ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ, ಕೈಗೆಟುಕದ ಪೆಟ್ರೋಲ್ ಡೀಸೆಲ್ ಇಂದಿನ ದರ ಎಷ್ಟು?
ಕಳೆದ ಹಲವು ದಿನಗಳಿಂದ ಸ್ಥಿರವಾಗಿದ್ದ ಇಂದನ ದರದಲ್ಲಾಗಿರುವ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇಂದಿನ ಪೆಟ್ರೋಲ್ ಡೀಸೆಲ್ ದರ ಏಷ್ಟು?
ಬೆಂಗಳೂರು(ಜೂ.21) ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಸೇಲ್ಸ್ ಟ್ಯಾಕ್ಸ್ ದರ ಏರಿಕೆ ಬಳಿಕ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿ, ಮತ್ತೊಂದೆಂಡ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇಂದು(ಜೂ.21) ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.94 ರೂಪಾಯಿ ಆಗಿದೆ. ಜೂನ್ 16 ರಂದು ಕರ್ನಾಟಕ ಸರ್ಕಾರ ಇಂದನದ ಮೇಲಿನ ಸೇಲ್ಸ್ ಟ್ಯಾಕ್ಸ್ ಏರಿಕೆ ಮಾಡಿದೆ. ಪ್ರತಿ ಲೀಟರ್ ಮೇಲೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಜೂನ್ 15ಕ್ಕೆ 99.84 ರೂಪಾಯಿಯಿದ್ದ ಪೆಟ್ರೋಲ್ ದರ ಕರ್ನಾಟಕದಲ್ಲಿ ಏಕಾಏಕಿ 100ರ ಗಡಿ ದಾಟಿತ್ತು.
ದೆಹಲಿಯಲ್ಲಿ ಇಂದಿನ(ಜೂ.21)ರ ಪೆಟ್ರೋಲ್ ದರ 94.72 ರೂಪಾಯಿ ಪ್ರತಿ ಲೀಟರ್ ಆಗಿದ್ದರೆ, ಡೀಸೆಲ್ ದರ 87.62 ರೂಪಾಯಿ ಆಗಿದೆ. ಇನ್ನು ಚೆನ್ನೈಲ್ಲಿ ಇಂದಿನ ಪ್ರತಿ ಲೀಟರ್ ಪೆಟ್ರೋಲ್ ದರ 100.98 ರೂಪಾಯಿ ಆಗಿದ್ದರೆ, ಡೀಸೆಸ್ ದರ 92.56 ರೂಪಾಯಿ ಆಗಿದೆ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ.
ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ
ಬಾಗಲಕೋಟೆ: ಪೆಟ್ರೋಲ್ ದರ: 103.44 ರೂ
ಬೆಳಗಾವಿ: ಪೆಟ್ರೋಲ್ ದರ: 103.51 ರೂ
ಧಾರವಾಡ: ಪೆಟ್ರೋಲ್ ದರ: 102.62ರೂ
ಗದಗ: ಪೆಟ್ರೋಲ್ ದರ: 103.48 ರೂ,
ಹಾವೇರಿ: ಪೆಟ್ರೋಲ್ ದರ: 103.81ರೂ,
ಉತ್ತರ ಕನ್ನಡ: ಪೆಟ್ರೋಲ್ ದರ: 103.91ರೂ,
ವಿಜಯಪುರ: ಪೆಟ್ರೋಲ್ ದರ: 102.86 ರೂ,
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ:102.50 ರೂ,
ಬೆಂಗಳೂರು ನಗರ: ಪೆಟ್ರೋಲ್ ದರ:102.86 ರೂ,
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 103.48 ರೂ,
ಚಿತ್ರದುರ್ಗ: ಪೆಟ್ರೋಲ್ ದರ: 104.22ರೂ,
ದಾವಣಗೆರೆ: ಪೆಟ್ರೋಲ್ ದರ: 104.44 ರೂ,
ಕೋಲಾರ: ಪೆಟ್ರೋಲ್ ದರ: 103.15 ರೂ,
ರಾಮನಗರ: ಪೆಟ್ರೋಲ್ ದರ: 102.98 ರೂ,
ಶಿವಮೊಗ್ಗ: ಪೆಟ್ರೋಲ್ ದರ: 103.82ರೂ,
ತುಮಕೂರು: ಪೆಟ್ರೋಲ್ ದರ: 103.40ರೂ,
ಬಳ್ಳಾರಿ: ಪೆಟ್ರೋಲ್ ದರ: 104.89 ರೂ,
ಬೀದರ್: ಪೆಟ್ರೋಲ್ ದರ: 104.47 ರೂ,
ಕಲಬುರಗಿ: ಪೆಟ್ರೋಲ್ ದರ: 103.06 ರೂ,
ಕೊಪ್ಪಳ: ಪೆಟ್ರೋಲ್ ದರ: 103.68 ರೂ,
ರಾಯಚೂರು: ಪೆಟ್ರೋಲ್ ದರ: 103.78 ರೂ,
ವಿಜಯನಗರ: ಪೆಟ್ರೋಲ್ ದರ: 103.84 ರೂ,
ಯಾದಗಿರಿ: ಪೆಟ್ರೋಲ್ ದರ: 103.37ರೂ,
ಚಾಮರಾಜನಗರ: ಪೆಟ್ರೋಲ್ ದರ: ರೂ 102.86,
ಚಿಕ್ಕಮಗಳೂರು: ಪೆಟ್ರೋಲ್ ದರ: 104.91 ರೂ,
ದಕ್ಷಿಣ ಕನ್ನಡ: ಪೆಟ್ರೋಲ್ ದರ 102.38: ರೂ,
ಹಾಸನ: ಪೆಟ್ರೋಲ್ ದರ: 103.06 ರೂ,
ಕೊಡಗು: ಪೆಟ್ರೋಲ್ ದರ: 103.90ರೂ,
ಮಂಡ್ಯ: ಪೆಟ್ರೋಲ್ ದರ: 102.66ರೂ,
ಮೈಸೂರು : ಪೆಟ್ರೋಲ್ ದರ: 102.41 ರೂ,
ಉಡುಪಿ: ಪೆಟ್ರೋಲ್ ದರ: 103.28ರೂ,
ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ರಾಜ್ಯದ್ಯಂತ ಪ್ರತಿಭಟನೆ ನಡೆಸುತ್ತಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ದುಡ್ಡಿಲ್ಲ. ಸರ್ಕಾರದ ಖಜಾನೆಯ ಬಹುತೇಕ ಎಲ್ಲಾ ಮೊತ್ತ ಕಾಂಗ್ರೆಸ್ ಉಚಿತ ಗ್ಯಾರೆಂಟಿಗೆ ನೀಡುತ್ತಿದೆ. ಇದೀಗ ಆದಾಯ ಕ್ರೋಡಿಕರಿಸಲು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರೆಗಿ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಬಿಜೆಪಿ ಜಿಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇಂದನ ದರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಕೈಸುಡುತ್ತಿದೆ. ಇದರ ನಡುವೆ ದರ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, 2000 ಕೊಟ್ಟು 4000 ಕಿತ್ಕೊತಿದ್ದಾರೆ: ಪ್ರಹ್ಲಾದ್ ಜೋಶಿ ಕಿಡಿ