ಏನೇ ಅನ್ನಿ ಹಣ ಉಳಿಸೋದೊಂದು ಕಲೆ, ಕ್ರೆಡಿಟ್ ಕಾರ್ಡ್ ಬಳಕೆ ಹೇಗ್ ಮಾಡಬಹುದು?

ಕ್ರೆಡಿಟ್ ಕಾರ್ಡ್ ಇದ್ರೆ ಸಾಲೋದಿಲ್ಲ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದಿರಬೇಕು. ಕೆಲವರು ಬೇಕಾದ ಜಾಗದಲ್ಲಿ ಕ್ರೆಡಿಟ್ ಕಾರ್ಡ್ ಬಳಸದೆ ನಷ್ಟ ಮಾಡಿಕೊಳ್ತಾರೆ. ಕೆಲ ಪ್ರದೇಶದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿದ್ರೆ ಲಾಭ ಹೆಚ್ಚು. 
 

Places Where Using Credit Card Is Beneficial

ಈಗ ಬ್ಯಾಂಕ್ ಮುಂದೆ ಕ್ಯೂ ಇರೋದಿಲ್ಲ. ಎಟಿಎಂ ಮುಂದೆ ನಿಲ್ಲುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದೆ. ಯಾಕೆಂದ್ರೆ ಇದು ಡಿಜಿಟಲ್ ಯುಗ. ಜನರು ಆನ್ಲೈನ್ ಪೇಮೆಂಟ್ ಜಾಸ್ತಿ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಕೈನಲ್ಲೂ ಕ್ರೆಡಿಟ್ ಕಾರ್ಟ್ ಇದ್ದೇ ಇರುತ್ತೆ. ಫೋನ್ ಪೇ, ಗೂಗಲ್ ಪೇನಂತಹ ಡಿಜಿಟಲ್ ಪಾವತಿ ಸೌಲಭ್ಯವನ್ನು ಜನರು ಹೊಂದಿರುತ್ತಾರೆ. ಡಿಜಿಟಲ್ ಪೇಮೆಂಟ್ ಮಾಡುವ ಜನರು ಎಲ್ಲಿ ಯಾವ ರೀತಿ ಪೇಮೆಂಟ್ ಮಾಡ್ಬೇಕು ಎಂಬುದನ್ನು ತಿಳಿದಿರಬೇಕು. ಯಾಕೆಂದ್ರೆ ಕೆಲವು ಕಡೆ ಕ್ರೆಡಿಟ್ ಕಾರ್ಡ್ ನಲ್ಲಿ ಪೇಮೆಂಟ್ ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದಾಗ ಕ್ಯಾಶ್‌ಬ್ಯಾಕ್‌ನಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇಂದು ನಾವು, ಕ್ರೆಡಿಟ್ ಕಾರ್ಡ್ ಮೂಲಕ ನೀವು ಎಲ್ಲಿ ಪಾವತಿ ಮಾಡಬೇಕು ಎಂಬುದನ್ನು ಹೇಳ್ತೇವೆ. 

ಕ್ರೆಡಿಟ್ ಕಾರ್ಡ್ (Credit Card) ಗಳನ್ನು ಇಲ್ಲಿ ಬಳಸಿ : 

ಆನ್‌ಲೈನ್‌ (Online) ಶಾಪಿಂಗ್ ವೇಳೆ ಮಾಡಿ ಕ್ರೆಡಿಟ್ ಕಾರ್ಡ್ ಪಾವತಿ :  ಆನ್‌ಲೈನ್‌ನಲ್ಲಿ ಶಾಪಿಂಗ್ (Shopping) ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಅನೇಕ ಪ್ರಯೋಜನ (Benefit) ಗಳಿವೆ. ಬಹುತೇಕ ಎಲ್ಲ ಪ್ಲಾಟ್ ಫಾರ್ಮ್ ನಲ್ಲಿಯೂ ಕ್ರೆಡಿಟ್ ಕಾರ್ಡ್ ಪಾವತಿ ಅವಕಾಶವಿರುತ್ತದೆ. ಅಲ್ಲಿ ಪಾವತಿ ಮೇಲೆ ಶೇಕಡಾವಾರು ರಿಯಾಯಿತಿ ಲಭ್ಯವಿರುತ್ತದೆ. ಒಂದ್ವೇಲೆ ನೀವು ನಗದು ರೂಪದಲ್ಲಿ ಹಣ ಪಾವತಿಸಿದರೆ ಯಾವುದೇ ರೀತಿಯ ರಿಯಾಯಿತಿ ನಿಮಗೆ ಸಿಗುವುದಿಲ್ಲ. ನೀವು ಆನ್ಲೈನ್ ಪ್ಲಾರ್ಟ್ ಫಾರ್ಮ್ ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಹಲವಾರು ಬಾರಿ ಹಣ ಪಾವತಿಸಿದರೆ ಕ್ಯಾಶ್‌ಬ್ಯಾಕ್ ಸೌಲಭ್ಯ ಕೂಡ ನಿಮಗೆ ಸಿಗುತ್ತದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಯಾವುದೇ ವಸ್ತು ಆರ್ಡರ್ ಮಾಡುವಾಗ್ಲೂ ನೀವು ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡುವುದು ಒಳ್ಳೆಯದು.

ಎಲೆಕ್ಟ್ರಾನಿಕ್ಸ್ ಸರಕು ಖರೀದಿ ವೇಳೆ ಕ್ರೆಡಿಟ್ ಕಾರ್ಡ್ ಬಳಸಿ : ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಪಾವತಿ ಮಾಡುವುದು ಕಷ್ಟ. ಹಾಗೆಯೇ  ಕ್ರೆಡಿಟ್ ಕಾರ್ಡ್ ಮೂಲಕ ನೀವು ಹಣ ಪಾವತಿ ಮಾಡಿದ್ರೆ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಾಗುತ್ತದೆ. ಅನೇಕ ಶೋರೂಮ್‌ಗಳು ಕಾರ್ಡ್ ಪಾವತಿಗಳ ಮೇಲೆ ಶೇಕಡಾ 5 ರಿಂದ 10 ರಷ್ಟು ರಿಯಾಯಿತಿಯನ್ನು ಕೂಡ ನೀಡುತ್ತವೆ.  ಅಲ್ಲದೆ ಕ್ರೆಡಿಟ್ ಕಾರ್ಡ್ ನಲ್ಲಿ ಪಾವತಿ ಮಾಡುವವರಿಗೆ ಕೆಲವು ಕಡೆ ಹೆಚ್ಚಿನ ವಾರಂಟಿ ನೀಡಲಾಗುತ್ತದೆ.  

ಪ್ರಯಾಣದ (Travel) ವೇಳೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ : ವಿಮಾನ ಟಿಕೆಟ್ ನಿಂದ ಹಿಡಿದು ಬಸ್ ಟಿಕೆಟ್ ವರೆಗೆ ಎಲ್ಲ ರೀತಿಯ ಟಿಕೆಟ್ ಬುಕ್ ಮಾಡುವ ವೇಳೆ ನೀವು ಕ್ರೆಡಿಟ್ ಕಾರ್ಟ್ ಬಳಸಬಹುದು. ಟಿಕೆಟ್ ಬುಕ್ ಮಾಡುವ ವೇಳೆ ಕೆಲವೊಂದು ರಿಯಾಯಿತಿ ನಿಮಗೆ ಸಿಗುತ್ತದೆ. ಓಲಾ ಮತ್ತು ಉಬರ್‌ನಂತಹ ಕಂಪನಿಗಳು ಕೂಡ ಆನ್ಲೈನ್ ಪಾವತಿಗೆ ರಿಯಾಯಿತಿ ನೀಡುತ್ತವೆ.   

Personal Finance : ಖರ್ಚು ಮಾಡಿದ್ದು ಸಾಕು, ನವೆಂಬರ್ ನಲ್ಲಿ ಉಳಿತಾಯ ಶುರು ಮಾಡಿ..

ಮಾಲ್ ನಲ್ಲಿ ಶಾಪಿಂಗ್ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿ : ಮಾಲ್ ಗಳಲ್ಲಿ ಶಾಪಿಂಗ್ ಮಾಡುವ ವೇಳೆ ಕೂಡ ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ಒಳ್ಳೆಯದು. ಮಾಲ್ ನಲ್ಲಿ ಅನೇಕ ಕೊಡುಗೆಗಳಿರುತ್ತವೆ. ಕ್ರೆಡಿಟ್ ಕಾರ್ಡ್ ಮೇಲೆ ರಿಯಾಯಿತಿ ನಿಮಗೆ ಸಿಗುತ್ತದೆ. 5000 ರೂಪಾಯಿ ಮೌಲ್ಯದ ಸರಕುಗಳನ್ನು ಖರೀದಿಸಿ ಕಾರ್ಡ್ ಮೂಲಕ ಪಾವತಿಸಿದ್ರೆ 2000 ರೂಪಾಯಿ ಕಡಿತವಾಗುವಂತಹ ಅನೇಕ  ಆಫರ್‌ ಲಭ್ಯವಿರುತ್ತದೆ.   

ಎಸ್ ಬಿಐಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗುತ್ತೆ ಪಿಂಚಣಿ!

ಹೋಟೆಲ್‌ನಲ್ಲೂ ಕಾರ್ಡ್ ಬಳಕೆ ಬೆಸ್ಟ್ : ಹೊಟೇಲ್ ಬಿಲ್ ಗಳನ್ನು ಕೂಡ ನೀವು ಕ್ರೆಡಿಟ್ ಕಾರ್ಡ್ ಮೂಲಕವೇ ಪಾವತಿ ಮಾಡಿ. ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡಿದ್ರೆ ಕೆಲ ಹೋಟೆಲ್ ಗಳು ಕ್ಯಾಶ್‌ಬ್ಯಾಕ್ ಪಾಯಿಂಟ್‌ ನೀಡುತ್ತವೆ. 

Latest Videos
Follow Us:
Download App:
  • android
  • ios