ನವದೆಹಲಿ[ಅ.02]: ಸೌದಿ ಅರೇಬಿಯಾದ ತೈಲ ಬಾವಿ ಮತ್ತು ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್‌ ದಾಳಿ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಕಚ್ಚಾತೈಲ ಬೆಲೆಯಲ್ಲಿ ಮತ್ತೆ ಗಮನಾರ್ಹ ಇಳಿಕೆ ಕಂಡುಬಂದಿದೆ.

ಹೀಗಾಗಿ ಇನ್ನು 2 ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಲೀ.ಗೆ 1.50 ರು.ವರೆಗೂ ಇಳಿವ ಸಾಧ್ಯತೆ ಇದೆ.

ದಾಳಿ ನಡೆವ ಮೊದಲು ಸೆ.16ರಂದು ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 60 ಡಾಲರ್‌ ಇತ್ತು. ದಾಳಿ ಬಳಿಕ ಸೆ.16ರಂದು ಬೆಲೆ 70 ಡಾಲರ್‌ಗೆ ತಲುಪಿತ್ತು. ಸೆ.30ಕ್ಕೆ ದರ ಮತ್ತೆ 59.4 ಡಾಲರ್‌ಗೆ ಇಳಿದಿದೆ.