ಸತತ 2ನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ 22 ಪೈಸೆ ಇಳಿಕೆ| ಕೋವಿಡ್‌ 2,3 ನೇ ಅಲೆ ಭೀತಿ ಕಾರಣ ಕಚ್ಚಾತೈಲ ಬೇಡಿಕೆ ಕುಸಿತ

ನವದೆಹಲಿ(ಮಾ.26): ತೈಲ ಬೆಲೆ ಏರಿಕೆಯ ಸಂಕಷ್ಟದಲ್ಲಿದ್ದ ಗ್ರಾಹಕರಿಗೆ, ತೈಲ ಕಂಪನಿಗಳು ಸತತ ಎರಡನೇ ದಿನವಾದ ಗುರುವಾರ ಕೂಡಾ ಶುಭ ಸುದ್ದಿ ನೀಡಿವೆ.

ಗುರುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ ಲೀ.ಗೆ 22 ಪೈಸೆಯಷ್ಟುಕಡಿತ ಮಾಡಿವೆ. ಬುಧವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ 18 ಮತ್ತು 17 ಪೈಸೆಯಷ್ಟುಇಳಿಕೆ ಮಾಡಲಾಗಿತ್ತು. ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀ.93.82 ರು.ಗೆ ಮತ್ತು ಡೀಸೆಲ್‌ ಬೆಲೆ ಲೀ. 85.99 ರು.ಗೆ ಇಳಿಕೆ ಕಂಡಿದೆ.

ಇನ್ನೂ 10 ವರ್ಷ ಪೆಟ್ರೋಲ್‌ ಜಿಎಸ್‌ಟಿಗಿಲ್ಲ: ಸುಶೀಲ್‌

ವಿಶ್ವದ ಹಲವು ದೇಶಗಳಲ್ಲಿ ಕೋವಿಡ್‌ 2 ಮತ್ತು 3ನೇ ಅಲೆಯ ಪರಿಣಾಮ ಕಚ್ಚಾತೈಲಕ್ಕೆ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ಸತತ 2ನೇ ದಿನ ತೈಲ ಬೆಲೆ ಇಳಿಕೆ ಮಾಡಿವೆ.

ಕಳೆದ ಮಾರ್ಚ್‌ ನಂತರ ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಿದ ಪರಿಣಾಮ ಪೆಟ್ರೋಲ್‌ ಬೆಲೆ ಲೀಗೆ. 21.58 ರು.ನಷ್ಟುಮತ್ತು ಡೀಸೆಲ್‌ ಬೆಲೆ ಲೀ.ಗೆ 19.18 ರು.ನಷ್ಟುಹೆಚ್ಚಳವಾಗಿತ್ತು.