Fixed Deposit: ಎಫ್ ಡಿ ಸುರಕ್ಷಿತ ಹೂಡಿಕೆಯೇನೋ ನಿಜ, ಆದ್ರೆ ರಿಟರ್ನ್ಸ್ ಕಥೆಯೇನು? ಇದರ ಲಾಭ-ನಷ್ಟಗಳ ಲೆಕ್ಕಾಚಾರ ಇಲ್ಲಿದೆ ನೋಡಿ
ಹೂಡಿಕೆಗೆ ಇಂದು ಹತ್ತಾರು ಮಾರ್ಗಗಳಿವೆ. ಆದ್ರೆ ವಯಸ್ಸಾದವರು,ರಿಸ್ಕ್ ಬೇಡವೇ ಬೇಡ ಅನ್ನೋರ ಮೆಚ್ಚಿನ ಆಯ್ಕೆ ಸ್ಥಿರ ಠೇವಣಿ(FD). ಬ್ಯಾಂಕಿನಲ್ಲಿ ಎಫ್ ಡಿಯಿಟ್ಟು ನೆಮ್ಮದಿಯ ನಿವೃತ್ತಿ ಜೀವನ ನಡೆಸುವ ಹಿರಿಯ ಜೀವಗಳಿಗೆ ನಮ್ಮಲ್ಲಿ ಕೊರತೆಯಿಲ್ಲ.ಆದ್ರೆ ಈ ಎಫ್ ಡಿಯಲ್ಲಿನ ಹೂಡಿಕೆ ಎಷ್ಟು ಲಾಭದಾಯಕ? ಇಲ್ಲಿದೆ ಮಾಹಿತಿ.
Business Desk:ಭವಿಷ್ಯದ ಹೂಡಿಕೆಗೆ ಇಂದಿಗೂ ಭಾರತದಲ್ಲಿ ಮಧ್ಯಮ ವರ್ಗದವರು ಹಾಗೂ ಹಿರಿಯ ನಾಗರಿಕರು (Senior Citizen) ಹೆಚ್ಚಾಗಿ ನೆಚ್ಚಿಕೊಳ್ಳುವುದು ಸ್ಥಿರ ಠೇವಣಿಯನ್ನೇ (FD).ಇಂದು ನಿವೃತ್ತಿ ಜೀವನಕ್ಕೆ (Retired life) ಅಥವಾ ಭವಿಷ್ಯದ ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ. ಆದರೂ ನಿಶ್ಚಿತ ಮೊತ್ತದ ರಿಟರ್ನ್ಸ್ ಹಾಗೂ ಕಡಿಮೆ ಅಪಾಯದ ಹಿನ್ನೆಲೆಯಲ್ಲಿ ಕೆಲವರು ಹೂಡಿಕೆಗೆ ಸ್ಥಿರ ಠೇವಣಿಯನ್ನೇ (FD) ಆಯ್ಕೆ ಮಾಡುತ್ತಾರೆ. ಹೂಡಿಕೆಯ (Investment) ಆಯ್ಕೆಯಾಗಿ ಹಿಂದಿಗಿಂತ ಇಂದು ಸ್ಥಿರ ಠೇವಣಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಆದ್ರೆ ಹೂಡಿಕೆಗೆ ನೀವು ಸ್ಥಿರ ಠೇವಣಿ ಆಯ್ಕೆ ಮಾಡುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಅರಿತುಕೊಳ್ಳೋದು ಅಗತ್ಯ.
ಸ್ಥಿರ ಠೇವಣೆಯ ಪ್ರಯೋಜನಗಳೇನು?
ಮ್ಯೂಚುವಲ್ ಫಂಡ್ಸ್ ಅಥವಾ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗೆ ಹೋಲಿಸಿದ್ರೆ ಸ್ಥಿರ ಠೇವಣಿ ರಿಟರ್ನ್ಸ್ ಕಡಿಮೆ. ಆದ್ರೆ ಕಡಿಮೆ ಅಪಾಯದ ಹಿನ್ನೆಲೆಯಲ್ಲಿ ಮಾರುಕಟ್ಟೆ ಆಧಾರಿತ ಇತರ ಹೂಡಿಕೆ ಯೋಜನೆಗಳಿಗಿಂತ ಸ್ಥಿರ ಠೇವಣಿ ಹೆಚ್ಚಿನ ನಿರಾಳತೆ ಒದಗಿಸುತ್ತದೆ. ಹಾಗಾದ್ರೆ ಸ್ಥಿರ ಠೇವಣಿಯ ಅನುಕೂಲಗಳೇನು?
CIBIL Score:ಏನಿದು ಸಿಬಿಲ್ ಸ್ಕೋರ್? ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ
1.ಬಡ್ಡಿ ಪಾವತಿ: ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಬಡ್ಡಿದರ (Interest rate) ನೀಡಲಾಗುತ್ತದೆ. ಅಲ್ಲದೆ, ಮೆಚ್ಯುರಿಟಿ ಬಳಿಕ ಈ ಎಫ್ ಡಿಯನ್ನು ನವೀಕರಿಸಬಹುದಾಗಿದ್ದು, ಮೂಲ ಮೊತ್ತವನ್ನು ಎಫ್ ಡಿಯಲ್ಲಿ ಮುಂದುವರಿಸಬಹುದಾಗಿದೆ. ಇನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದಲ್ಲಿ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಬಹುತೇಕ ಬ್ಯಾಂಕ್ ಗಳು ಎಫ್ ಡಿ ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಿಸಿವೆ.
2.ತೆರಿಗೆ ಉಳಿತಾಯದ ಎಫ್ ಡಿ: ಕೆಲವು ಎಫ್ ಡಿಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಉಳಿತಾಯ ಮಾಡಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ (80C) ಅಡಿಯಲ್ಲಿ ಈ ಸ್ಥಿರ ಠೇವಣಿಗಳಲ್ಲಿನ ಹೂಡಿಕೆಗೆ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಸಿಗುತ್ತದೆ. ತೆರಿಗೆ ಉಳಿತಾಯದ ಎಫ್ ಡಿಗಳು 5 ವರ್ಷಗಳ ಲಾಕ್ ಇನ್ ಅವಧಿ ಹೊಂದಿರುತ್ತವೆ.
3. ಠೇವಣಿ ವಿಮೆ: ಡಿಐಸಿಜಿಸಿ ಕಾಯ್ದೆಗೆ (DICGC Act) ಇತ್ತೀಚಿನ ತಿದ್ದುಪಡಿ ಅನ್ವಯ ಸ್ಥಿರ ಠೇವಣಿ ಹೊಂದಿರುವ ಖಾತೆದಾರ ಗರಿಷ್ಠ 5 ಲಕ್ಷರೂ. ತನಕ ವಿಮೆ ಪಡೆಯಬಹುದು. ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಅದನ್ನು ಮುಚ್ಚಿದ 90 ದಿನಗಳೊಳಗೆ ಠೇವಣಿದಾರರು ವಿಮೆ ಹಣವನ್ನು ಪಡೆಯಬಹುದು.
4. ಹಿರಿಯ ನಾಗರಿಕರಿಗೆ ತೆರಿಗೆ ಪ್ರಯೋಜನ: ಸ್ಥಿರ ಠೇವಣಿ ಮೇಲೆ ಹಿರಿಯ ನಾಗರಿಕರು ಗಳಿಸಿದ ಬಡ್ಡಿಗೆ 50,000ರೂ. ತನಕ ತೆರಿಗೆ ವಿನಾಯ್ತಿ ಸೌಲಭ್ಯವಿದೆ. ಇನ್ನು ಹಿರಿಯ ನಾಗರಿಕರ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಇತರ ಸ್ಥಿರ ಠೇವಣಿಗಳಿಗಿಂತ ಹೆಚ್ಚಿರುತ್ತದೆ.
5.ಬ್ಯಾಂಕ್ ಎಫ್ ಡಿ ಮೇಲೆ ಸಾಲ: ಸ್ಥಿರ ಠೇವಣಿ (FD) ಮೇಲೆ ಸಾಲ ಪಡೆಯೋ ಅವಕಾಶವಿದೆ. ಎಲ್ಲ ಬ್ಯಾಂಕುಗಳು ಕೂಡ ಈ ಸೌಲಭ್ಯ ನೀಡುತ್ತಿವೆ. ಇನ್ನು ಸಾಲದ ಮೊತ್ತ ಠೇವಣಿಯ ಮೌಲ್ಯ ಹಾಗೂ ಎಫ್ ಡಿಯ ಅವಧಿಯನ್ನು ಅವಲಂಬಿಸಿದೆ. ಎಫ್ ಡಿ ಮೇಲೆ ಪಡೆಯೋ ಸಾಲದ ಬಡ್ಡಿದರ ಸಾಮಾನ್ಯವಾಗಿ ಹೆಚ್ಚಿದ್ದು, ಶೇ.10ರಷ್ಟಿರುತ್ತದೆ.
ಎಫ್ ಡಿಯ ಅನನುಕೂಲ
ಸ್ಥಿರ ಠೇವಣಿಗಳು ಕಡಿಮೆ ಅಸ್ಥಿರತೆ ಹಾಗೂ ಅಪಾಯ ಹೊಂದಿವೆ ಎಂಬ ಕಾರಣಕ್ಕೆ ಅವುಗಳನ್ನು ಉತ್ತಮ ಹೂಡಿಕೆ ಆಯ್ಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದರಲ್ಲೂ ಕೆಲವು ಬಾಧಕಗಳಿವೆ.
1.ಹಣದುಬ್ಬರದ ಅಪಾಯ: ಎಫ್ ಡಿಗಳ ಮೇಲೆ ವಿಧಿಸುವ ಬಡ್ಡಿದರ ನಿರ್ದಿಷ್ಟ ಅವಧಿಗೆ ಸ್ಥಿರವಾಗಿರುತ್ತದೆ. ಅದರಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. ಆದ್ರೆ ನಿಮ್ಮ ಎಫ್ ಡಿಗೆ ಶೇ.5ರಷ್ಟು ಬಡ್ಡಿದರ ಸಿಗುತ್ತಿದ್ದು, ಆರ್ಥಿಕತೆಯಲ್ಲಿನ ಹಣದುಬ್ಬರ ದರ ಶೇ.6ರಷ್ಟಿದ್ದರೆ ಆಗ ನೀವು ನಿಮ್ಮ ಎಫ್ ಡಿಯಲ್ಲಿನ ಹೂಡಿಕೆ ಮೇಲೆ ಕಡಿಮೆ ಬಡ್ಡಿ ಪಡೆಯುವ ಸಾಧ್ಯತೆಯೂ ಇದೆ.
2.ಅವಧಿಗೂ ಮುನ್ನ ಸ್ಥಗಿತಗೊಳಿಸಿದ್ರೆ ದಂಡ: ಇನ್ನು ನೀವು ಎಫ್ ಡಿ ಮೆಚ್ಯುರಿಟಿ ಅವಧಿಗೂ ಮುನ್ನ ಅದರಲ್ಲಿನ ಹಣ ವಿತ್ ಡ್ರಾ ಮಾಡಲು ಬಯಸಿದ್ರೆ ಆಗ ನಿಮಗೆ ಬ್ಯಾಂಕ್ ದಂಡ ವಿಧಿಸುತ್ತದೆ. ಅಲ್ಲದೆ, ಕೆಲವೊಮ್ಮೆ ಮೂಲ ಮೊತ್ತವನ್ನು ಕ್ರೆಡಿಟ್ ಮಾಡುವ ಮುನ್ನ ಎಫ್ ಡಿ ಮೇಲಿನ ಹೂಡಿಕೆಗೆ ನೀವು ಈ ತನಕ ಗಳಿಸಿದ ಬಡ್ಡಿಯನ್ನು ಕೂಡ ಕಡಿತಗೊಳಿಸುವ ಸಾಧ್ಯತೆಯಿರುತ್ತದೆ.
License Cancel:ಮುಧೋಳ ಸಹಕಾರಿ ಬ್ಯಾಂಕ್ ಲಿಮಿಟೆಡ್ ಪರವಾನಗಿ ರದ್ದುಗೊಳಿಸಿದ RBI;ಕಾರಣವೇನು?
3.ತೆರಿಗೆ ವಿಧಿಸಲಾಗುತ್ತದೆ: ಹಿರಿಯ ನಾಗರಿಕರನ್ನು ಹೊರತುಪಡಿಸಿ ಅಂದ್ರೆ 60 ವರ್ಷದೊಳಗಿನವರು ಎಫ್ ಡಿ ಮೇಲೆ ಗಳಿಸಿದ ಬಡ್ಡಿಗೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಬಡ್ಡಿ ಗಳಿಕೆ 40,000ರೂ.ಗಿಂತಲೂ ಅಧಿಕವಿದ್ರೆ ಆಗ ಶೇ.10ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ.
4.ನಿಶ್ಚಿತ ಬಡ್ಡಿದರ: ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ನಿಶ್ಚಿತವಾಗಿರುತ್ತದೆ. ಹೀಗಾಗಿ ಇಂಥ ಎಫ್ ಡಿಗಳಲ್ಲಿ ಹೂಡಿಕೆ ಮಾಡಿದವರಿಗೆ ಮಾರ್ಕೆಟ್ ನಲ್ಲಿ ಬಡ್ಡಿದರ ಹೆಚ್ಚಳವಾದ ಸಮಯದಲ್ಲಿ ಅದರ ಪ್ರಯೋಜನ ಪಡೆಯಲು ಸಾಧ್ಯವಾಗೋದಿಲ್ಲ. ಈ ರೀತಿ ನಿಶ್ಚಿತ ಬಡ್ಡಿದರ ಹೊಂದಿರುವ ಎಫ್ ಡಿಗಳು ಮೆಚ್ಯುರಿಟಿ ಅವಧಿ ತನಕ ಅಷ್ಟೇ ಮೊತ್ತವನ್ನು ಗಳಿಕೆ ಮಾಡುತ್ತವೆ.