ನವದೆಹಲಿ(ಸೆ.12): ಜಾಗತಿಕ ಆರ್ಥಿಕ ಕುಸಿತ ಮತ್ತು ಕೊರೋನಾ ಹಿನ್ನೆಲೆಯಲ್ಲಿ ಸಂಫäರ್ಣ ನೆಲಕಚ್ಚಿದ್ದ ದೇಶದ ವಾಹನೋದ್ಯಮ ಕೊನೆಗೂ ಹಾದಿಗೆ ಮರಳುವ ಲಕ್ಷಣಗಳು ಕಂಡುಬಂದಿವೆ. ಆಗಸ್ಟ್‌ನಲ್ಲಿ ಪ್ರಯಾಣಿಕ ಹಾಗೂ ಸರಕು ಸಾಗಣೆ ವಾಹನಗಳ ಮಾರಾಟ ಶೇ.15-16ರಷ್ಟುಏರಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ.

ಭಾರತೀಯ ಆಟೋಮೊಬೈಲ್‌ ಉತ್ಪಾದಕ ಸಂಸ್ಥೆಯ ಇತ್ತೀಚಿನ ಅಂಕಿ ಅಂಶಗಳ ಅನ್ವಯ ಆಗಸ್ಟ್‌ ತಿಂಗಳಿನಲ್ಲಿ 2.15 ಲಕ್ಷ (2,15,916) ಪ್ರಯಾಣಿಕ ವಾಹನಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಂಥ ವಾಹನಗಳ ಮಾರಾಟ ಪ್ರಮಾನ 1.89 ಲಕ್ಷ (1,89,129) ಇತ್ತು. ಅಂದರೆ ಮಾರಾಟದಲ್ಲಿ ಶೇ.14.16ರಷ್ಟುಹೆಚ್ಚಳವಾಗಿದೆ.

ಆಗಸ್ಟ್‌ನಲ್ಲಿ ಕಾರುಗಳ ಮಾರಾಟ ಶೇ.14.13 (1.24 ಲಕ್ಷ), ಸರಕು ಸಾಗಣೆ ವಾಹನ ಶೇ.15.54 (81842), ವ್ಯಾನ್‌ ಮಾರಾಟ ಶೇ.3.82ರಷ್ಟು(9359), ದ್ವಿಚಕ್ರ ವಾಹನ ಮಾರಾಟ ಶೇ.3.82 (15.59 ಲಕ್ಷ), ಮೋಟಾರ್‌ಸೈಕಲ್‌ ಮಾರಾಟ ಸೇ.10.13 (10.32 ಲಕ್ಷ) ಏರಿಕೆ ಕಂಡಿದೆ. ಆದರೆ ಸ್ಕೂಟರ್‌ಗಳ ಮಾರಾಟದಲ್ಲಿ ಶೇ.12.3 ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ.75. 29ರಷ್ಟುಇಳಿಕೆ ದಾಖಲಾಗಿದೆ.

2018ರ ಆಗಸ್ಟ್‌ಗೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿ ವಾಹನಗಳ ಮಾರಾಟ ಶೇ.32ರಷ್ಟುಕುಸಿತ ಕಂಡಿತ್ತು. ಅದನ್ನು ಆಧರಿಸಿ ಹೇಳುವುದಾದರೆ ಈ ವರ್ಷ ಏರಿಕೆಯಾಗಿದೆ. ಆದರೂ ಇದು ಉದ್ಯಮಕ್ಕೆ ಸಿಹಿ ಸುದ್ದಿ ಎಂದು ಸಂಸ್ಥೆಯ ಅಧ್ಯಕ್ಷ ಕೆನಿಚಿ ಅಯುಕಾವ ಹೇಳಿದ್ದಾರೆ.