ನವದೆಹಲಿ[ಜ.12]: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಪರಿಣಾಮ ಕಳೆದ ಹಲವು ದಿನಗಳಿಂದ ಇಳಿಮುಖವಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಮತ್ತೆ ಏರಿಕೆಯಾಗಿದೆ.

ಈ ಪ್ರಕಾರ ಪ್ರತೀ ಪೆಟ್ರೋಲ್‌ ದರವು 19 ಪೈಸೆ ಹಾಗೂ ಡೀಸೆಲ್‌ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದೆ. ಈ ಮೂಲಕ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 71.14 ರು. ಇದ್ದ ಪ್ರತೀ ಲೀಟರ್‌ ಪೆಟ್ರೋಲ್‌ ದರ 71.34 ರು.ಗೆ ಏರಿಕೆಯಾಗಿದೆ. ಅದೇ ರೀತಿ ಡೀಸೆಲ್‌ ದರವೂ ಸಹ 64.58 ರು.ಯಿಂದ 64.87 ರು.ಗೆ ಜಿಗಿದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಪೆಟ್ರೋಲ್‌ ದರ 68.88 ರು.ಯಿಂದ 69.07 ರು.ಗೆ ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ 74.72 ರು. ಮತ್ತು 65.73 ರು.ಗೆ ಏರಿಕೆಯಾಗಿದೆ.