*  ಲಾಕ್‌ಡೌನ್‌, ಜನರ ಓಡಾಡಕ್ಕೆ ನಿರ್ಬಂಧ, ಕಂಪನಿಗಳ ವರ್ಕ್ಫ್ರಂ ಹೋಂ ಹೊಡೆತ*  ಇಡೀ ವರ್ಷದಲ್ಲಿ ಕೇವಲ 2-3 ತಿಂಗಳು ಮಾತ್ರ ಸೇವೆ*  2019-20ರ ಸಾಲಿಗೆ ಹೋಲಿಸಿದರೆ ಶೇ.83ರಷ್ಟು ಆದಾಯ ಕಳೆದುಕೊಂಡ ಮೆಟ್ರೋ ನಿಗಮ 

ಬೆಂಗಳೂರು(ಫೆ.24): ನಮ್ಮ ಮೆಟ್ರೋ(Namma Metro) ನಿಗಮ ತನ್ನ 2020-21ರ ಸಾಲಿನಲ್ಲಿ ಕೇವಲ 81.97 ಕೋಟಿ ಆದಾಯಗಳಿಸಿದೆ. 2019-20ರ ಸಾಲಿಗೆ ಹೋಲಿಸಿದರೆ ಶೇ.83ರಷ್ಟು ಆದಾಯವನ್ನು(Revenue) ಮೆಟ್ರೋ ನಿಗಮ ಕಳೆದುಕೊಂಡಿದೆ. ಒಟ್ಟಾರೆ ನಮ್ಮ ಮೆಟ್ರೋ ಕೊರೋನಾ(Coronavirus) ವರ್ಷದಲ್ಲಿ 905 ಕೋಟಿ ನಷ್ಟ ಅನುಭವಿಸಿದೆ.

2020ರ ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಕೋವಿಡ್‌(Covid-19) ಕಾರಣದಿಂದ ಲಾಕ್‌ಡೌನ್‌(Lockdown) ಜಾರಿಯಾದ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ಬಂದ್‌ ಆಗಿತ್ತು. ಆ ಬಳಿಕ ಸೆಪ್ಟೆಂಬರ್‌ 6ಕ್ಕೆ ಮೆಟ್ರೋ ಸೇವೆ ಭಾಗಶಃ ಆರಂಭಗೊಂಡಿತ್ತು. ಆ ಆರ್ಥಿಕ ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಮೆಟ್ರೋ ಸೇವೆ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿತ್ತು. ಜನರ ಓಡಾಟಕ್ಕಿದ್ದ ನಿರ್ಬಂಧ ಮತ್ತು ಅನೇಕ ಕಂಪನಿಗಳು ಮನೆಯಿಂದಲೇ ಕೆಲಸಕ್ಕೆ ಒತ್ತು ನೀಡಿದ್ದು ಮೆಟ್ರೋದ ಗಳಿಕೆಯ ಮೇಲೆ ಭಾರಿ ಹೊಡೆತ ನೀಡಿದೆ.

Miyawaki Forest in Bengaluru Metro: ಜಪಾನ್‌ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!

2017-18ರ ಸಾಲಿನಲ್ಲಿ .539 ಕೋಟಿ, 2018-19ರಲ್ಲಿ .536 ಕೋಟಿ ಮತ್ತು 2019-20ರಲ್ಲಿ .476 ಕೋಟಿ ಆದಾಯವನ್ನು ಮೆಟ್ರೋ ಗಳಿಸಿತ್ತು. 2019-20 ಆರ್ಥಿಕ ವರ್ಷದ ಕೊನೆಯ ತಿಂಗಳಿ(ಮಾರ್ಚ್‌)ನಲ್ಲಿ ಕೋವಿಡ್‌ನ ಆತಂಕ ಮತ್ತು ಲಾಕ್‌ಡೌನ್‌ ಹೇರಿದ್ದರಿಂದ ಆ ಸಾಲಿನಲ್ಲಿ ಮೆಟ್ರೋದ ಆದಾಯ 500 ಕೋಟಿ ತಲುಪಲಿಲ್ಲ.

2020ರ ಆರ್ಥಿಕ ವರ್ಷ ಲಾಕ್‌ಡೌನ್‌ನಿಂದಲೇ ಆರಂಭಗೊಂಡಿತ್ತು. ಸುಮಾರು 6 ತಿಂಗಳ ಕಾಲ ಮೆಟ್ರೋ ಸೇವೆ ಮುಚ್ಚಿತ್ತು. ಸೆಪ್ಟೆಂಬರ್‌ 6ಕ್ಕೆ ಮೆಟ್ರೋ ಸೇವೆ ಭಾಗಶಃ ಆರಂಭಗೊಂಡಿತ್ತು. ಇದರಿಂದ ಈ ಹಿಂದಿನ ವರ್ಷಗಳಲ್ಲಿ .400 ಕೋಟಿ ದಾಟಿದ್ದ ಪ್ರಯಾಣ ದರ ಸಂಗ್ರಹ ಕೇವಲ .73.56 ಕೋಟಿಗೆ ಕುಸಿದಿದೆ.

ಹಾಗೆಯೇ ಪ್ರಯಾಣ ದರಯೇತರ ಆದಾಯ ಕೂಡ ಕೇವಲ .8.41 ಕೋಟಿ ಸಂಗ್ರಹವಾಗಿದೆ. ಇದು ಮೆಟ್ರೋ ಸೇವೆ ಆರಂಭಗೊಂಡ ಬಳಿಕ ಸಂಗ್ರಹವಾಗ ಕನಿಷ್ಠ ಪ್ರಯಾಣ ದರಯೇತರ ಆದಾಯವಾಗಿದೆ. ಪ್ರಯಾಣದರ ಹೊರತಾದ ಆದಾಯ ಸಂಗ್ರಹ ಕುಸಿಯಲು ಮೆಟ್ರೋದ ಹೊರಾಂಗಣ, ಕಂಬಗಳಲ್ಲಿ ಜಾಹೀರಾತು(Advertisement) ಹಾಕಲು ಇರುವ ನಿರ್ಬಂಧ, ಲಾಕ್‌ಡೌನ್‌ ಕಾರಣದಿಂದ ಮೆಟ್ರೋ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಬಾಡಿಗೆ ಪಡೆಯುವುದನ್ನು ಸ್ಥಗಿತಗೊಳಿಸಿದ್ದು ಪ್ರಮುಖ ಕಾರಣ ಎಂದು ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಮೂರೇ ವರ್ಷದಲ್ಲಿ ನಷ್ಟದ ಪ್ರಮಾಣ 3 ಪಟ್ಟು ಏರಿಕೆ

ಇದೇ ವೇಳೆ ಮೆಟ್ರೋದ ನಷ್ಟ(Loss) ಮುಂದುವರಿದಿದೆ. 2017-18ರ ಸಾಲಿನಲ್ಲಿ .352 ಕೋಟಿ ನಷ್ಟ ಅನುಭವಿಸಿತ್ತು. ಮೂರೇ ವರ್ಷದಲ್ಲಿ ನಷ್ಟದ ಪ್ರಮಾಣ ಹೆಚ್ಚು ಕಡಿಮೆ ಮೂರು ಪಟ್ಟು ಹೆಚ್ಚಾಗಿದ್ದು, 2020-21ರ ಸಾಲಿನಲ್ಲಿ ನಷ್ಟದ ಪ್ರಮಾಣ .905 ಕೋಟಿಗೆ ಏರಿದೆ.

ಪ್ರಯಾಣಿಕರನ್ನು ಬೇರೆಡೆಗೆ ಕರೆದೊಯ್ಯುವುದಕ್ಕೆ 'ಸೈನಿಕ್ ಪೋಡ್' ಆರಂಭಿಸಿದ Namma Metro

ಒಂದೇ ಸಮನೆ ನಷ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಗತಿಯಲ್ಲಿರುವ ಮೆಟ್ರೋ ಯೋಜನೆಗಳಿಗೆ(Metro Projects) ಹಣ ಹೊಂದಿಸಲು ಮೆಟ್ರೋ ನಿಗಮ ಪರದಾಡುವಂತಾಗಿದೆ. ಎರಡನೇ ಹಂತದ ಮೆಟ್ರೋ ಯೋಜನೆ ಪೂರ್ಣಗೊಳಿಸಲು .3,500 ಕೋಟಿ ಅಗತ್ಯವಿದ್ದು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUYDFC)ಯಿಂದ .550 ಕೋಟಿ ಸಾಲ ಪಡೆಯುವ ಪ್ರಸ್ತಾವನೆ ಇರುವುದನ್ನು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕರ ನಿದ್ರೆಗೆ ಭಂಗ: ರಾತ್ರಿ ವೇಳೆ ಮೆಟ್ರೋ ಕಾಮಗಾರಿಗೆ ಬ್ರೇಕ್‌

ರಾತ್ರಿ ಕಾಮಗಾರಿ ನಡೆಸುವುದರಿಂದ ಉಂಟಾಗುವ ಶಬ್ದದಿಂದ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಮೆಟ್ರೋದ(Metro) ಸಿಲ್ಕ್‌ ಬೋರ್ಡ್‌- ಕೆ.ಆರ್‌.ಪುರ ಕಾಮಗಾರಿಯನ್ನು ರಾತ್ರಿ ವೇಳೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ.

ಮೆಟ್ರೋದ ಎರಡನೇ ಹಂತದ ಕಾಮಗಾರಿ ಹೊರ ವರ್ತುಲ ರಸ್ತೆಯಲ್ಲಿ ಸಾಗುತ್ತಿದೆ. ಒಟ್ಟು 18.23 ಕಿ.ಮೀ. ಉದ್ದದ ಮಾರ್ಗದ ಕಾಮಗಾರಿಯನ್ನು 2027ರ ಹೊತ್ತಿಗೆ ಮುಗಿಸಲು ಮೆಟ್ರೋ ನಿಗಮ(BMRCL) ಈ ಮೊದಲು ಉದ್ದೇಶಿಸಿತ್ತು. ಆದರೆ 2024ರ ಡಿಸೆಂಬರ್‌ ಒಳಗೆ ಕಾಮಗಾರಿ ಮುಗಿಸುವಂತೆ ಮುಖ್ಯಮಂತ್ರಿಗಳು ಮೆಟ್ರೋ ನಿಗಮಕ್ಕೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳಿಸಲು ರಾತ್ರಿ-ಹಗಲೆನ್ನದೆ ಕಾಮಗಾರಿ ನಡೆಸಲಾಗುತ್ತಿತ್ತು.
ಆದರೆ ರಾತ್ರಿ ಕಾಮಗಾರಿ ನಡೆಸುವುದರಿಂದ ನಿದ್ರೆಗೆ ಭಂಗ ಬರುತ್ತಿದೆ ಎಂದು ಎಚ್‌ಎಸ್‌ಆರ್‌ ಬಡಾವಣೆ, ಬೆಳ್ಳಂದೂರು ನಿವಾಸಿಗಳು ಮೆಟ್ರೋ ನಿಗಮಕ್ಕೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿ ರಾತ್ರಿ 10ರ ನಂತರ ಕಾಮಗಾರಿ ನಡೆಸದಿರಲು ನಿರ್ಧರಿಸಲಾಗಿದೆ.