Asianet Suvarna News Asianet Suvarna News

ಪೂರ್ವಾನ್ವಯ ತೆರಿಗೆ ರದ್ದತಿಗೆ ಅಸ್ತು: ವೊಡಾ, ಕೇರ್ನ್‌ಗೆ 8,100 ಕೋಟಿ ರು. ಲಾಭ!

* ವೊಡಾ, ಕೇರ್ನ್‌ಗೆ 8100 ಕೋಟಿ ರು. ಲಾಭ

* ಪೂರ್ವಾನ್ವಯ ತೆರಿಗೆ ರದ್ದತಿಗೆ ಸಂಸತ್‌ ಅಸ್ತು

Parliament clears Bill to end retrospective tax pod
Author
Bangalore, First Published Aug 10, 2021, 11:41 AM IST
  • Facebook
  • Twitter
  • Whatsapp

ನವದೆಹಲಿ(ಆ.10): ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಪದ್ಧತಿ ಕೊನೆಗೊಳಿಸುವ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ- 2021ಕ್ಕೆ ರಾಜ್ಯಸಭೆ ಸೋಮವಾರ ಅನುಮೋದನೆ ನೀಡಿದೆ.

ಇದರ ಅನ್ವಯ 2012 ಮೇ 28ಕ್ಕಿಂತ ಹಿಂದಿನ ವ್ಯವಹಾರಗಳಿಗೆ ವಿಧಿಸಲಾದ ಪೂರ್ವಾನ್ವಯ ತೆರಿಗೆಗಳು ಸಂಪೂರ್ಣ ರದ್ದಾಗಲಿವೆ. ವೊಡಾಫೋನ್‌, ಕೇರ್ನ್‌ ಎನರ್ಜಿ ಹಾಗೂ ಇತರ ಕಂಪನಿಗಳಿಂದ ಪಡೆದಿದ್ದ 8100 ಕೋಟಿ ರು. ತೆರಿಗೆಯನ್ನು (ಬಡ್ಡಿ ರಹಿತವಾಗಿ) ಆ ಕಂಪನಿಗಳಿಗೇ ಸರ್ಕಾರ ಮರಳಿಸಲಿದೆ. ಕಳೆದ ವಾರವೇ ಮಸೂದೆಗೆ ಲೋಕಸಭೆ ಅಸ್ತು ಎಂದಿತ್ತು.

ಬ್ರಿಟನ್‌ ಮೂಲದ ಕಂಪನಿಗಳಾದ ತೈಲ ಕ್ಷೇತ್ರದ ಕೇರ್ನ್‌ ಎನರ್ಜಿ ಹಾಗೂ ಟೆಲಿಕಾಂ ಕ್ಷೇತ್ರದ ವೊಡಾಫೋನ್‌ಗಳು 2012ಕ್ಕಿಂತ ಮುನ್ನ ಭಾರತದಲ್ಲಿ ಹೂಡಿಕೆ ಮಾಡಿದ್ದವು. 2012ಕ್ಕಿಂತ ಮೊದಲು ನಡೆದ ವಹಿವಾಟು ಆಗಿದ್ದರಿಂದ ಆಗಿನ ಕಾಯ್ದೆಯಡಿ ಅವುಗಳಿಗೆ ಪೂರ್ವಾನ್ವಯ ತೆರಿಗೆಯನ್ನು ಭಾರತ ವಿಧಿಸಿತ್ತು. ಆದರೆ ಇದು ಕೋರ್ಟ್‌ ಮೆಟ್ಟಿಲೇರಿ ಸರ್ಕಾರಕ್ಕೆ ಸೋಲಾಗಿತ್ತು.

Follow Us:
Download App:
  • android
  • ios