ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಿಢೀರ್ ಏರಿಕೆ| ಇರಾನ್-ಅಮೆರಿಕ ನಡುವೆ ಯುದ್ಧ ಭೀತಿ ಹಿನ್ನೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಕಚ್ಚಾ ತೈಲದ ಬೆಲೆ| ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್'ಗೆ 70 ಡಾಲರ್| ದೇಶದ ಮಹಾ ನಗರಗಳಲ್ಲಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ|
ನವದೆಹಲಿ(ಜ.05): ಯುದ್ಧದ ಹೊಸ್ತಿಲಲ್ಲಿರುವ ಅಮೆರಿಕ-ಇರಾನ್ ಪರಸ್ಪರ ಬುಸುಗುಡುತ್ತಿರುವುದು ಒಂದೆಡೆ ಇರಲಿ, ಇವೆರಡೂ ರಾಷ್ಟ್ರಗಳ ನಡುವಿನ ವೈಮನಸ್ಸಿಗೆ ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಪರದಾಡುವಂತಾಗಿದೆ.
ಅಮೆರಿಕ-ಇರಾನ್ ವೈಮನಸ್ಸಿನ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ.
ಅಮೆರಿಕ-ಇರಾನ್ ಮಧ್ಯೆ ಯುದ್ಧ ನಡೆದರೆ ಭಾರತದಲ್ಲಿ ತೈಲಬೆಲೆ ಗಗನಕ್ಕೆ!
ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 5 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 12 ಪೈಸೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವ ಇದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಭಾರತೀಯ ತೈಲ ನಿಗಮ ತನ್ನ ವೆಬ್‌ಸೈನ್‌ಲ್ಲಿ ಹೊಸ ದರ ಪಟ್ಟಿ ಪ್ರಕಟಿಸಿದ್ದು, ದೇಶದ ಎಲ್ಲಾ ಮಹಾನಗರಗಳಲ್ಲಿ ತೈಲ ಬೆಲೆ ಏರಿಕೆಯಾಗಿದೆ.
ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯತ್ತ ಗಮನಹರಿಸುವುದಾದರೆ.
ರಾಷ್ಟ್ರ ರಾಜಧಾನಿ ನವದೆಹಲಿ:
ಪೆಟ್ರೋಲ್-75.74 ರೂ.
ಡೀಸೆಲ್-68.79 ರೂ.
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಪೆಟ್ರೋಲ್-78.33 ರೂ.
ಡೀಸೆಲ್-71.15 ರೂ.
ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್- 81.33 ರೂ.
ಡೀಸೆಲ್-72.14 ರೂ.
ತಮಿಳುನಾಡು ರಾಜಧಾನಿ ಚೆನ್ನೈ:
ಪೆಟ್ರೋಲ್-78.69 ರೂ.
ಡೀಸೆಲ್-72. 08 ರೂ.
ರಾಜ್ಯ ರಾಜಧಾನಿ ಬೆಂಗಳೂರು:
ಪೆಟ್ರೋಲ್-78.28 ರೂ.
ಡೀಸೆಲ್-71 ರೂ.
ಇನ್ನು ಹೊಸ ವರ್ಷದ ಮೊದಲ ಏಳು ದಿನದಲ್ಲೇ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 60 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ ಒಟ್ಟು 83 ಪೈಸೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್'ಗೆ 70 ಡಾಲರ್ ಆಗಿದೆ.