Asianet Suvarna News Asianet Suvarna News

ದುಬಾರಿ ದುನಿಯಾದಲ್ಲಿ ಪೆಟ್ರೋಲ್ ಡೀಸೆಲ್ ಇಂದಿನ ಬೆಲೆ, ಕರ್ನಾಟದ ಜಿಲ್ಲೆಗಳಲ್ಲಿ ಎಷ್ಟಿದೆ?

ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ? ಬೆಲೆ ಏರಿಕೆ ಬಳಿಕ ನಿಮ್ಮ ಪಟ್ಟಣದಲ್ಲಿ ಇಂಧನ ದುಬಾರಿಯಾಗಿದೆಯಾ? ಇಲ್ಲಿದೆ ಇಂದಿನ ಇಂಧನ ಬೆಲೆ.
 

Petrol Diesel Price in Bengaluru check latest fuel rates in district wise Karnataka ckm
Author
First Published Jun 27, 2024, 7:21 AM IST

ಬೆಂಗಳೂರು(ಜೂ.27) ಕರ್ನಾಟಕದಲ್ಲಿ ಬೆಲೆ ಏರಿಕೆ ಬಿಸಿ ತಟ್ಟತೊಡಗಿದೆ. ಆಟೋ ಚಾಲಕರು ಪ್ರಯಾಣ ಹೆಚ್ಚಳದ ಚರ್ಚೆಯಲ್ಲಿದ್ದರೆ, ಹೊಟೆಲ್ ಉದ್ಯಮ ತಿನಿಸುಗಳ ಬೆಲೆ ಏರಿಕೆಗೆ ಸಜ್ಜಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ರಾಜ್ಯದಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಬೆಂಗಳೂರಿನಲ್ಲಿಂದು ಪೆಟ್ರೋಲ್ ಲೀಟರ್ ಬೆಲೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 88.94 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆ ಆಧರಿಸಿ ತೈಲ ಮಾರುಕಟ್ಟೆ ಕಂಪನಿ(OMC)ಪ್ರತಿ ದಿನ ಬೆಳಗ್ಗೆ ಬೆಲೆ ಘೋಷಿಸುತ್ತಿದೆ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸ್ಥಿರತೆ ಕಾಪಾಡಿಕೊಂಡಿರುವುದು ಕೊಂಚ ಸಮಾಧಾನ. 

ಜೂನ್ 16ರಂದು ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಮೇಲೆ ಮಾರಾಟ ತರಿಗೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಾದ ಬಳಿಕ ಹೆಚ್ಚು ಕಡಿಮೆ ಕರ್ನಾಟಕದಲ್ಲಿ ಇಂಧನ ದರ ಸ್ಥಿರವಾಗಿದೆ. ಆದರೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಮಾರ್ಚ್ ತಿಂಗಳಿಂದ ಸ್ಥಿರತೆ ಕಾಪಾಡಿಕೊಂಡಿದೆ. ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಕಡಿತ ಮಾಡಿತ್ತು. ಇದನ್ನು ಹೊರತುಪಡಿಸಿದರೆ. 2022ರ ಮೇ ತಿಂಗಳಿನಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಸ್ಥಿರತೆ ಕಾಪಾಡಿಕೊಂಡು ಬಂದಿದೆ. 

ಚಿನ್ನದಲ್ಲಿ ಹೂಡಿಕೆ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ 5 ವಿಷಯಗಳು..

ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 94.72 ರೂಪಾಯಿ, ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 100.98 ರೂಪಾಯಿ, ಡೀಸೆಲ್ 92.34 ರೂಪಾಯಿ ಆಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರದ ಪಟ್ಟಿ ಇಲ್ಲಿದೆ.  
ಬಾಗಲಕೋಟೆ: ಪೆಟ್ರೋಲ್ ದರ:  103.57 
ಬೆಳಗಾವಿ: ಪೆಟ್ರೋಲ್ ದರ:  103.83
ಧಾರವಾಡ: ಪೆಟ್ರೋಲ್ ದರ: 102.63 
ಗದಗ: ಪೆಟ್ರೋಲ್ ದರ:  103.74
ಹಾವೇರಿ: ಪೆಟ್ರೋಲ್ ದರ:  103.53
ಉತ್ತರ ಕನ್ನಡ: ಪೆಟ್ರೋಲ್ ದರ: 103.91 
ವಿಜಯಪುರ: ಪೆಟ್ರೋಲ್ ದರ: 103.05  
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.94  
ಬೆಂಗಳೂರು ನಗರ: ಪೆಟ್ರೋಲ್ ದರ: 102.86
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 103.62
ಚಿತ್ರದುರ್ಗ: ಪೆಟ್ರೋಲ್ ದರ: 103.68
ದಾವಣಗೆರೆ: ಪೆಟ್ರೋಲ್ ದರ: 104.33
ಕೋಲಾರ: ಪೆಟ್ರೋಲ್ ದರ: 102.73 
ರಾಮನಗರ: ಪೆಟ್ರೋಲ್ ದರ: 103.13 
ಶಿವಮೊಗ್ಗ: ಪೆಟ್ರೋಲ್ ದರ:  104.59
ತುಮಕೂರು: ಪೆಟ್ರೋಲ್ ದರ: 103.40  
ಬಳ್ಳಾರಿ: ಪೆಟ್ರೋಲ್ ದರ:  104.89
ಬೀದರ್: ಪೆಟ್ರೋಲ್ ದರ: 103.47 
ಕಲಬುರಗಿ: ಪೆಟ್ರೋಲ್ ದರ: 103.15 
ಕೊಪ್ಪಳ: ಪೆಟ್ರೋಲ್ ದರ:  104.17
ರಾಯಚೂರು: ಪೆಟ್ರೋಲ್ ದರ: 103.66 
ವಿಜಯನಗರ: ಪೆಟ್ರೋಲ್ ದರ: 104.25
ಯಾದಗಿರಿ: ಪೆಟ್ರೋಲ್ ದರ: 103.74
ಚಾಮರಾಜನಗರ: ಪೆಟ್ರೋಲ್ ದರ:103 
ಚಿಕ್ಕಮಗಳೂರು: ಪೆಟ್ರೋಲ್ ದರ:104.17  
ದಕ್ಷಿಣ ಕನ್ನಡ: ಪೆಟ್ರೋಲ್ ದರ: 102.17 
ಹಾಸನ: ಪೆಟ್ರೋಲ್ ದರ: 102.58
ಕೊಡಗು: ಪೆಟ್ರೋಲ್ ದರ: 104.32 
ಮಂಡ್ಯ: ಪೆಟ್ರೋಲ್ ದರ: 102.52
ಮೈಸೂರು : ಪೆಟ್ರೋಲ್ ದರ: 102.60 
ಉಡುಪಿ: ಪೆಟ್ರೋಲ್ ದರ: 102.35

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?
 

Latest Videos
Follow Us:
Download App:
  • android
  • ios