ಪೆಟ್ರೋಲ್, ಡೀಸೆಲ್ ದರದಲ್ಲಿ ಗಣನೀಯ ಇಳಿಕೆ! ದೇಶದ ಮಹಾನಗರಗಳಲ್ಲಿ ಗಣನೀಯವಾಗಿ ಇಳಿದ ತೈಲದರ! ಮತ್ತೆ ಪೈಸೆಗಳ ಲೆಕ್ಕಾಚಾರದಲ್ಲಿ ಇಳಿದಿದೆ ತೈಲದರ! ಸತತವಾಗಿ ಇಳಿಯುತ್ತಿರುವ ದರ ಕಂಡು ಜನ ಫುಲ್ ಖುಷ್
ನವದೆಹಲಿ(ನ.8): ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂ. ಆಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 21 ಪೈಸೆಯಷ್ಟು ಕಡಿಮೆಯಾಗಿದೆ. ಅದರಂತೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 20 ಪೈಸೆ ಪೆಟ್ರೋಲ್ ದರ ಕಡಿಮೆಯಾಗಿದ್ದು, ಲೀಟರ್ ಗೆ 83.72 ರೂ. ಆಗಿದೆ.
ಇದೇ ವೇಳೆ ಡಿಸೇಲ್ ದರ 18 ಪೈಸೆಗಳಷ್ಟು ಕಡಿಮೆಯಾಗಿ 72.89 ರೂ. ಆಗಿದೆ. ಮುಂಬೈನಲ್ಲಿ 76.38 ರೂ. ದರ ನಿಗದಿಯಾಗಿದೆ. ಅದರಂತೆ ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ 80.13 ರೂ. ಆಗಿದ್ದು, ಡೀಸೆಲ್ ದರ 74.75 ರೂ. ಆಗಿದೆ.
ಅದರಂತೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲದ ದರ 81.24 ರೂ. ಮತ್ತು ಡೀಸೆಲ್ ದರ 77.05 ರೂ. ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 79.05 ರೂ. ಮತ್ತು ಡೀಸೆಲ್ ದರ 73.46 ರೂ.ಆಗಿದೆ.
