ಪೆಟ್ರೋಲ್ ದರದಲ್ಲಿ ಕೆಲವೆಡೆ ಬದಲಾವಣೆಬೆಂಗಳೂರಿನ ದರದಲ್ಲಿ ಕೊಂಚ ಇಳಿಕೆಮೈಸೂರು, ಕಲಬುರಗಿಯಲ್ಲಿ ಏರಿಕೆ 

ಬೆಂಗಳೂರು (ಫೆ.16): ಜಗತ್ತು ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಆತಂಕದಲ್ಲಿ ನಲುಗಿತ್ತು. ಇನ್ನೇನು ವೈರಸ್ ನ ಆತಂಕ ಮುಕ್ತಾಯವಾಯಿತು ಎನ್ನುವಾಗಲೇ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಯುದ್ಧಾಂತಕದ ಭೀತಿಯಿಂದಾಗಿ ಕಳೆದ ಕೆಲವು ತಿಂಗಳಿನಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ವಿಪರೀತವಾಗಿ ಏರಿಕೆಯಾಗಿದೆ. 2014ರ ಬಳಿಕ ಮೊದಲ ಬಾರಿಗೆ ಕಚ್ಚಾತೈಲದ 1 ಬ್ಯಾರಲ್ ಗೆ 100 ಡಾಲರ್ ಗಡಿ ಮುಟ್ಟಿದೆ. ಇದರ ಪ್ರಭಾವ ದೇಶೀಯ ತೈಲ ಮಾರುಕಟ್ಟೆಯ ಮೇಲೂ ಆಗಲಿರುವ ಸಂಭವ ಅಧಿಕವಾಗಿದೆ. ಸರ್ಕಾರ ಹಾಗೂ ತೈಲ ಕಂಪನಿಗಳು ಈ ಹೊರೆಯನ್ನು ಜನತೆಗೆ ನೀಡಿಲ್ಲ. ಆದರೆ, ಈಗಿರುವ ವಿಷಮ ಸ್ಥಿತಿ ಗಮನಿಸಿದರೆ ಮುಂದಿನ ಕೆಲ ದಿನಗಳಲ್ಲೇ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗುವ ಸಂಭವ ಕಾಣಿಸುತ್ತಿದೆ. 

ಇಂಧನ ದರದಲ್ಲಿ ನಿರಂತರವಾಗಿ ಆಗುತ್ತಿದ್ದ ಏರಿಕೆಯಿಂದಾಗಿ ರೋಸಿಹೋಗಿದ್ದ ಜನತೆಗೆ ದೀಪಾವಳಿಯ ಉಡುಗೊರೆ ಎನ್ನುವ ರೀತಿಯಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು (Excise Duty) ಕಡಿತ ಮಾಡಿತ್ತು. ದೇಶದ ಸಾಮಾನ್ಯ ಜನತೆ ಪೆಟ್ರೋಲ್ ಹಾಗೂ ಡೀಸೆಲ್ ದರ ಇನ್ನಷ್ಟು ತಗ್ಗಬೇಕು ಎಂದು ಬಯಸಿದ್ದರೂ, ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಅಲ್ಪ ಸಮಾಧಾನ ಕಂಡಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಫೆ.24) ಪೆಟ್ರೋಲ್ ಹಾಗೂ ಡೀಸೆಲ್ ದರದ ವಿವರ.

"
ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?
* ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂಧನ ದರದಲ್ಲಿ ಅಲ್ಪ ಬದಲಾವಣೆಯಾಗಿದೆ. ಬುಧವಾರ 7 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್ ದರ ಇಂದು 7 ಪೈಸೆ ಕಡಿಮೆಯಾಗಿ 100.58 ರೂಪಾಯಿಗೆ ಮುಟ್ಟಿದೆ. ಡೀಸೆಲ್ ದರದಲ್ಲೂ 7 ಪೈಸೆ ಇಳಿಕೆಯಾಗಿದ್ದು 85.01 ರೂಪಾಯಿ ಆಗಿದೆ.


*ಹುಬ್ಬಳ್ಳಿಯಲ್ಲಿ (Hubli) ಪೆಟ್ರೋಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 100.30 ರೂಪಾಯಿ ಆಗಿದ್ದರೆ, ಡೀಸೆಲ್ ದರದಲ್ಲಿ 1 ಪೈಸೆ ಕಡಿಮೆಯಾಗಿದ್ದು 84.78 ರೂಪಾಯಿ ಆಗಿದೆ.

*ಕರಾವಳಿ ಮಂಗಳೂರಿನಲ್ಲಿ(Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. 

*ಮೈಸೂರಿನಲ್ಲಿ(Mysore)ಪೆಟ್ರೋಲ್ ದರದಲ್ಲಿ 24 ಪೈಸೆ ಹಾಗೂ ಡೀಸೆಲ್ ದರದಲ್ಲಿ 21 ಪೈಸೆ ಏರಿಕೆಯಾಗಿದೆ. ಮೈಸೂರಿನಲ್ಲಿ ಇಂದಿನ ಪೆಟ್ರೋಲ್ ದರ 100.32 ರೂಪಾಯಿ ಆಗಿದ್ದರೆ, ಡೀಸೆಲ್ ದರ 84.77 ರೂಪಾಯಿ ಆಗಿದೆ.
*ಕಲಬುರಗಿಯಲ್ಲಿ(Kalburgi) ಪೆಟ್ರೋಲ್ ದರ ಲೀಟರ್ ಗೆ 100.89ರೂ. ಹಾಗೂ ಡೀಸೆಲ್ ಗೆ 85.31ರೂ. ಇದೆ. ಪೆಟ್ರೋಲ್ ದರದಲ್ಲಿ 15 ಪೈಸೆ ಏರಿಕೆ ಹಾಗೂ ಡೀಸೆಲ್ ದರದಲ್ಲಿ 14 ಪೈಸೆ ಕಡಿಮೆಯಾಗಿದೆ.

Russia Ukraine Crisis:ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ಏರಿಕೆ; ಗಗನಕ್ಕೇರಿದ ಚಿನ್ನದ ದರ; ಭಾರತದ ಮೇಲೇನು ಪರಿಣಾಮ?
ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

Cryptocurrency Disclaimers: ಇದು ಅಪಾಯಕಾರಿ: ಕ್ರಿಪ್ಟೋ ಜಾಹೀರಾತರಲ್ಲಿ ಎಚ್ಚರಿಕೆ ಸಂದೇಶ ಮುದ್ರಣ ಕಡ್ಡಾಯ!
GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.