ಅಮೆರಿಕದಲ್ಲಿ ಗಾರ್ಡ್ ಕೆಲಸ, ಬರ್ಗರ್ ಮಾರುತ್ತಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ!

ಮನಸ್ಸಿದ್ರೆ ಮಾರ್ಗ. ಯಾವುದೇ ಕೆಲಸವನ್ನು ಶ್ರಮವಹಿಸಿ, ಬುದ್ಧಿವಂತಿಕೆಯಿಂದ ಮಾಡಿದ್ರೆ ಫಲ ಹೆಚ್ಚು. ಇದಕ್ಕೆ ನಿಕೇಶ್ ಅರೋರ ಉದಾಹರಣೆ. ಕಷ್ಟದ ಸಮಯದಲ್ಲಿ ಬರ್ಗರ್ ಮಾರಾಟ ಮಾಡಿದ್ದವರು ಈಗ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ.
 

Pao Alto Networks CEO Nikesh Arora Become First Billionaire roo

ಭಾರತೀಯ ಮೂಲದ ಅಮೆರಿಕದ ಉದ್ಯಮಿ ನಿಕೇಶ್ ಅರೋರಾ ಸುದ್ದಿಯಲ್ಲಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅವರ ಹೆಸರನ್ನು ಸೇರಿಸಿರುವುದು ಇದಕ್ಕೆ ಕಾರಣ. ಸಂಸ್ಥಾಪಕರಲ್ಲದ ಕೆಲವೇ ಬಿಲಿಯನೇರ್‌ಗಳಲ್ಲಿ ನಿಕೇಶ್ ಅರೋರಾ ಸೇರಿದ್ದಾರೆ. ಅರೋರಾ ಸ್ವತಃ ಯಾವುದೇ ಕಂಪನಿಯನ್ನು ಪ್ರಾರಂಭಿಸಲಿಲ್ಲ. ಆದರೂ ಅವರು ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಸೈಬರ್ ಸೆಕ್ಯುರಿಟಿ ಕಂಪನಿ ಪಾವೊ ಆಲ್ಟೊ ನೆಟ್‌ವರ್ಕ್ಸ್‌ನ ಸಿಇಒ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ನಿಕೇಶ್ ಅರೋರಾ. ಈ ಕಂಪನಿಯ ಮಾರುಕಟ್ಟೆ ಕ್ಯಾಪ್ 91 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿದೆ.

ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ನಿಕೇಶ್ ಅರೋರಾ (Nikesh Arora) ಅವರ ನಿವ್ವಳ ಮೌಲ್ಯವು 1.5 ಶತಕೋಟಿ ಡಾಲರ್‌ (Dollar) ಅಂದರೆ ಸುಮಾರು 12495 ಕೋಟಿ ರೂಪಾಯಿ ಆಗಿದೆ. 

ನಿಕೇಶ್ ಅರೋರಾ ಅಮೆರಿಕಾ (America) ಕಂಪನಿಗಳ ಜೊತೆ ಅನೇಕ ವರ್ಷದಿಂದ ಕೆಲಸ ಮಾಡಿದ್ದಾರೆ. ಗೂಗಲ್ ನಲ್ಲಿಯೂ ಅವರು ಕೆಲಸ ಮಾಡಿದ್ದರು. ಉದ್ಯಮಿಯಾಗಿ, ಹೂಡಿಕೆದಾರರಾಗಿ ಅವರು ಗುರುತಿಸಿಕೊಂಡಿದ್ದಾರೆ. 
ನಿಕೇಶ್ ಅರೋರಾ  ಫೆಬ್ರವರಿ 9, 1968 ರಂದು ಯುಪಿಯ ಗಾಜಿಯಾಬಾದ್‌ನಲ್ಲಿ ಜನಿಸಿದರು. ನಿಕೇಶ್ ತಂದೆ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು. ನಿಕೇಶ್, ದೆಹಲಿಯ ಏರ್ ಫೋರ್ಸ್ ಶಾಲೆಯಲ್ಲಿ  ಶಾಲಾ ಶಿಕ್ಷಣ ಮುಗಿಸಿದ್ರು. 1989 ರಲ್ಲಿ, ಕಾಶಿ ಹಿಂದೂದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದರು. ಅಧ್ಯಯನದ ನಂತರ  ವಿಪ್ರೋದಲ್ಲಿ ಕೆಲಸ ಮಾಡಿದ್ದರು. ಕೆಲಸ ಬಿಟ್ಟು ಯುಎಸ್ ಎಗೆ ತೆರಳಿದ್ದ ಅವರು ಅಲ್ಲಿ ತಮ್ಮ ಓದು ಮುಂದುವರೆಸಿದ್ದರು.

ಭಾರತ,ಏಷ್ಯಾದ ನಂ.1 ಸಿರಿವಂತನ ಪಟ್ಟ ಮರಳಿ ಪಡೆದ ಗೌತಮ್ ಅದಾನಿ; ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಮೇಲೇರಿದ ಸ್ಥಾನ

 ಅಮೆರಿಕದ ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿದ್ರು. ಅದಲ್ಲಾಗಿ ನಿಕೇಶ್  ತಂದೆಯಿಂದ ಕೇವಲ 75 ಸಾವಿರ ರೂಪಾಯಿ ಪಡೆದಿದ್ದರು. ಉಳಿದ ಖರ್ಚಿಗಾಗಿ ಅವರು ಅಮೇರಿಕಾದಲ್ಲಿ  ಅನೇಕ ಕೆಲಸಗಳನ್ನು ಮಾಡಿದರು. ಅಮೆರಿಕಾದಲ್ಲಿ ವಾಸ ಖರ್ಚು ಹಾಗೂ ಓದಿಗೆ ಹಣ ಹೊಂದಿಸಲು ನಿಕೇಶ್ ಸೆಕ್ಯುರಿಟಿ ಗಾರ್ಡ್‌ರಿಂದ ಹಿಡಿದು ಬರ್ಗರ್‌ ಮಾರಾಟದವರೆಗೆ ಅನೇಕ ಕೆಲಸಗಳನ್ನು ಮಾಡಿದ್ದರು.

ಎಷ್ಟೇ ಕಷ್ಟ ಬಂದ್ರೂ ನಿಕೇಶ್ ಅರೋರಾ ಹೆದರಲಿಲ್ಲ. ಅವರ ಪರಿಶ್ರಮದಿಂದಲೇ ಅವರು ಇಂದು ಈ ಹಂತಕ್ಕೆ ತಲುಪಿದ್ದಾರೆ. ನಿಕೇಶ್, ಗೂಗಲ್ ನಲ್ಲಿರುವಾಗ ಅತಿ ಹೆಚ್ಚು ಸಂಬಳ ಪಡೆದ ಉದ್ಯೋಗಿ ಆಗಿದ್ದರು.  ನಿಕೇಶ್ ಅವರು 2012 ರಲ್ಲಿ ಗೂಗಲ್‌ನ ಅತ್ಯಂತ ದುಬಾರಿ ಉದ್ಯೋಗಿಯಾಗಿ ಬೆಳಕಿಗೆ ಬಂದಿದ್ದರು. ಆ ವೇಳೆ ಗೂಗಲ್ ಅವರಿಗೆ 51 ಮಿಲಿಯನ್ ಡಾಲರ್ ಪ್ಯಾಕೇಜ್ ನೀಡಿತ್ತು. ಗೂಗಲ್ ನಲ್ಲಿರುವಾಗ ನೆಟ್ ಫ್ಲಿಕ್ಸ್ ಖರೀದಿ ಮಾಡುವಂತೆ ನಿಕೇಶ್ ಸಲಹೆ ನೀಡಿದ್ದರು. ಆಗ ನೆಟ್ಫ್ಲಿಕ್ಸ್ ಮಾರುಕಟ್ಟೆ ಕ್ಯಾಪ್ ಮೂರು ಅರಬ್ ಡಾಲರ್ ಆಗಿತ್ತು. ಆದ್ರೀಗ ಅದರ ಮೌಲ್ಯ 27 ಅರಬ್ ಡಾಲರ್ ಆಗಿದೆ. ನಿಕೇಶ್ ಮಾತನ್ನು ನಿರಾಕರಿಸಿದ್ದ ಗೂಗಲ್, ನೆಟ್ಫ್ಲಿಕ್ಸ್ ಖರೀದಿ ಮಾಡಿರಲಿಲ್ಲ. 

ಕೋಟಿ ಆಸ್ತಿ ಒಡತಿ ಸುಧಾ ಮೂರ್ತಿ ಮದ್ವೆಗೆ ಖರ್ಚಾಗಿದ್ದು ಕೆಲವೇ ನೂರು, ಇಬ್ಬರದ್ದೂ ಶೇರ್ ಅಂತೆ!

ಗೂಗಲ್ (Google) ನಂತ್ರ ನಿಕೇಶ್ ಸಾಫ್ಟ್ ಬ್ಯಾಂಕ್ (Soft Bank) ಸೇರಿದ್ದರು. ಆಗ್ಲೂ ಅವರ ಸಂಬಳ ಚರ್ಚೆಗೆ ಬಂದಿತ್ತು. ಅಲ್ಲಿಯೂ ಅವರಿಗೆ ದಾಖಲೆಯ ಪ್ಯಾಕೇಜ್ (Packate) ಸಿಕ್ಕಿತ್ತು. 2014 ರಲ್ಲಿ ಸಾಫ್ಟ್‌ಬ್ಯಾಂಕ್ ಅವರಿಗೆ 135 ಮಿಲಿಯನ್ ಡಾಲರ್ ಪ್ಯಾಕೇಜ್ ನೀಡಿತ್ತು. ಸ್ಯಾಪ್ ಡೀಲ್, ಓಲಾ (Ola), ಹೌಸಿಂಗ್ ಡಾಟ್ ಕಾಂ (Housing.com) ಸೇರಿದಂತೆ ಅನೇಕ ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ (Start Up) ಸಾಫ್ಟ್ ಬ್ಯಾಂಕ್ ಹೂಡಿಕೆ (Investment) ಮಾಡಲು ಕಾರಣವಾಗಿದ್ದು ನಿಕೇಶ್.  ಅರೋರಾ ಜೂನ್ 2018 ರಲ್ಲಿ ಪಾಲೊ ಆಲ್ಟೊ ನೆಟ್‌ವರ್ಕ್‌ಗೆ ಸೇರಿದರು. ಅಂದಿನಿಂದ ಅವರು ಅದರ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಕಂಪನಿಗೆ ಸೇರಿದ ನಂತರ ಅವರಿಗೆ 125 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ನೀಡಲಾಯಿತು. ಐದು ವರ್ಷಗಳಲ್ಲಿ ಕಂಪನಿಯ ಷೇರಿನಲ್ಲಿ ಬಹುಪಟ್ಟು ಹೆಚ್ಚಳ ಕಂಡುಬಂದಿತ್ತು. ಇದ್ರಿಂದಾಗಿ ನಿವ್ವಳ ಮೌಲ್ಯವು 1.5 ಬಿಲಿಯನ್ ಡಾಲರ್‌ ದಾಟಿದೆ.
 

Latest Videos
Follow Us:
Download App:
  • android
  • ios