Asianet Suvarna News Asianet Suvarna News

ಉಡುಪಿ, ಕೋಲಾರ ಬಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪೆಟ್ರೋಲ್‌ ಶತಕ..!

* ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲೂ ಶತಕದ ಗಡಿ ದಾಟಿದ ಪೆಟ್ರೋಲ್‌ ದರ 
* ಭಾನುವಾರ ಪೆಟ್ರೋಲ್‌ ದರ ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್‌ ದರ 28 ಪೈಸೆಯಷ್ಟು ಏರಿಕೆ
* ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಶಿರಸಿ, ಬಳ್ಳಾರಿಯಲ್ಲಿ ಪೆಟ್ರೋಲ್‌ ದರ 100 ರು. ದಾಟಿತ್ತು
 

Petrol Price Crossed 100 rs In All Districts of the Karnataka Except Udupi and Kolar grg
Author
Bengaluru, First Published Jun 21, 2021, 7:20 AM IST

ಬೆಂಗಳೂರು(ಜೂ.21): ಗಗನಮುಖಿಯಾಗಿರುವ ಪೆಟ್ರೋಲ್‌ ದರ ಭಾನುವಾರದಂದು ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲೂ ಶತಕದ ಗಡಿ ದಾಟಿದೆ. 

ಇದರೊಂದಿಗೆ ಉಡುಪಿ ಮತ್ತು ಕೋಲಾರಗಳನ್ನು ಹೊರತುಪಡಿಸಿ ಉಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ 100 ರುಪಾಯಿ ಗಡಿ ದಾಟಿದಂತಾಗಿದೆ. 

ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್‌ ತಂಗಡಗಿ

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಭಾನುವಾರ ಪೆಟ್ರೋಲ್‌ ದರವನ್ನು ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್‌ ದರ 28 ಪೈಸೆಯಷ್ಟು ಏರಿಕೆ ಮಾಡಿತು. ಹೀಗಾಗಿ ಕಲಬುರಗಿಯಲ್ಲಿ 100.28 ಮತ್ತು ಮೈಸೂರಲ್ಲಿ 100.3 ರು.ಗೇರಿತು. ಕೋಲಾರದಲ್ಲಿ 99.88 ಮತ್ತು ಉಡುಪಿಯಲ್ಲಿ 99.96 ಪೆಟ್ರೋಲ್‌ ದರವಿದ್ದು, ಸೋಮವಾರ ಅಥವಾ ಮಂಗಳವಾರದೊಳಗೆ 100 ಆಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಜೂ.6ರಂದು ರಾಜ್ಯದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿಯಲ್ಲಿ ಪೆಟ್ರೋಲ್‌ ದರ 100 ರು. ದಾಟಿತ್ತು.
 

Follow Us:
Download App:
  • android
  • ios