ಇಪಿಎಫ್ ಒ ತನ್ನ ಸದಸ್ಯರ ಕೆಲ್ಸವನ್ನು ಮತ್ತಷ್ಟು ಸುಲಭ ಮಾಡ್ತಿದೆ. ಎಲ್ಲ ಮಾಹಿತಿ ಒಂದೇ ಕ್ಲಿಕ್ ನಲ್ಲಿ ಸಿಗುವ ಡಿಜಿಟಲ್ ಸೇವೆನೆ ಒತ್ತು ನೀಡಿದೆ. ಇನ್ಮುಂದೆ ಡಿಜಿ ಲಾಕರ್ ನಲ್ಲಿಯೂ ಪಿಎಫ್ ಮಾಹಿತಿ ಸಿಗಲಿದೆ.
ಇಪಿಎಫ್ಒ (EPFO) ಸದಸ್ಯರಿಗೆ ಖುಷಿ ಸುದ್ದಿ ಒಂದಿದೆ. ಪಿಎಫ್ (PF )ಗೆ ಸಂಬಂಧಿಸಿದ ಪ್ರಮುಖ ಸೇವೆಗಳನ್ನು ಇನ್ಮುಂದೆ ನೀವು ಸುಲಭವಾಗಿ ಪಡೆಯಬಹುದು. ಪಿಎಫ್ ಬಗ್ಗೆ ಮಾಹಿತಿ ಬೇಕು ಅಂದ್ರೆ ಸ್ಮಾರ್ಟ್ಫೋನ್ ನಲ್ಲೇ ಡಿಜಿಲಾಕರ್ (DigiLocker) ಬಳಸಿ ಪಡೆಯಬಹುದು. ಡಿಜಿ ಲಾಕರ್ ನಲ್ಲಿ ನಿಮಗೆ ಪಿಎಫ್ ಪಾಸ್ಬುಕ್, ಬ್ಯಾಲೆನ್ಸ್, ಯುಎಎನ್ ಕಾರ್ಡ್ ಮತ್ತು ಪಿಂಚಣಿ ಪಾವತಿ ಆದೇಶದಂತಹ ದಾಖಲೆ ಸಿಗಲಿದೆ.
ಪಿಎಫ್ ಬಗ್ಗೆ ಡಿಜಿ ಲಾಕರ್ ಮೂಲಕ ಎಲ್ಲಿ ಬೇಕಾದ್ರೂ, ಯಾವಾಗ ಬೇಕಾದ್ರೂ ನೀವು ಮಾಹಿತಿ ಪಡೆಯಬಹುದು. ನಿಮಗೆ ಅಗತ್ಯ ಇರುವ ದಾಖಲೆಯನ್ನು ಡೌನ್ಲೋಡ್ ಮಾಡ್ಬಹುದು. ಸರ್ಕಾರ, ಇಪಿಎಫ್ಒಗೆ ಸಂಬಂಧಿಸಿದಂತೆ ಹಲವು ಡಿಜಿಟಲ್ ಬದಲಾವಣೆಗಳನ್ನು ಮಾಡಿದೆ. ಅದ್ರಲ್ಲಿ ಈಗ ಇದು ಸೇರ್ಪಡೆಯಾಗಲಿದೆ. ಇಪಿಎಫ್ಒ, ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೆಲ ದಿನಗಳ ಹಿಂದಷ್ಟೆ ತನ್ನ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಡಿಜಿಲಾಕರ್ನಲ್ಲಿ ಪಿಎಫ್ ಗೆ ಸಂಬಂಧಿಸಿದಂತೆ ಯಾವೆಲ್ಲ ಮಾಹಿತಿ ಲಭ್ಯ? : ಮೊದಲು ಪಿಎಫ್ ಪಾಸ್ಬುಕ್ ಅನ್ನು ಇಪಿಎಫ್ ಒ ಸದಸ್ಯರು, ಉಮಾಂಗ್ ಅಪ್ಲಿಕೇಶನ್ ಮೂಲಕ ಡೌನ್ಲೋಡ್ ಮಾಡಬೇಕಾಗಿತ್ತು. ಈಗ ಇಪಿಎಫ್ಒ ಸದಸ್ಯರು, ತಮ್ಮ ಯುಎಎನ್ ಕಾರ್ಡ್, ಪಿಪಿಒ ಮತ್ತು ಸ್ಕೀಮ್ ಪ್ರಮಾಣಪತ್ರವನ್ನು ಸುಲಭವಾಗಿ ಡಿಜಿ ಲಾಕರ್ ಮೂಲಕ ನೋಡ್ಬಹುದು. ಅಲ್ಲದೆ ಡೌನ್ಲೋಡ್ ಮಾಡಬಹುದು. ಈ ಸೌಲಭ್ಯ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದೆ. ಐಫೋನ್ ಬಳಕೆದಾರರು ಉಮಾಂಗ್ ಅಪ್ಲಿಕೇಶನ್ ಮೂಲಕವೇ ಪಾಸ್ಬುಕ್ ಚೆಕ್ ಮಾಡ್ಕೊಳ್ಬೇಕಾಗಿದೆ. ನೀವು ಇಪಿಎಫ್ ಒ ಸದಸ್ಯರಾಗಿದ್ದರೆ ಡಿಜಿ ಲಾಕರ್ ಗೆ ಲಾಗಿನ್ ಆಗಿ. ಸೇವೆಯನ್ನು ಮತ್ತಷ್ಟು ಸುಲಭಗೊಳಿಸಿಕೊಳ್ಳಿ.
ಇನ್ನೊಂದು ನವೀಕರಣ ಮಾಡಿದ ಇಪಿಎಫ್ಒ : ಜುಲೈ 18 ರಂದು ಇಪಿಎಫ್ಒ ಮತ್ತೊಂದು ನವೀಕರಣವನ್ನು ಮಾಡಿದೆ. ಇಪಿಎಫ್ ಒ ಸದಸ್ಯರು, ಯುಎಂಎಎನ್ ಅನ್ನು ಉಮಾಂಗ್ ಅಪ್ಲಿಕೇಶನ್ನಿಂದ ಫೇಸ್ ಅಥೆಂಟಿಕೇಶನ್ ಮೂಲಕವೂ ಸಕ್ರಿಯಗೊಳಿಸಬಹುದು. ಸದಸ್ಯರು ಯುಎಎನ್ ಸಕ್ರಿಯಗೊಳಿಸುವುದು ಬಹಳ ಮುಖ್ಯ. ಪಿಎಫ್ ಬ್ಯಾಲೆನ್ಸ್ ನೋಡಲು ಯುಎಎನ್ ಬಹಳ ಮುಖ್ಯ. ನೀವು ಬ್ಯಾಲೆನ್ಸ್ ಚೆಕ್ ಮಾಡುವ ಜೊತೆಗೆ ಹಣ ವಿತ್ ಡ್ರಾ ಅಥವಾ ಬ್ಯಾಂಕ್ ಅಥವಾ ಆಧಾರ್ ವಿವರಗಳನ್ನು ನವೀಕರಿಸಲು ಯುಎಎನ್ ಅಗತ್ಯ. ಮೋದಿ ಸರ್ಕಾರ ಇಎಲ್ಐ (ಉದ್ಯೋಗ ಲಿಂಕ್ಡ್ ಇನ್ಸೆಂಟಿವ್) ಯೋಜನೆಯ ಲಾಭ ಪಡೆಯಲು ಯುಎಎನ್ ಸಕ್ರಿಯಗೊಳಿಸುವಿಕೆ ಅಗತ್ಯ ಎಂದಿದೆ. ಸುಮಾರು 2 ಲಕ್ಷ ಕೋಟಿ ರೂ. ಬಜೆಟ್ನೊಂದಿಗೆ ಪ್ರಾರಂಭವಾದ ಈ ಯೋಜನೆಯನ್ನು ದೇಶದ 4 ಕೋಟಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಗಳನ್ನು ಒದಗಿಸುವ ಗುರಿಯೊಂದಿಗೆ ಜಾರಿಗೆ ತರಲಾಗಿದೆ.
ಇಪಿಎಫ್ಒ ಡಿಜಿಟಲ್ ನಿಂದ ನಿಮಗೇನು ಲಾಭ? :
• ಪಿಎಫ್ ಪಾಸ್ಬುಕ್ ಮತ್ತು ಬ್ಯಾಲೆನ್ಸ್ ನೋಡೋದು ಈಗ ಕಷ್ಟವಿಲ್ಲ. ಡಿಜಿಲಾಕರ್ನಲ್ಲಿಒಂದು ಕ್ಲಿಕ್ ಮಾಡಿದ್ರೆ ನಿಮಗೆ ಎಲ್ಲ ದಾಖಲೆ ಸಿಗುತ್ತದೆ.
• ಉಮಾಂಗ್ ಅಪ್ಲಿಕೇಶನ್ನಿಂದ ಫೇಸ್ ಅಥೆಂಟಿಕೇಶನ್ ಮೂಲಕ ಯುಎಎನ್ ಸಕ್ರಿಯಗೊಳಿಸಬಹುದು. ಅಂದ್ರೆ ಕೆವೈಸಿ ಸುಲಭವಾಗಿದೆ.
• ಪಿಎಫ್ ಕ್ಲೈಮ್ ಪ್ರಕ್ರಿಯೆ ಮತ್ತು ಹಿಂಪಡೆಯುವಿಕೆ ಆನ್ಲೈನ್ನಲ್ಲಿಯೆ ಆಗುತ್ತದೆ. ಅದಕ್ಕಾಗಿ ನೀವು ಕಚೇರಿಗೆ ಹೋಗುವ ಅಗತ್ಯವಿಲ್ಲ.
• ಇ-ನಾಮನಿರ್ದೇಶನ ಸೌಲಭ್ಯ ಅಂದ್ರೆ ಕುಟುಂಬದವರ ಹೆಸರನ್ನು ನಾಮಿನಿಯಾಗಿ ಸೇರಿಸುವ ಕೆಲ್ಸವನ್ನು ನೀವು ಮನೆಯಿಂದ್ಲೇ ಮಾಡಬಹುದು.
• ಒಟಿಪಿ (OTP) ಆಧಾರಿತ ಲಾಗಿನ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ನಿಮಗೆ ಲಭ್ಯವಿದೆ. ನಿಮ್ಮ ಪಿಎಫ್ ಖಾತೆಯ ಎಲ್ಲ ಬದಲಾವಣೆ ನಿಮಗೆ ಸ್ಮಾರ್ಟ್ಫೊನ್ ನಲ್ಲಿಯೇ ಸಿಗುತ್ತದೆ.
