ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾರಿಂದ ಚೊಚ್ಚಲ ಬಜೆಟ್ ಮಂಡನೆ| ಸಂಸತ್ತಿಗೆ ಆಗಮಿಸಿ ಮಗಳಿಗೆ ಸಾಥ್ ಕೊಟ್ಟ ತಂದೆ, ತಾಯಿ

ನವದೆಹಲಿ[ಜು.05]: ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿರಾ ಗಾಂಧಿ ನಂತರ ಇದೇ ಮೊದಲ ಬಾರಿಗೆ ಮಹಿಳಾ ವಿತ್ತ ಸಚಿವೆಯೊಬ್ಬರು ಬಜೆಟ್ ಮಂಡಿಸುತ್ತಿದ್ದಾರೆ. ಮಹಿಳೆಯೊಬ್ಬರು ಈ ಬಾರಿ ಬಜೆಟ್ ಮಂಡಿಸುತ್ತಿರುವುದರಿಂದ ನಿರೀಕ್ಷೆಗಳೂ ಹಲವಿದೆ. ಇದೇ ವೇಳೆ ಬಜೆಟ್ ಮಂಡಿಸುತ್ತಿರುವ ಮಗಳಿಗೆ ಸಾಥ್ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂದೆ ನಾರಾಯಣ ಸೀತಾರಾಮನ್ ಹಾಗೂ ತಾಯಿ ಸಾವಿತ್ರಿ ಸಂಸತ್ತಿಗೆ ಆಗಮಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಜೆಟ್ 2019: ಬ್ರಿಟಿಷ್ ಬ್ರೀಫ್‌ಕೇಸ್‌ಗೆ ಗುಡ್ ಬೈ ಹೇಳಿದ ನಿರ್ಮಾಲಾ

Scroll to load tweet…

Live| 'ರಾಷ್ಟ್ರೀಯ ಭದ್ರತೆ, ಆರ್ಥಿಕ ಅಭಿವೃದ್ಧಿ: ಜನತೆಗಾಗಿ ಕೇಂದ್ರದ ಬದ್ಧತೆ'!

ಈಗಾಗಲೇ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಪಾಶ್ಚಾತ್ಯ ಸಂಸ್ಕೃತಿ, ಬಜೆಟ್ ಪ್ರತಿಗಳನ್ನು ಸೂಟ್‌ಕೇಸ್‌ನಲ್ಲಿ ತರುತ್ತಿದ್ದ ಪರಂಪರೆಗೆ ನಿರ್ಮಲಾ ತಿಲಾಂಜಲಿ ಇಟ್ಟಿದ್ದಾರೆ. ಬಜೆಟ್ ಪ್ರತಿಗಳನ್ನು ಕೆಂಪು ರೇಷ್ಮೆ ವಸ್ತ್ರದಲ್ಲಿ ಬಾಹಿ ಖಾತಾ (ಲೆಡ್ಜರ್)ದಂತೆ ಬಜೆಟ್ ಪ್ರತಿಗಳನ್ನು ತರಲಾಗಿದೆ. ಈ ಮೂಲಕ ದೇಸಿ ಸಂಸ್ಕೃತಿಯನ್ನು ಅನುಸರಿಸಿದ್ದಾರೆ.