ಶಿವಮೊಗ್ಗದಲ್ಲಿ ಶತಕ ಬಾರಿಸಿದ ಪೆಟ್ರೋಲ್‌ ದರ

* ಶಿವಮೊಗ್ಗದಲ್ಲಿ ಪೆಟ್ರೋಲ್‌ 100.14 ರು.ಡೀಸೆಲ್‌ ದರ 92.87 ರು.
* ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ
* ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಳ

Petrol Price Crossed 100 rs in Shivamogga grg

ಬೆಂಗಳೂರು(ಜೂ.10): ಪೆಟ್ರೋಲ್‌ ದರ ಗಗನದತ್ತ ಮುಖ ಮಾಡಿರುವ ಬೆನ್ನಲ್ಲೇ ರಾಜ್ಯದ ಮತ್ತೊಂದು ನಗರದಲ್ಲಿ 100ರ ಗಡಿ ತಲುಪಿದೆ. 

ಬುಧವಾರ ಶಿವಮೊಗ್ಗದಲ್ಲಿ ಪೆಟ್ರೋಲ್‌ 100.14 ರು.ಗಳಾಗಿತ್ತು. ಇನ್ನು ಡೀಸೆಲ್‌ 92.87 ತಲುಪಿದೆ. ಕಳೆದ 2 ದಿನಗಳಿಂದ ರಾಜ್ಯದ ಕೆಲವು ನಗರ, ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌ ದರ ಶತಕ ಬಾರಿಸುತ್ತಿದೆ. 

ಮಂಗಳೂರಿನಲ್ಲಿ ಶತಕದತ್ತ ಪೆಟ್ರೋಲ್-ಡೀಸೆಲ್ ಬೆಲೆ; ಇದು ಆತ್ಮಹತ್ಯೆ ನಿರ್ಭರ ಎಂದ ಜನ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ 100 ರು.ಗಳಾಗಿತ್ತು. ಬಳಿಕ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕಾರವಾರದಲ್ಲಿ ಶತಕ ಪೂರೈಸಿತ್ತು. ಈಗ ಶಿವಮೊಗ್ಗದ ಸರದಿಯಾಗಿದೆ.

ತೈಲ ಬೆಲೆ ನಿರಂತರವಾಗಿ ಏರುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಯಾಗಿದೆ. ಪ್ರತಿ ಯೂನಿಟ್‌ಗೆ ಸರಾಸರಿ 30 ಪೈಸೆಯಂತೆ ವಿದ್ಯುತ್‌ ಶುಲ್ಕ ಹೆಚ್ಚಳ ಮಾಡಿದೆ. ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಹೆಚ್ಚಳವಾಗಲಿದೆ.
 

Latest Videos
Follow Us:
Download App:
  • android
  • ios