EPF Withdraw: ಇಪಿಎಫ್ ಹಣ ವಿತ್ ಡ್ರಾ ಮಾಡೋದು ಈಗ ಸುಲಭ; ಆನ್ ಲೈನ್ ನಲ್ಲಿ ನೀವೇ ಈ ಹಂತಗಳನ್ನು ಪೂರ್ಣಗೊಳಿಸಿದ್ರೆ ಸಾಕು

ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋಕೆ ಈಗ ಮುಂಚಿನಂತೆ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಬೇಕಾಗಿಲ್ಲ.ತಿಂಗಳುಗಟ್ಟಲೆ ಕಾಯಬೇಕಾಗಿಯೂ ಇಲ್ಲ. ಆನ್ ಲೈನ್ ನಲ್ಲಿ ಯುಎಎನ್ ಪೋರ್ಟಲ್ ಗೆ ಭೇಟಿ ನೀಡಿ ನೀವೇ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ. 
 

PF Withdrawal How To Withdraw PF Online Step By Step Guide Here

Business Desk:ನೀವು ಈಗ ನಿಮ್ಮ ನೌಕರರ ಭವಿಷ್ಯ ನಿಧಿ (EPF) ಖಾತೆಯಿಂದ ಹಣ ಹಿಂಪಡೆಯಲು (withdraw) ಇನ್ನೊಬ್ಬರಿಗೆ ದುಬಾಲು ಬೀಳಬೇಕಾದ ಅಗತ್ಯವಿಲ್ಲ. ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿಯೂ ಇಲ್ಲ. ಆನ್ ಲೈನ್ ನಲ್ಲೇ ಹಣವನ್ನು ವಿತ್ ಡ್ರಾ ಮಾಡಬಹುದು. ಹೌದು, ಇಪಿಎಫ್ ಚಂದಾದಾರರು ಈಗ ಇಪಿಎಫ್ ಹಣ ಪಡೆಯಲು ಮೊದಲಿನಂತೆ ಕಷ್ಟಪಡಬೇಕಾಗಿಲ್ಲ. ಹಾಗಾದ್ರೆ ಇಪಿಎಫ್ ಖಾತೆಯಿಂದ ಆನ್ ಲೈನ್ ಮೂಲಕ ಹಣ ಹಿಂಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.

ಯಾವಾಗ ಹಣ ವಿತ್ ಡ್ರಾ ಮಾಡಬಹುದು?
ಉದ್ಯೋಗಿಗಳು ನಿವೃತ್ತಿಯ ಬಳಿಕ ತಮ್ಮ ಇಪಿಎಫ್ ಖಾತೆಯಲ್ಲಿರುವ ಉಳಿತಾಯದ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಆದರೆ, ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಪಿಎಫ್ ಖಾತೆಯಲ್ಲಿರುವ ಸ್ವಲ್ಪ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಉದ್ಯೋಗಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಅರ್ಹನಾಗಿರುತ್ತಾನೆ. ಆದ್ರೆ ಆತ ಹೊಸ ಉದ್ಯೋಗಕ್ಕೆ ಇದೇ ಪಿಎಫ್‌ ಖಾತೆಯನ್ನು ವರ್ಗಾಯಿಸಿರಬಾರದಷ್ಟೆ. ಬೇರೆ ಉದ್ಯೋಗಕ್ಕೆ ಸೇರದಿರೋರು, ಹೊಸ ಸಂಸ್ಥೆಯಲ್ಲಿ ಹೊಸ ಪಿಎಫ್‌ ಖಾತೆ ತೆರೆದಿರೋರು ಹಾಗೂ ನಿವೃತ್ತಿಯಾದವರು ಎರಡು ತಿಂಗಳ ಬಳಿಕ ಪಿಎಫ್‌ ಖಾತೆಯಲ್ಲಿರೋ ಹಣವನ್ನು ಪಡೆಯಬಹುದು. 

Fixed Deposit: ಎಫ್ ಡಿ ಸುರಕ್ಷಿತ ಹೂಡಿಕೆಯೇನೋ ನಿಜ, ಆದ್ರೆ ರಿಟರ್ನ್ಸ್ ಕಥೆಯೇನು? ಇದರ ಲಾಭ-ನಷ್ಟಗಳ ಲೆಕ್ಕಾಚಾರ ಇಲ್ಲಿದೆ ನೋಡಿ

ವಿತ್ ಡ್ರಾ ಮಾಡೋ ಮುನ್ನ ಈ ವಿಷಯಗಳನ್ನು ಗಮನಿಸಿ
ಯುಎಎನ್ ಜೊತೆಗೆ ಆಧಾರ್ ಲಿಂಕ್
ಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಯುಎಎನ್ ಗೆ ಆಧಾರ್ ಲಿಂಕ್ ಮಾಡೋದು ಅತ್ಯಗತ್ಯ.

ಕೆವೈಸಿ ಪ್ರಕ್ರಿಯೆ
ಸೇವೆಯ ಮೊದಲ 5 ವರ್ಷದೊಳಗೆ ಪಿಎಫ್ ನಿಂದ ಹಣ ವಿತ್ ಡ್ರಾ ಮಾಡಲು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದನ್ನು ಸರ್ಕಾರ ಕಡ್ಡಾಯ ಮಾಡಿದೆ. ಕೆವೈಸಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನಿಮ್ಮ ಪಿಪಿಎಫ್ ಖಾತೆಯ ಸ್ಥಿತಿ 'ದೃಢೀಕರಿಸಲಾಗಿದೆ' ಎಂದು ಬದಲಾಯಿಸಲಾಗುತ್ತದೆ.

ಆನ್ ಲೈನ್ ವಿತ್ ಡ್ರಾ ಹೇಗೆ?
*ಮೊದಲಿಗೆ ಯುಎಎನ್ ಪೋರ್ಟಲ್  https://unifiedportal-mem.epfindia.gov.in/memberinterface/ ಲಾಗಿ ಇನ್ ಆಗಿ. 
*ನಿಮ್ಮ ಯುಎಎನ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿ ಇನ್ ಆಗಿ. ಆ ಬಳಿಕ ದೃಢೀಕರಣಕ್ಕೆ ಕ್ಯಾಪ್ಚಾ ನಮೂದಿಸಿ.
*ಈಗ ‘Online Services’ ಮೇಲೆ ಕ್ಲಿಕ್ ಮಾಡಿ ಹಾಗೂ ಕ್ಲೇಮ್ (Claim) ಆಯ್ಕೆ ಆರಿಸಿಕೊಳ್ಳಿ. 
* ಆ ಬಳಿಕ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ. ‘Verify’ ಮೇಲೆ ಕ್ಲಿಕ್ ಮಾಡಿ.
*ಈಗ ‘Yes’ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಮುಂದುವರಿಯಿರಿ.
*‘Proceed for Online Claim’ ಮೇಲೆ ಕ್ಲಿಕ್ ಮಾಡಿ.

ವಿಪ್ರೋ ಸಿಇಒಗೆ .79.8 ಕೋಟಿ ಭರ್ಜರಿ ವೇತನ: ಐಟಿ ವಲಯದಲ್ಲೇ ಹೆಚ್ಚು ಸಂಬಳ

*ಈಗ ಕ್ಲೇಮ್ ಫಾರ್ಮ್ ನಲ್ಲಿ 'I Want To Apply For’ ಅಡಿಯಲ್ಲಿ ಯಾವ ಕಾರಣಕ್ಕೆ ಕ್ಲೇಮ್ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ. 
*ಈಗ ನಿಮ್ಮ ಹಣ ವಿತ್ ಡ್ರಾ ಮಾಡಲು  ‘PF Advance (Form 31)’ಆರಿಸಿ. ಬಳಿಕ ಈ ರೀತಿ ಹಣ ಹಿಂಪಡೆಯೋ ಉದ್ದೇಶ, ಎಷ್ಟು ಹಣ ಬೇಕಾಗಿದೆ ಹಾಗೂ ನಿಮ್ಮ ವಿಳಾಸ ನೂದಿಸಬೇಕು.
*ಈಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಲ್ಲಿಸಿ.
*ಅಗತ್ಯ ದಾಖಲೆಗಳನ್ನು ಕೋರಿದ್ರೆ ಅದನ್ನು ಸಲ್ಲಿಕೆ ಮಾಡಿ.
ಉದ್ಯೋಗದಾತ ಸಂಸ್ಥೆ ವಿತ್ ಡ್ರಾ ಮನವಿಗೆ ಅನುಮೋದನೆ ನೀಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಉದ್ಯೋಗದಾತ ಸಂಸ್ಥೆ ಅನುಮೋದನೆ ನೀಡಿದ ಬಳಿಕ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಆಗಲು 15-20 ದಿನಗಳು ಬೇಕಾಗುತ್ತವೆ. 


 

Latest Videos
Follow Us:
Download App:
  • android
  • ios