ನವದೆಹಲಿ[ನ.05] ಪರಿಧಾನ್ ಹೆಸರಿನಲ್ಲಿ ಸಿದ್ಧ ಉಡುಪುಗಳ ತಯಾರಿಕೆಗೆ ಪತಂಜಲಿ ಮುಂದಾಗಿದೆ. ಅಲ್ಲದೇ ಮುಂದಿನ ಹಣಕಾಸು ವರ್ಷದಲ್ಲಿ 1000 ಕೋಟಿ ರೂ. ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ.

ಹರಿದ್ವಾರ ಮೂಲದ ಕಂಪನಿ 100 ಮಳಿಗೆಗಳನ್ನು ತೆರೆಯಲು ಮುಂದಾಗಿದೆ. ಮಾರ್ಚ್ 2020ರ ವೇಳೆಗೆ 500 ಮಳಿಗೆಗಳ ಗುರಿ ಹೊಂದಿದೆ. ಮೂರು ಬ್ರ್ಯಾಂಡ್ ಗಳನ್ನು ಪರಿಚಯಿಸಲಿದ್ದು ಲಿವ್ ಫಿಟ್,ಆಸ್ಥಾ, ಸಂಖರ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು ಎಲ್ಲ ವರ್ಗದ ಜನರ ನ್ನು ಗುರಿಯಾಗಿಸಿಕೊಂಡು ಚಿಂತನೆ ನಡೆಸಿದೆ.

ಸಾಮಾನ್ಯ ಜನರು ಅತ್ಯುತ್ತಮ ಬಟ್ಟೆಯ ಅನುಭವ ಪಡೆಯಬೇಕು. ನಾವು ಮಲ್ಟಿ ನ್ಯಾಶನಲ್ ಕಂಪನಿಗಳೊಂದಿಗೆ ಸ್ಪರ್ಧೆ ಒಡ್ಡಲಿದ್ದೇವೆ. ಅವರಿಗಿಂತ ಶೇ. 30 ರಿಂದ 40 ರಷ್ಟು ಕಡಿಮೆಗೆ ಬಟ್ಟೆ ನೀಡಬೇಕು ಎಂದು ಭಾವಿಸಿದ್ದೇವೆ ಎಂದು ರಾಮ್ ದೇವ್ ತಿಳಿಸಿದ್ದಾರೆ.