೋದಿ  'ನಮ್ಮ ದೇಶದಲ್ಲಿ ದಶಕಗಳಿಂದ ಕಲ್ಲಿದ್ದಲು ಕ್ಷೇತ್ರವನ್ನು ಸ್ಪರ್ಧೆಯಿಂದ ಹೊರಗಿಡಲಾಗಿತ್ತು. ಪಾರದರ್ಶಕತೆ ಇರದೇ ಇದ್ದುದೇ ಬಹುದೊಡ್ಡ ಸಮಸ್ಯೆಯಾಗಿತ್ತು. ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮುಚ್ಚಲಾಗಿದ್ದ ಕಲ್ಲಿದ್ದಲು ಗಣಿಗಳನ್ನು ಲೂಟಿ ಮಾಡುತ್ತಿತ್ತು ಹಾಗೂ ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ದೇಶದಲ್ಲಿ ಅಪಾರ ಪ್ರಮಾಣದ ಕಲ್ಲಿದ್ದಲಿನ ಭಂಡಾರವಿದೆ' ಎಂದಿದ್ದಾರೆ.

ಕಲ್ಲಿದ್ದಲು ಕ್ಷೇತ್ರ ಅಭಿವೃದ್ಧಿಯಿಂದ ಆದಿವಾಸಿಗಳಿಗೆ ಲಾಭ

ಪಿಎಂ ಮೋದಿ ತಮ್ಮ ಮಾತಿನ ನಡುವೆ 'ನಾವು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಿದರೆ ಪವರ್ ಜನರೇಶನ್ ಜೊತೆಗೆ ಸ್ಟೀಲ್, ಅಲುಮೀನಿಯಂ, ಫರ್ಟಿಲೈಸರ್, ಸಿಮೆಂಟ್‌ನಂತಹ ಇತರ ಕ್ಷೇತ್ರಗಳಲ್ಲಿ ಉತ್ಪಾದನೆ ಮೇಲೂ ಧನಾತ್ಮಕ ಪ್ರಭಾವ ಬೀರುತ್ತದೆ. ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಬಡ ವರ್ಗ ಹಾಗೂ ಆದಿವಾಸಿ ಸಹೋದರ ಸಹೋದರಿಯರ ಜೀವನ ಉತ್ತಮಗೊಳಿಸುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಲಿದೆ' ಎಂದಿದ್ದಾರೆ.

ಇನ್ನು 2014ರ ಬಳಿಕ ದೇಶದಲ್ಲಿದ್ದ ಪರಿಸ್ಥಿತಿಯನ್ನು ಬದಲಾಯಿಸಲು ಒಂದಾದ ಬಳಿಕ ಮತ್ತೊಂದರಂತೆ ಹಲವಾರು ಹೆಜ್ಜೆಗಳನ್ನು ಇರಿಸಲಾಗಿದೆ. ಕಲ್ಲಿದ್ದಲು ಲಿಂಕೇಜ್ ಬಗ್ಗೆ ಯಾರೂ ಯೋಚಿಸರಲಿಲ್ಲವೋ ಅದನ್ನು ನಾವು ಮಾಡಿ ತೋರಿಸಿದ್ದೇವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios