ನಮ್ಮ ಮನೆಯ ಅನೇಕ ಸ್ಥಳಗಳು ಖಾಲಿ ಇರುತ್ತವೆ. ಅದನ್ನು ಹೇಗೆ ಸದ್ಭಳಕೆ ಮಾಡ್ಬೇಕೆನ್ನುವುದು ನಮಗೆ ತಿಳಿದಿರುವುದಿಲ್ಲ. ಅದ್ರಲ್ಲಿ ಟೆರೆಸ್ ಕೂಡ ಒಂದು. ಅನೇಕರ ಮನೆಯ ಟೆರೆಸ್ ಖಾಲಿ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ, ಮನೆಯಲ್ಲಿಯೇ ಆರಾಮವಾಗಿ ನಾವು ಆದಾಯ ಗಳಿಸಬಹುದು.
ಗಳಿಕೆ (Earn)ಗೆ ಅನೇಕ ದಾರಿಗಳಿವೆ. ಯಾವುದು ಸರಿಯಾದ ಮಾರ್ಗ ಹಾಗೂ ಯಾವುದ್ರಿಂದ ಹೆಚ್ಚಿನ ಲಾಭ (Profit)ಪಡೆಯಬಹುದು ಎಂಬುದನ್ನು ತಿಳಿದುಕೊಂಡು ನಾವು ವ್ಯವಹಾರ (Business )ಶುರು ಮಾಡ್ಬೇಕಾಗುತ್ತದೆ. ಬುದ್ಧಿವಂತಿಕೆಯಿಂದ ಕೆಲಸ (Work) ಮಾಡಿ ಹಣ ಗಳಿಸಬಹುದು. ಮನೆಯ ಟೆರೆಸ್ ಖಾಲಿಯಿದ್ದರೆ ಅಲ್ಲಿಯೇ ಅನೇಕ ರೀತಿಯ ವ್ಯವಹಾರವನ್ನು ನಾವು ಶುರು ಮಾಡ್ಬಹುದು. ನಗರ ಪ್ರದೇಶಗಳಲ್ಲಿರುವ ಜನರು ಬೆಳೆ ಬೆಳೆಯಲು ಅಥವಾ ಬೇರೆ ಯಾವುದೋ ವ್ಯವಹಾರಕ್ಕೆ ಭೂಮಿಯಿಲ್ಲವೆಂಬ ಬೇಸರ ವ್ಯಕ್ತಪಡಿಸುತ್ತಾರೆ. ಆದ್ರೆ ಮನೆಯ ಟೆರೆಸ್ ನಿಮಗೆ ಗಳಿಕೆಯ ಮೂಲವಾಗ್ಬಹುದು. ಇದಕ್ಕಾಗಿ ನೀವು ಸಾಕಷ್ಟು ಹೂಡಿಕೆ ಮಾಡಬೇಕಾಗಿಲ್ಲ. ಆದರೂ ಕೆಲವು ಎಚ್ಚರಿಕೆಗಳನ್ನು ಖಂಡಿತವಾಗಿಯೂ ತೆಗೆದುಕೊಳ್ಳಬೇಕಾಗುತ್ತದೆ. ಸ್ವಂತ ಮನೆಯಿಲ್ಲ ಅಥವಾ ಟೆರೆಸ್ ಇಲ್ಲ ಎನ್ನುವವರು ಬಾಡಿಗೆಗೆ ಟೆರೆಸ್ ಪಡೆದು ಅಲ್ಲಿ ವ್ಯವಹಾರ ಶುರು ಮಾಡ್ಬಹುದು. ಕೆಲವು ವ್ಯವಹಾರಗಳಿಗೆ ಬ್ಯಾಂಕ್‌ಗಳು ಸಾಲವನ್ನೂ ನೀಡುತ್ತವೆ. ಸೌರ ಉದ್ಯಮ, ದೂರಸಂಪರ್ಕ ಉದ್ಯಮ, ಕೃಷಿ ಉದ್ಯಮಗಳಿಗೆ ಬ್ಯಾಂಕ್ ಸಾಲವನ್ನು ನೀಡುತ್ತದೆ. ಇಂದು ಟೆರೆಸ್ ಮೇಲೆ ಏನೆಲ್ಲ ವ್ಯವಹಾರ ಶುರು ಮಾಡಿ,ಆರಾಮವಾಗಿ ಹಣ ಗಳಿಕೆ ಮಾಡ್ಬಹುದು ಎಂಬುದನ್ನು ಹೇಳ್ತೇವೆ.
ಆದಾಯಕ್ಕೆ ಮೂಲವಾಗ್ಬಹುದು ಟೆರೆಸ್ :
ಟೆರೆಸ್ ಕೃಷಿ : ಭಾರತದಲ್ಲಿ ಟೆರೆಸ್ ಕೃಷಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕಾಗಿ ಕಟ್ಟಡದ ಮೇಲ್ಭಾಗದಲ್ಲಿ ಹಸಿರು ಮನೆ ನಿರ್ಮಿಸಬೇಕು. ಅಲ್ಲಿ, ತರಕಾರಿ ಗಿಡಗಳನ್ನು ಪಾಲಿಬ್ಯಾಗ್‌ಗಳಲ್ಲಿ ನೆಡಬಹುದು ಮತ್ತು ಹನಿ ವ್ಯವಸ್ಥೆಯ ಮೂಲಕ ನಿರಂತರ ನೀರಾವರಿ ಮಾಡಬಹುದು. ತಾಪಮಾನ ಮತ್ತು ತೇವಾಂಶವನ್ನು ನಿಯಂತ್ರಿಸಲು ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ. ಪಾಲಿಬ್ಯಾಗ್‌ಗೆ ಮಣ್ಣು ಮತ್ತು ಕೋಕೋಪೀಟ್ ತುಂಬಿಸಬೇಕು. ಇದಕ್ಕಾಗಿ ಸಾವಯವ ಗೊಬ್ಬರವನ್ನೂ ಬಳಸಬಹುದು. ಸಸ್ಯಗಳು ಸೊಳ್ಳೆಗಳು ಅಥವಾ ಇತರ ಕಾಯಿಲೆಗಳಿಂದ ಸೋಂಕಿಗೆ ಒಳಗಾದಾಗ ಕೀಟನಾಶಕಗಳನ್ನು ಬಳಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸ್ಥಳೀಯ ಅಂಗಡಿಗಳನ್ನು ಸಂಪರ್ಕಿಸಿ ನೀವು ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದು.
ಸೋಲಾರ್ ಪ್ಲಾಂಟ್ : ಸೋಲಾರ್ ಶಕ್ತಿ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರ ಗಮನ ಸೆಳೆದಿದೆ. ಸರ್ಕಾರವೂ ಇದ್ರ ಬಗ್ಗೆ ಪ್ರಚಾರ ಮಾಡುತ್ತಿದೆ. ಟೆರೆಸ್ ಮೇಲೆ ಸೋಲಾರ್ ಪ್ಲಾಂಟ್ ಸ್ಥಾಪಿಸಲು ನೀವು ಆರಾವಾಗಿ ಈ ವ್ಯವಹಾರ ಶುರು ಮಾಡಬಹುದು. ಇದು ನಿಮ್ಮ ವಿದ್ಯುತ್ ಬಿಲ್ ಉಳಿಸುತ್ತದೆ. ನಮ್ಮ ನಗರದ ಡಿಸ್ಕಮ್ ಅನ್ನು ನೀವು ಸಂಪರ್ಕಿಸಬೇಕು. ಅವರು ನಿಮ್ಮ ಮನೆಗೆ ಮೀಟರ್ ಅಳವಡಿಸುತ್ತಾರೆ. ಇದ್ರಿಂದ ಡಿಸ್ಕಮ್ ಗೆ ನೀವು ಎಷ್ಟು ವಿದ್ಯುತ್ ಮಾರಾಟ ಮಾಡಿದ್ದೀರಿ ಎಂದು ತಿಳಿಯುತ್ತದೆ. ಪ್ರತಿ ರಾಜ್ಯದ ಸೌರ ನೀತಿಯ ಆಧಾರದ ಮೇಲೆ ಗಳಿಕೆಯ ದರಗಳನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ದೆಹಲಿಯಲ್ಲಿ, ಡಿಸ್ಕಮ್‌ಗಳು ಪ್ರತಿ ಯೂನಿಟ್‌ಗೆ 5.30 ರೂಪಾಯಿ ಆಧಾರದ ಮೇಲೆ ಪಾವತಿ ಮಾಡುತ್ತವೆ. ಸೋಲಾರ್ ಪ್ಲಾಂಟ್ ಪ್ರತಿ ಕಿಲೋವ್ಯಾಟ್‌ಗೆ ಕೇವಲ 70 ರಿಂದ 80 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಒಮ್ಮೆ ಶುರು ಮಾಡಿದ್ರೆ 25 ವರ್ಷಗಳವರೆಗೆ ಆದಾಯವನ್ನು ಪಡೆಯಬಹುದು.
Covid Effect: ಕೊರೋನಾ ಹೊಡೆತಕ್ಕೆ ನಲುಗಿದ ಮೆಟ್ರೋ: 905 ಕೋಟಿ ನಷ್ಟ!
ಮೊಬೈಲ್ ಟವರ್ : ಟೆರೆಸ್ ಖಾಲಿಯಿದ್ದರೆ ಅದನ್ನು ನೀವು ಮೊಬೈಲ್ ಕಂಪನಿಗಳಿಗೆ ಬಾಡಿಗೆಗೆ ನೀಡಬಹುದು. ಮೊಬೈಲ್ ಟವರ್ ಅಳವಡಿಸಿದ ನಂತ್ರ ಪ್ರತಿ ತಿಂಗಳು ಮೊಬೈಲ್ ಕಂಪನಿ ನಿಮಗೆ ಆಕರ್ಷಕ ಮೊತ್ತವನ್ನು ನೀಡುತ್ತವೆ. ಆದ್ರೆ ಇದನ್ನು ಅಳವಡಿಸಲು ನೀವು ನೆರೆಹೊರೆಯವರ ಅನುಮತಿ ಪಡೆಯಬೇಕು. ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಅನುಮತಿಯನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ.
RUSSIA UKRAINE CRISIS: ಉಕ್ರೇನ್ ಬರೀ ದೇಶವಲ್ಲ, ಹೊಸ ಯಗದ ತಂತ್ರಜ್ಞಾನ ಕಂಪನಿಗಳ ಬೇರು!
ಜಾಹೀರಾತು ಫಲಕ : ಇದು ಕೂಡ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಮನೆ ಕಟ್ಟಡ ಎತ್ತರದಲ್ಲಿದ್ದರೆ ಹಾಗೂ ಜನನಿಬಿಡಿ ಪ್ರದೇಶದಲ್ಲಿದ್ದರೆ ನೀವು ಆರಾಮವಾಗಿ ಜಾಹೀರಾತು ಫಲಕವನ್ನು ಅಳವಡಿಸಬಹುದು. ಜಾಹೀರಾತು ಏಜೆನ್ಸಿಗಳನ್ನು ಸಂಪರ್ಕಿಸಿ ನೀವು ಹೋರ್ಡಿಂಗ್ ಹಾಕಬೇಕು.
