ಭಾರೀ ಮೊತ್ತಕ್ಕೆ ಪೇಟಿಎಂನ ಟಿಕೆಟ್‌ ಬ್ಯುಸಿನೆಸ್‌ ಖರೀದಿ ಮಾಡಿದ ಜೋಮೋಟೋ!

ಆಹಾರ ವಿತರಣಾ ದೈತ್ಯ ಜೋಮೋಟೋ, ಪೇಟಿಎಂನ ಲಾಭದಾಯಕ ಮನರಂಜನಾ ಟಿಕೆಟಿಂಗ್ ವ್ಯವಹಾರವನ್ನು ₹2,048 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ.

 

Paytm entertainment ticketing business Zomato to acquire for 2048 crore san

ಬೆಂಗಳೂರು (ಆ.22): ಪೇಟಿಎಂನ ಅತ್ಯಂತ ಲಾಭದಾಯಕ ಉದ್ಯಮಗಳಲ್ಲಿ ಒಂದಾಗಿದ್ದ ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್‌ ವ್ಯವಹಾರವನ್ನು ಫುಡ್‌ ಡೆಲಿವರಿ ಅಪ್ಲಿಕೇಶನ್‌ ಜೋಮೋಟೋ ಖರೀದಿ ಮಾಡಲು ಮುಂದಾಗಿದೆ. ಆಗಸ್ಟ್‌ 21 ರಂದು ಜೋಮೋಟೋ ಈ ಕುರಿತಾಗಿ ಅಧಿಕೃತವಾಗಿ ಮಾಹಿತಿ ನೀಡಿದ್ದು, ತಮ್ಮ ನಿರ್ದೇಶಕ ಮಂಡಳಿಯು ಪೇಟಿಎಂನ ವ್ಯವಹಾರವನ್ನು ಖರೀದಿ ಮಾಡಲು ಒಪ್ಪಿಗೆ ನೀಡಿದ್ದಾಗಿ ತಿಳಿಸಿದೆ. 2048 ಕೋಟಿ ರೂಪಾಯಿ ಮೊತ್ತಕ್ಕೆ ಪೇಟಿಎಂನ ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್‌ ವ್ಯವಹಾರವನ್ನು ಖರೀದಿಸಲು ಒಪ್ಪಿಗೆ ಸಿಕ್ಕಿದ್ದಾಗಿ ತಿಳಿಸಿದೆ. ಈ ಸ್ವಾಧೀನದಿಂದ ಜೋಮೋಟೋದ ತನ್ನ ಗೋಯಿಂಗ್‌ ಔಟ್‌ ಪಾಲಿಸಿಯನ್ನು ಇನ್ನಷ್ಟು ಗಟ್ಟಿ ಮಾಡಲು ಸಹಾಯ ಮಾಡಲಿದ್ದರೆ, ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿರುವ ಫಿನ್‌ಟೆಕ್‌ ಸಂಸ್ಥೆ ಪೇಟಿಎಂ ತನ್ನ ಪೇಮೆಂಟ್‌ ಹಾಗೂ ಹಣಕಾಸು ಸೇವೆಗಳ ಮೇಲೆ ಹೆಚ್ಚಿನ ಗಮನವಹಿಸಲು ಕಾರಣವಾಗಲಿದೆ.

ಮಾರಾಟ ಒಪ್ಪಂದವು ಸಿನಿಮಾ, ಕ್ರೀಡೆ ಮತ್ತು ಈವೆಂಟ್‌ಗಳು (ಲೈವ್ ಪ್ರದರ್ಶನಗಳು) ಟಿಕೆಟಿಂಗ್ ವ್ಯವಹಾರವನ್ನು ನಗದು-ಮುಕ್ತ, ಸಾಲ-ಮುಕ್ತ ಆಧಾರದ ಮೇಲೆ ಒಳಗೊಂಡಿರುತ್ತದೆ, Zomato ಮತ್ತು One 97 Communications Ltd (OCL) ಎರಡೂ ಮಂಡಳಿಗಳು ಒಪ್ಪಂದವನ್ನು ಅನುಮೋದಿಸಿವೆ. ಈ ಒಪ್ಪಂದದ ಅನ್ವಯ, ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್‌ ಬ್ಯುಸಿನೆಸ್‌ನ ಎಲ್ಲಾ ಅಂಗಸಂಸ್ಥೆಗಳು ಕೂಡ ಈಗ ಜೋಮೋಟೋ ಅಧೀನಕ್ಕೆ ಬರುತ್ತದೆ. ಈ ವರ್ಗಾವಣೆಯಲ್ಲಿ ಈ ವಲಯದಲ್ಲಿ ಕೆಲಸ ಮಾಡುವ ಹಾಲಿ 280 ಉದ್ಯೋಗಿಗಳು ಕೂಡ ಜೋಮೋಟೋ ಸಂಸ್ಥೆಗೆ ಸೇರಲಿದ್ದಾರೆ ಎಂದು ಪೇಟಿಎಂ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ತಿಳಿಸಿದೆ.

ಒಪ್ಪಂದದ ನಿಯಮಗಳ ಅಡಿಯಲ್ಲಿ, ಮನರಂಜನಾ ಟಿಕೆಟಿಂಗ್ ಸೇವೆಗಳು 12 ತಿಂಗಳವರೆಗಿನ ಟ್ರಾನ್ಸಿಷನ್‌ ಅವಧಿಗೆ Paytm ಅಪ್ಲಿಕೇಶನ್‌ನಲ್ಲಿಯೇ ಇರಲಿದೆ.  Zomato ಈ ಸೇವೆಗಳನ್ನು ತನ್ನ ಕೊಡುಗೆಗಳಲ್ಲಿ ಸಂಯೋಜಿಸಿದಾಗ ಯೂಸರ್‌ಗಳನ್ನು ಅಲ್ಲಿ ಇದನ್ನು ಮುಂದುವರಿಸಬಹುದು ಎಂದಿದೆ.

ನಷ್ಟದಲ್ಲಿರುವ ಪೇಟಿಎಂ ಅದಾನಿ ತೆಕ್ಕೆಗೆ? ವರದಿ ಬೆನ್ನಲ್ಲೇ ಷೇರು ಮೌಲ್ಯ ಶೇ.5ಕ್ಕೆ ಜಿಗಿತ!

ಪೇಟಿಎಂನ ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್ ವಿಭಾಗವು ಚಲನಚಿತ್ರ, ಕ್ರೀಡೆ ಮತ್ತು ಈವೆಂಟ್ ಬುಕಿಂಗ್‌ಗಳನ್ನು ಒಳಗೊಂಡಿದೆ. ಈ ವಿಭಾಗವು ₹297 ಕೋಟಿ ಆದಾಯವನ್ನು ಮತ್ತು FY24 ರಲ್ಲಿ ₹29 ಕೋಟಿಗಳ ಹೊಂದಾಣಿಕೆಯ EBITDA ವರದಿಯೊಂದಿಗೆ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಎಂದು ಕಂಪನಿ ತಿಳಿಸಿದೆ. ಸಿನಿಮಾ ಟಿಕೆಟ್‌ ಬುಕ್‌ ಮಾಡುವ ವೇದಿಕೆಯೊಂದಿಗೆ ಇನ್‌ಸೈಡರ್‌ ಹಾಗೂ ಟಿಕೆಟ್‌ನ್ಯೂ ವೆಬ್‌ಸೈಟ್‌ಗಳನ್ನು ಕ್ರಮವಾಗಿ 2017 ಹಾಗೂ 2018ರಲ್ಲಿ 268 ಕೋಟಿ ರೂಪಾಯಿ ಮೊತ್ತಕ್ಕೆ ಸ್ವಾಧೀನ ಮಾಡಿಕೊಂಡಿತ್ತು. ಆ ಮೂಲಕ ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್‌ ವೇದಿಕೆಗೆ ಲಗ್ಗೆ ಇಟ್ಟಿತ್ತು. ಎಂಟರ್‌ಟೇನ್‌ಮೆಂಟ್‌ ಟಿಕೆಟಿಂಗ್‌ಗಾಗಿ ಜೋಮೋಟೋ ಡಿಸ್ಟ್ರಿಕ್ಟ್‌ ಎನ್ನುವ ಹೊಸ ಅಪ್ಲಿಕೇಶನ್‌ಅನ್ನು ಬಿಡುಗಡೆ ಮಾಡಲಿದೆ ಎಂದು ಜೋಮೋಟೋ ಎಂಡಿ ಹಾಗೂ ಸಿಇಒ ದೀಪೇಂದರ್‌ ಗೋಯಲ್‌ ತಿಳಿಸಿದ್ದಾರೆ. 

 

ಪೇಟಿಎಂ ಪೇ ಬಳಕೆದಾರರ ಗಮನಕ್ಕೆ, ಗ್ರಾಹಕರಿಗೆ ಹೊಸ ಯುಪಿಐ ಹ್ಯಾಂಡಲ್ಸ್ ನೀಡಲು ಪ್ರಾರಂಭಿಸಿದ ಸಂಸ್ಥೆ

Latest Videos
Follow Us:
Download App:
  • android
  • ios