ದೇಶದಲ್ಲಿ ದಿನೇ ದಿನೇ ಏರಿಕೆಯಾಗಿ ಗ್ರಾಹಕರನ್ನ ಕಂಗಾಲಾಗಿಸಿದ್ದ ಪೆಟ್ರೋಲ್ ಡೀಸೆಲ್ ದರ ಇದೀಗ ಇಳಿಕೆಯಾಗಿ ಗ್ರಾಹಕರಿಗೆ ಕೊಂಚ ನಿರಾಳವಾಗಿದೆ. 

ನವದೆಹಲಿ (ಏ.16): ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು 15 ದಿನಗಳ ಬಳಿಕ ಬದಲಾವಣೆಯಾಗಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಗುರುವಾರ ಕ್ರಮವಾಗಿ 16 ಪೈಸೆ ಹಾಗೂ 14 ಪೈಸೆ ಇಳಿಕೆ ಮಾಡಿವೆ. 

ಬಹುದಿನಗಳ ಬಳಿಕ ಚಿನ್ನ ಅಗ್ಗ, ಗ್ರಾಹಕರಿಗೆ ಆನಂದ: ಹೀಗಿದೆ ಇಂದಿನ ದರ! ...

ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 93.43 ರು. ಆಗಿದೆ. ಇದೇ ವೇಳೆ ಡೀಸೆಲ್‌ ದರ ಲೀಟರ್‌ಗೆ 85.60 ಪೈಸೆ ಆಗಿದೆ. ಮಾ.30ರಂದು ಪೆಟ್ರೋಲ್‌ 22 ಪೈಸೆ ಹಾಗೂ ಡೀಸೆಲ್‌ 23 ಪೈಸೆ ಇಳಿಕೆ ಆಗಿತ್ತು. ಆ ಬಳಿಕ ತೈಲ ದರದಲ್ಲಿ ವ್ಯತ್ಯಾಸ ಆಗಿರಲಿಲ್ಲ.