Asianet Suvarna News Asianet Suvarna News

ತೈಲ ಬೆಲೆ ಮತ್ತೆ ಏರಿಕೆ: ಬೆಂಗ್ಳೂರಲ್ಲಿ 90 ರು. ಗಡಿಗೆ ಪೆಟ್ರೋಲ್‌ ದರ!

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಪರ್ವ ಮುಂದುವರಿಕೆ| ಬೆಂಗ್ಳೂರಲ್ಲಿ 90 ರು. ಗಡಿಗೆ ಪೆಟ್ರೋಲ್‌ ದರ| ಎರಡೂ ಉತ್ಪನ್ನಗಳ ದರವನ್ನು ತಲಾ 35 ಪೈಸೆ ಹೆಚ್ಚಳ

Petrol Diesel prices at record high increase by 35 paise per litre pod
Author
Bangalore, First Published Jan 27, 2021, 7:53 AM IST

ನವದೆಹಲಿ(ಜ.27): ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, ಮಂಗಳವಾರ ಎರಡೂ ಉತ್ಪನ್ನಗಳ ದರವನ್ನು ತಲಾ 35 ಪೈಸೆಯಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 88.95 ರು.ಗೆ ಮತ್ತು ಡೀಸೆಲ್‌ ದರ 80.84 ರು.ಗೆ ತಲುಪಿದೆ.

ಉಳಿದಂತೆ ದೆಹಲಿಯಲ್ಲಿ ಪೆಟ್ರೋಲ್‌ 86.05 ರು.ಗೆ, ಡೀಸೆಲ್‌ ದರ 762.3 ರು.ಗೆ, ಮುಂಬೈನಲ್ಲಿ ಪೆಟ್ರೋಲ್‌ 92.62 ರು.ಗೆ, ಡೀಸೆಲ್‌ 86.05 ರು.ಗೆ ಮುಟ್ಟಿದೆ. ಇದರೊಂದಿಗೆ ಕಳೆದ ಒಂದು ವಾರದ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಲೀ.ಗೆ 1 ರು.ನಷ್ಟು ಹೆಚ್ಚಳವಾದಂತಾಗಿದೆ. ಜಾಗತಿಕ ಮಾರುಉಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಸರ ಏರಿಸುತ್ತಿವೆ.

ಆದರೆ ಅಬಕಾರಿ ಸುಂಕ ಇಳಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕೆಂದು ವಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ.

Follow Us:
Download App:
  • android
  • ios