Asianet Suvarna News Asianet Suvarna News

ಸಬ್ಸಿಡಿ ದರದಲ್ಲಿ LPG ಮಾರುವ ಅವಕಾಶ ರಿಲಯನ್ಸ್‌ಗೆ ಸಿಗುತ್ತಾ?

ಖಾಸಗಿ ಕಂಪೆನಿಗಳಿಗೆ ಸಿಗುತ್ತಾ ಸಬ್ಸಿಡಿ ದರದಲ್ಲಿ LPG ಮಾರಾಟ ಮಾಡುವ ಅವಕಾಶ?| ರಿಲಾಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಖಾಸಗಿ ಕಂಪೆನಿಗಳಿಂದ ಸರ್ಕಾರಕ್ಕೆ ಮನವಿ|

Panel to consider allowing private companies to sell subsidised LPG
Author
Bangalore, First Published Jun 11, 2019, 5:08 PM IST

ನವದೆಹಲಿ[ಜೂ.11]: ಇಂದು ಭಾರತದ ಬಹುತೇಕ ಮನೆಗಳಲ್ಲಿ ಅಡುಗೆ ಅನಿಲದ ಮೂಲಕವೇ ಆಹಾರ ಸಿದ್ಧಪಡಿಸಲಗುತ್ತದೆ. LPG ಸಿಲಿಮಡರ್ ಮೇಲೆ ಸರ್ಕಾರ ಸಬ್ಸಿಡಿ ಕೂಡಾ ನೀಡುತ್ತಿದೆ. ಆದರೀಗ ಜನಸಾಮಾನ್ಯರಿಗೆ ಇನ್ನೂ ಕಡಿಮೆ ಬೆಲೆಯಲ್ಲಿ LPG ಗ್ಯಾಸ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸರ್ಕಾರ ಪ್ಯಾನೆಲ್ ಒಂದನ್ನು ರಚಿಸಿದ್ದು, ಈ ಮೂಲಕ ರಿಲಾಯನ್ಸ್ ಇಂಡಸ್ಟ್ರೀಸ್ ನಂತಹ ಖಾಸಗಿ ಕಂಪೆನಿಗಳಿಗೆ ಕಡಿಡಿಮೆ ಬೆಲೆಗೆ ಗ್ಯಾಸ್ ಮಾರಾಟ ಮಾಡುವ ಅವಕಾಶ ನೀಡಬೇಕೋ, ಬೇಡವೋ ಎಂದು ನಿರ್ಧಾರವಾಗಿಲಿದೆ.

ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ ರಿಲಾಯನ್ಸ್ ಕಂಪೆನಿ

ಇಕಾನಮಿಕ್ ಟೈಮ್ಸ್ ಈ ಕುರಿತಾಗಿ ವರದಿ ಮಾಡಿದ್ದು, ರಿಲಾಯನ್ಸ್ ಕಂಪೆನಿ ಜಾಮ್ ನಗರದಲ್ಲಿ ವಿಶ್ವದ ಅತಿ ದೊಡ್ಡ ರಿಫೈನರಿ ನಡೆಸುತ್ತಿದ್ದು, ಸರ್ಕಾರದ ಬಳಿ ಜನಸಾಮಾನ್ಯರಿಗೆ ಸಬ್ಸಿಡಿ ಮೇಲೆ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದೆ.

ಸರ್ಕಾರಿ ಕಂಪೆನಿಗಳಿಂದ ಸಬ್ಸಿಡಿ ಮೇಲೆ ಮಾರಾಟ

ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಗ್ರಾಹಕರಿಗೆ ಸಿಲಿಂಟರ್ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಮೊತ್ತ ಜಮೆ ಮಾಡುತ್ತದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುತ್ತದೆ. ಆದರೆ ಖಾಸಗಿ ಕಂಪೆನಿಗಳಿಗೆ ಹೀಗೆ ಮಾಡಲು ಅನುಮತಿ ಇಲ್ಲ, ಹೀಗಾಗಿ ಅವುಗಳು ಮಾರುಕಟ್ಟೆ ದರದಲ್ಲೇ ಗ್ಯಾಸ್ ಸಿಲಿಂಡರ್ ಮಾರಾಟ ಮಾಡುತ್ತವೆ.

ಜುಲೈ ಒಳಗಾಗಿ ವರದಿ ಸಲ್ಲಿಸಬೇಕು

ಸರ್ಕಾರದ ಮೂಲಕ ರಚಿಸಲಾದ ಸಮಿತಿಯಲ್ಲಿ ಐವರು ಸದಸ್ಯರಿದ್ದಾರೆ. ಇವರಲ್ಲಿ ಮಾಜಿ ಪೆಟ್ರೋಲಿಯಂ ಸಚಿವ ಕಿರತ್ ಪಾರೆಖ್ ಹಾಗೂ ಇಂಡಿಯನ್ ಆಯ್ಲ್  ಕಂಪೆನಿಯ ಮಾಜಿ ಚೇರ್ಮನ್ ಪಠಾನ್ ಕೂಡಾ ಶಾಮೀಲಾಗಿದ್ದಾರೆ. ಈ ಸಮಿತಿ ಜುಲೈಯೊಳಗೆ ವರದಿ ಸಲ್ಲಿಸಬೇಕು.

ರಿಲಾಯನ್ಸ್ ಇಂಡಸ್ಟ್ರೀಸ್ ಕಂಪೆನಿ ಹಲವಾರು ರಾಜ್ಯಗಳ ಕೋಟ್ಯಾಂತರ ಮಂದಿ ಗ್ರಾಹಕರಿಗೆ LPG ಗ್ಯಾಸ್ ಸರಬರಾಜು ಮಾಡುತ್ತದೆ. ಒಂದು ವೇಳೆ ಸರ್ಕಾರದ ಮೂಲಕ ರಚಿಸಲಾದ ಸಮಿತಿ ಖಾಸಗಿ ಕಂಪೆನಿಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸರಬರಾಜು ಮಾಡಲು ಗ್ರೀನ್ ಸಿಗ್ನಲ್ ನೀಡಿದರೆ ಗ್ಯಾಸ್ ಬಳಕೆದಾರರ ಸಂಖ್ಯೆ ಮತ್ತಷ್ಟು ಹೆಚ್ಚುವುದರೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆ ಏರ್ಪಡಲಿದೆ.

Follow Us:
Download App:
  • android
  • ios