ನವದೆಹಲಿ(ಡಿ.08): ಕೊರೋನಾಗೆ ಲಸಿಕೆ ಸಿಕ್ಕು ಅದರ ವಿತರಣೆಗೆ ಆರಂಭವಾಗುತ್ತಿದ್ದಂತೆಯೇ ಜಾಗತಿಕ ಮಾರರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಮತ್ತಷ್ಟು ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಭಾರೀ ಬಿಸಿ ಮುಟ್ಟಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಳವಾದ ಹಿನ್ನೆಲೆ ಸೋಮವಾರ ಪೆಟ್ರೋಲ್ ದರ ಲೀ. 30 ಪೈಸೆ ಮತ್ತು ಡೀಸೆಲ್ ದರ ಲೀ. 26 ಪೈಸೆ ಏರಿಕೆಯಾಗಿದೆ. ಇದು ಸತತ ಆರನೇ ದಿನ ಏರಿಕೆ. ಇದರೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಸಾರ್ವಕಾಲಿಕ ಗರಿಷ್ಟ ದರದತ್ತ ಸಮೀಪಿಸಿದೆ.

ಕಳೆದ ಹದಿನೆಂಟು ದಿನದಲ್ಲಿ ಪೆಟ್ರೋಲ್ 2.65 ರೂ ಹಾಗೂ ಡೀಸೆಲ್ 3.41 ರೂ. ತುಟ್ಟಿಯಾಗಿದೆ.ಸೋಮವಾರ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 90.30 ರೂ.ಗೇರಿದೆ. ಇದು ಸಾರ್ವಕಾಲಿಕ ಗರಿಷ್ಟ ದರಕ್ಕಿಂತ ಕೇವಲ 1 ರೂ ಕಡಿಮೆ. ಬಹುಶಃ ಈಗಿನ ಏರುಗತಿ ನೋಡಿದರೆ ಇದನ್ನು 1-2 ದಿನದಲ್ಲಿ ಪೆಟ್ರೋಲ್ 91ರೂ. ದರ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ಲೇಷಿಸಲಾಗಿದೆ. 2018ರಲ್ಲಿ ಮುಂಬೈನಲ್ಲಿ ಪೆಟ್ರೋಲ್ ದರ 91.39 ರೂ. ದಾಖಲಾಗಿತ್ತು. ದೆಹಲಿಯಲ್ಲಿ 80.04 ರೂ ದಾಖಲಾಗಿತ್ತು. 

ಇನ್ನು ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 83.71 ರೂಗೇರಿದರೆ ಡೀಸೆಲ್ ದರ 73.87ರೂಗೇರಿದೆ. ಇದು ಸೆಪ್ಟೆಂಬರ್ 2018ರಲ್ಲಿ ಅತೀ ಗರಿಷ್ಟ ದರವಾಗಿದೆ. ಅfದೇ ರೀತಿ ಬೆಂಗಳೂರಿನಲ್ಲೂ ಸೋಮವಾರ ಪೆಟ್ರೋಲ್ ದರ 86.51 ಮತ್ತು ಡೀಸೆಲ್ 75.31ಕ್ಕೆ ತಲುಪಿದೆ.