ಕಾರೇ ಕೊಳ್ತಿಲ್ಲ ಜನ: ತೈಲದರದ ಎಫೆಕ್ಟಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 10:47 AM IST
Passenger vehicle sales decline 2.46 per cent, car sales down 1 per cent in August
Highlights

ಪ್ರಯಾಣಿಕ ವಾಹನ ಹಾಗೂ ಕಾರು ಮಾರಾಟದಲ್ಲಿ ಕುಸಿತ! ಆಗಸ್ಟ್ ತಿಂಗಳಲ್ಲಿ ವಾಹನ ಮಾರಾಟದಲ್ಲಿ ಭಾರೀ ಇಳಿಕೆ! ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ಮಾಹಿತಿ! ಜುಲೈ ತಿಂಗಳಿನಿಂದ ವಾಹನ ಮಾರಾಟದಲ್ಲಿ ನಿರಂತರ ಇಳಿಕೆ

 

ನವದೆಹಲಿ(ಸೆ.12): ಕಳೆದ ಆಗಸ್ಟ್ ತಿಂಗಳಲ್ಲಿ ದೇಶಿ ಪ್ರಯಾಣಿಕ ವಾಹನಗಳ ಮಾರಾಟ ಶೇ.2.46ರಷ್ಟು ಹಾಗೂ ಕಾರು ಮಾರಾಟ ಶೇ.1ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್ ಐಎಎಂ) ತಿಳಿಸಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,94, 416 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ 2,87,186 ವಾಹನಗಳು ಮಾರಾಟವಾಗಿವೆ.

ಅದರಂತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,98, 892 ಕಾರುಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಲ್ಲಿ 2,91,179 ಕಾರುಗಳು ಮಾರಾಟವಾಗಿವೆ ಎಂದು ಎಸ್ ಐಎಎಂ ಮಾಹಿತಿ ನೀಡಿದೆ.

ಕಳೆದ ಜುಲೈ ತಿಂಗಳಲ್ಲೂ ಪ್ರಯಾಣಿಕ ವಾಹನ ಮಾರಾಟ ಶೇ.2.71ರಷ್ಟು ಹಾಗೂ ಕಾರು ಮಾರಾಟ ಪ್ರಮಾಣ ಸಹ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

ಈ ಮಧ್ಯೆ, ದ್ವಿಚಕ್ರ ವಾಹನ ಮಾರಾಟ ಪ್ರಮಾಣ ಶೇ.2.91ರಷ್ಟು ಹೆಚ್ಚಾಗಿದ್ದು, ಆಗಸ್ಟ್ ತಿಂಗಳಲ್ಲಿ 19, 46, 811 ಬೈಕ್ ಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 18,91,685 ಬೈಕ್ ಗಳು ಮಾರಾಟವಾಗಿದ್ದವು.

loader