ವಾಹನ ಚಾಲಕರಿಗೆ ಬಿಗ್ ಶಾಕ್: ಮೇ ಬಳಿಕ ಪೆಟ್ರೋಲ್ ಲೀ.ಗೆ 14.79 ರು. ಹೆಚ್ಚಳ!
ಪೆಟ್ರೋಲ್ ಮೇ ಬಳಿಕ ಲೀ.ಗೆ 14.79 ರು. ಹೆಚ್ಚಳ!| ದಾಖಲೆ ದರದಲ್ಲಿ ತೈಲ ಬೆಲೆ ಓಟ
ನವದೆಹಲಿ(ಜ.14): ಏರುಗತಿಯಲ್ಲೇ ಸಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಬುಧವಾರ ಮತ್ತೊಂದು ದಾಖಲೆ ಸ್ಥಾಪಿಸಿವೆ. ತೈಲ ಕಂಪನಿಗಳು ಬುಧವಾರ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀ.ಗೆ ಕ್ರಮವಾಗಿ 26 ಮತ್ತು 27 ಪೈಸೆಯಷ್ಟುಏರಿಸಿವೆ. ಇದರೊಂದಿಗೆ 2020ರ ಮೇ ತಿಂಗಳ ಬಳಿಕ ಪೆಟ್ರೋಲ್ ದರ ಒಟ್ಟಾರೆ 14.79 ರು. ಮತ್ತು ಡೀಸೆಲ್ ದರ 12.34 ರು.ನಷ್ಟುಹೆಚ್ಚಳವಾದಂತಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 87.30 ರು. ಮತ್ತು 79.14 ರು.ಗೆ ತಲುಪಿದೆ. ಇನ್ನು ದೆಹಲಿಯಲ್ಲಿ 84.45 ರು. ಮತ್ತು 74.63 ರು., ಮುಂಬೈನಲ್ಲಿ 91.07 ರು. ಮತ್ತು 81.34 ರು.ಗೆ ತಲುಪಿದೆ.
ಬೆಂಗಳೂರು, ದೆಹಲಿ, ಕೋಲ್ಕತಾ, ಚೆನ್ನೈನಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಮುಟ್ಟಿಆಗಿದ್ದು, ಈಗ ದಾಖಲೆ ದರದಲ್ಲೇ ಮತ್ತಷ್ಟುಏರಿಕೆ ಕಾಣುತ್ತಿವೆ. ಮುಂಬೈನಲ್ಲಿ 2018ರ ಅ.4ರಂದು ಪೆಟ್ರೋಲ್ ದರ 91.34 ರು. ತಲುಪಿದ್ದು ಇದುವರೆಗಿನ ಗರಿಷ್ಠ ದರವಾಗಿದೆ.