ವಿಪ್ರೋ ಸಿಇಒಗೆ .79.8 ಕೋಟಿ ಭರ್ಜರಿ ವೇತನ: ಐಟಿ ವಲಯದಲ್ಲೇ ಹೆಚ್ಚು ಸಂಬಳ

ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್‌ ಅವರು 2021-2022ರ ಆರ್ಥಿಕ ವರ್ಷದಲ್ಲಿ ಭರ್ಜರಿ 79.8 ಕೋಟಿ ರು. ವಾರ್ಷಿಕ ವೇತನ ಪಡೆದುಕೊಂಡಿದ್ದಾರೆ.

Wipro Ceo Thierry Delaporte Receives Rs 79 8 Crore Salary In 2022 gvd

ಬೆಂಗಳೂರು (ಜೂ.11): ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್‌ ಅವರು 2021-2022ರ ಆರ್ಥಿಕ ವರ್ಷದಲ್ಲಿ ಭರ್ಜರಿ 79.8 ಕೋಟಿ ರು. ವಾರ್ಷಿಕ ವೇತನ ಪಡೆದುಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ವೇತನ ಪಡೆದ ಭಾರತದ ಐಟಿ ವಲಯದ ಉದ್ಯೋಗಿ ಎನ್ನಿಸಿಕೊಂಡಿದ್ದಾರೆ. ವಿಪ್ರೋ ಭದ್ರತೆ ಹಾಗೂ ವಿನಿಮಯ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದೆ. ಡೆಲಾಪೋರ್ಚ್‌ 13.2 ಕೋಟಿ ರು. ವೇತನ ಹಾಗೂ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ. 

ಇದರೊಂದಿಗೆ ಕಮಿಷನ್‌ ರೂಪದಲ್ಲಿ 19.3 ಕೋಟಿ ರು., ಇತರೆ ಸೌಲಭ್ಯಗಳ ರೂಪದಲ್ಲಿ 31.8 ಕೋಟಿ ರು ಪಡೆದುಕೊಳ್ಳುತ್ತಾರೆ. ಇದರೊಂದಿಗೆ ದೀರ್ಘಾವಧಿ ಪರಿಹಾರ ಹಾಗೂ ಮುಂದೂಡಲ್ಪಟ್ಟಸೌಲಭ್ಯಗಳ ರೂಪದ ಹಣ ಸೇರಿ ಒಟ್ಟಾರೆ 79.8 ಕೋಟಿ ರು. ವಾರ್ಷಿಕ ವೇತನ ಪಡೆದುಕೊಳ್ಳುತ್ತಾರೆ. 2020-21ರ ಆರ್ಥಿಕ ವರ್ಷದಲ್ಲಿ ಇವರು 64.3 ಕೋಟಿ ರು. ವೇತನ ಪಡೆದುಕೊಂಡಿದ್ದರು.ಇತ್ತೀಚೆಗೆ ಇಸ್ಫೋಸಿಸ್‌ನ ಸಿಇಒ ಸಲೀಲ್‌ ಪಾರೇಖ್‌ 2021-22ರಲ್ಲಿ 71 ಕೋಟಿ ರು. ಭಾರೀ ವೇತನ ಪಡೆಯುತ್ತಿರುವುದು ಸುದ್ದಿಯಾಗಿತ್ತು. 2022-23ನೇ ಸಾಲಿಗೆ ಅವರ ವೇತನ 80 ಕೋಟಿ ರು.ಗೆ ಪರಿಷ್ಕರಣೆ ಆಗಿತ್ತು.

Work From Office: ಐಟಿ ಉದ್ಯೋಗಿಗಳಿಗೆ ಕಚೇರಿಗೆ ಸ್ವಾಗತಿಸಲು ಸಜ್ಜಾದ ಭಾರತೀಯ ಟೆಕ್ ಕಂಪನಿಗಳು!

ಸಲೀಲ್‌ ಪಾರೇಖ್‌ ಈಗ ಭಾರತದ ಅತೀಹೆಚ್ಚು ವೇತನ ಪಡೆಯುವ ಸಿಇಒ: ಇನ್ಫೋಸಿಸ್ ಕಂಪನಿಯ ಸಿಇಒ ಆಗಿ ಇತ್ತೀಚೆಗೆ ಮರುನೇಮಕಗೊಂಡ ಸಲೀಲ್‌ ಪಾರೇಖ್‌ ಅವರ ವೇತನದಲ್ಲಿ ಶೇ.88ರಷ್ಟು ಏರಿಕೆಯಾಗಿದೆ. ಈ ಹೆಚ್ಚಳದಿಂದ ಪಾರೇಖ್ ಅವರ ವಾರ್ಷಿಕ ಪ್ಯಾಕೇಜ್  79.75 ಕೋಟಿ ರೂಪಾಯಿ ಮುಟ್ಟಿದೆ. ಈ ಮೂಲಕ ಅವರು ಭಾರತದಲ್ಲಿ ಅತೀ ಹೆಚ್ಚು ಸಂಬಳ  ಪಡೆಯುವ ಸಿಇಒ ಅನಿಸಿಕೊಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಂಪನಿಯು ಗಮನಾರ್ಹ ಬೆಳವಣಿಗೆ ದಾಖಲಿಸಿದೆ ಎಂದು ಹೇಳುವ ಮೂಲಕ ಇನ್ಫೋಸಿಸ್ ಬೃಹತ್ ಪ್ರಮಾಣದ ವೇತನ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

(ಮೇ 26) ಬಿಡುಗಡೆಯಾದ ಕಂಪನಿಯ ವಾರ್ಷಿಕ ವರದಿ ಪ್ರಕಾರ ಷೇರುದಾರರ ಅನುಮೋದನೆಗೆ ಒಳಪಟ್ಟ ಹೊಸ ಉದ್ಯೋಗ ಒಪ್ಪಂದವು ಜುಲೈ 2ರಿಂದ ಜಾರಿಗೆ ಬರಲಿದೆ. 2022ನೇ ಹಣಕಾಸು ಸಾಲಿನಲ್ಲಿ ಪಾರೇಖ್ ಅವರ ಟೇಕ್ ಹೋಮ್ ವೇತನ  71 ಕೋಟಿ ರೂ. ಇದರಲ್ಲಿ 52 ಕೋಟಿ ರೂ. ಈ ಹಿಂದೆ ಅವರಿಗೆ ನೀಡಲಾಗಿರುವ ನಿರ್ಬಂಧಿತ ಸ್ಟಾಕ್ ಯೂನಿಟ್‌ಗಳಿಂದ ಬಂದಿದೆ. ಕಂಪನಿಗೆ ತಾನು ಸಲ್ಲಿಸುತ್ತಿರುವ ಸೇವೆಗಳಿಗೆ ಯಾವುದೇ ಸಂಭಾವನೆ ಪಡೆಯದಿರಲು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಸ್ವಯಂಪ್ರೇರಣೆಯಿಂದ ನಿರ್ಧಾರ ಕೈಗೊಂಡಿದ್ದಾರೆ. 2021ರಲ್ಲಿ ಸಲೀಲ್ ಪರೇಖ್ ವಾರ್ಷಿಕ ವೇತನ ಬರೋಬ್ಬರಿ 49.68 ಕೋಟಿ ರೂಪಾಯಿ. 2020ರಲ್ಲಿ ಪರೇಖ್ 12 ತಿಂಗಳ ವೇತನ  34.27 ಕೋಟಿ ರೂಪಾಯಿ ಆಗಿತ್ತು. 2021ರ ಸಾಲಿನಲ್ಲಿ ಶೇಕಡಾ 45 ರಷ್ಚು ವೇತನ ಹೆಚ್ಚಿಸಲಾಗಿತ್ತು.

Employees Leaving Tech Companies: ಟೆಕ್ ಕಂಪೆನಿಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಿಗಳ ರಾಜೀನಾಮೆ!

ಇನ್ಫೋಸಿಸ್ ಬೃಹತ್ ಮೊತ್ತದ ವೇತನ ನೀಡಲು ಕಾರಣವೇನು?: ಕಂಪನಿಯ ಕಾರ್ಯದಕ್ಷತೆ ಹಾಗೂ ಷೇರುಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಸಿಇಒ ವೇತನವನ್ನು ಪರಿಗಣಿಸಬೇಕು. ಪಾರೇಖ್ ಅವರ ಅವಧಿಯಲ್ಲಿ ಷೇರುದಾರರ ಆದಾಯದಲ್ಲಿ ಶೇ.314ರಷ್ಟು ಹೆಚ್ಚಳವಾಗಿದೆ. ಆದಾಯಬೆಳವಣಿಗೆ ಕೂಡ 70,522 ಕೋಟಿ ರೂ.ನಿಂದ 1,21,641 ಕೋಟಿ ರೂ.ಗೆ ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಪಾರೇಖ್ ಅವರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

Latest Videos
Follow Us:
Download App:
  • android
  • ios