ಪಾಕ್ ವಶದಲ್ಲಿದ್ದ ಅಭಿನಂದನ್ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದರೆ. ವೀರ ಯೋಧ ತಾಯ್ನಾಡಿಗೆ ಮರಳುತ್ತಿದ್ದಂತೆಯೇ ಭಿನಂದನ್ ಮೀಸೆ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಇಷ್ಟೇ ಅಲ್ಲದೇ ಬಹುತೇಕರು ತಮ್ಮ ಮಕ್ಕಳಿಗೆ ಅಭಿನಂದನ್/ಅಭಿನಂದಾನ ಎಂದು ಹೆಸರಿಡುತ್ತಿದ್ದಾರೆ. ಹೀಗಿರುವಾಗ ಅಭಿನಂದನ್ ಹೆಸರಿರುವವರಿಗೆಲ್ಲಾ ಪಿಜ್ಜಾ ಹಟ್ ಬಿಗ್ ಆಫರ್ ನೀಡಿದೆ. 

ನವದೆಹಲಿ[ಮಾ.05]: ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದಿರುವ ವಾಯುಪಡೆಯ ಯೋಧ ಅಭಿನಂದನ್‌ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಖಾದ್ಯ ಕಂಪನಿ ಪಿಜ್ಜಾ ಹಟ್‌ ಆಫರ್‌ವೊಂದರನ್ನು ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇನೆಂದರೆ, ಅಭಿನಂದನ್‌ ಎಂಬ ಹೆಸರು ಹೆಸರು ಇರುವವರಿಗೆಲ್ಲಾ ಉಚಿತ ಪಿಜ್ಜಾ ಹಂಚಿದೆ. ಸೋಮವಾರ ಒಂದು ದಿನದ ಮಟ್ಟಿಗೆ ಆಫರ್‌ ನೀಡಲಾಗಿತ್ತು. ಯೋಧನ ಬೆಂಬಲಿಸಿ ಈ ಆಫರ್‌ ನೀಡಿದ್ದಾಗಿ ಪಿಜ್ಜಾ ಹಟ್‌ ಕಂಪನಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.

Scroll to load tweet…

ಈಗಾಗಲೇ ಅಭಿನಂದನ್ ಇಟ್ಟುಕೊಂಡಿರುವ ಮೀಸೆ ಟ್ರೆಂಡ್ ಆಗಿದೆ. ಹೀಗಿರುವಾಗ ಪಿಜ್ಜಾ ಹಟ್ ನ ಈ ಆಫರ್ ನಿಂದ ಅಭಿನಂದನ್ ಹೆಸೆಉ ಕೂಡಾ ಟ್ರೆಂಡ್ ಆಗುವುದರಲ್ಲಿ ಅನುಮಾನವಿಲ್ಲ