ಪೆಟ್ರೋಲ್, ಡೀಸೆಲ್ ದರದಲ್ಲಿ ಗಣನೀಯ ಇಳಿಕೆ! ದೇಶದ ಮಹಾನಗರಗಳಲ್ಲಿ ಗಣನೀಯವಾಗಿ ಇಳಿದ ತೈಲದರ! ಮತ್ತೆ ಪೈಸೆಗಳ ಲೆಕ್ಕಾಚಾರದಲ್ಲಿ ಇಳಿದಿದೆ ತೈಲದರ! ಸತತವಾಗಿ ಇಳಿಯುತ್ತಿರುವ ದರ ಕಂಡು ಜನ ಫುಲ್ ಖುಷ್

ನವದೆಹಲಿ(ನ.9): ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

Scroll to load tweet…

ಪೈಸೆಗಳ ಲೆಕ್ಕಾಚಾರದಲ್ಲಿ ತೈಲದರ ಇಳಿದಿದ್ದರೂ, ಹಬ್ಬದ ಸಂಭ್ರಮದಲ್ಲಿರುವ ಜನತೆಯಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಅದರಂತೆ ದೇಶದ ಮಹಾನಗರಗಳಲ್ಲಿನ ತೈಲದರದತ್ತ ದೃಷ್ಟಿ ಹರಿಸುವುದಾದರೆ-

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 78.21 ರೂ.(21 ಪೈಸೆ ಇಳಿಕೆ)

ಡೀಸೆಲ್ ದರ: 72.89 ರೂ.(18 ಪೈಸೆ ಇಳಿಕೆ)

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 83.72 ರೂ.(20 ಪೈಸೆ ಇಳಿಕೆ)

ಡೀಸೆಲ್ ದರ: 76.38 ರೂ.(19 ಪೈಸೆ ಇಳಿಕೆ)

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 80.13 ರೂ.(20 ಪೈಸೆ ಇಳಿಕೆ)

ಡೀಸೆಲ್ ದರ: 74.74 ರೂ.(18 ಪೈಸೆ ಇಳಿಕೆ)

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 81.24 ರೂ.(22 ಪೈಸೆ ಇಳಿಕೆ)

ಡೀಸೆಲ್ ದರ: 77.05 ರೂ.(19 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 78.84 ರೂ.(21 ಪೈಸೆ ಇಳಿಕೆ)

ಡೀಸೆಲ್ ದರ: 73.28 ರೂ.(18 ಪೈಸೆ ಇಳಿಕೆ)

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 4,420 ರೂ. (96 ರೂ ಇಳಿಕೆ)