ನವದೆಹಲಿ[ಜು.07]: ಕೇಂದ್ರದ ಬಜೆಟ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮಾಡಿದ ಬೆನ್ನಲ್ಲೇ, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಈ ಎರಡೂ ತೈಲೋತ್ಪನ್ನಗಳ ಬೆಲೆಯಲ್ಲಿ ತಲಾ 2.50 ರು.ವರೆಗೆ ಏರಿಕೆ ಆಗಿದೆ.

ದೆಹಲಿಯಲ್ಲಿ ಲೀ. ಪೆಟ್ರೋಲ್‌ಗೆ 72.96 ರು. ಹಾಗೂ ಡೀಸೆಲ್‌ಗೆ 66.69 ರು., ಮುಂಬೈನಲ್ಲಿ ಪೆಟ್ರೋಲ್‌ ದರ 78.57 ರು., ಡೀಸೆಲ್‌ಗೆ 69.60 ರು., ಕೋಲ್ಕತಾದಲ್ಲಿ ಪೆಟ್ರೋಲ್‌ಗೆ 75.15 ರು. ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ಗೆ 78.57 ರು.ಗೆ ತಲುಪಿದೆ.

ಇದೇ ವೇಳೆ ಕಾಂಗ್ರೆಸ್‌ ಆಡಳಿತಾರೂಢ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ತಲಾ 2 ರು.ವರೆಗೂ ಏರಿಸಿದೆ. ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ 4.50 ರು.ವರೆಗೂ ಏರಿಕೆಯಾಗಿದೆ