Asianet Suvarna News Asianet Suvarna News

Post Office Savings Account:ಅಂಚೆ ಕಚೇರಿ ಖಾತೆಯಿಂದ ಹಣ ವರ್ಗಾವಣೆ ಇನ್ನು ಸುಲಭ; ಗ್ರಾಹಕರಿಗೆ ನೆಫ್ಟ್, ಆರ್ ಟಿಜಿಎಸ್ ಸೌಲಭ್ಯ

* ಪಿಒಎಸ್ ಬಿ ಗ್ರಾಹಕರಿಗೆ ಮೇ 18ರಿಂದ ಸಿಗುತ್ತಿದೆ ನೆಫ್ಟ್ ಸೌಲಭ್ಯ
*ಮೇ 31ರಿಂದ ಆರ್ ಟಿಜಿಎಸ್ ಲಭ್ಯ
*ಇನ್ನು ಮುಂದೆ ಪಿಒಎಸ್ ಬಿ ಖಾತೆಯಿಂದ ದಿನದ 24 ಗಂಟೆಯೂ ಆನ್ಲೈನ್ ಹಣ ವರ್ಗಾವಣೆ ಸಾಧ್ಯ

NEFT RTGS facility rolled out for Post Office savings account holders Details here
Author
Bangalore, First Published May 25, 2022, 11:01 AM IST

ನವದೆಹಲಿ (ಮೇ24): ಅಂಚೆ ಕಚೇರಿಯಲ್ಲಿ (Post office) ಉಳಿತಾಯ ಖಾತೆ (Saving account) ಹೊಂದಿರೋರಿಗೆ ಶುಭ ಸುದ್ದಿ. ಇನ್ನು ಮುಂದೆ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಹಣವನ್ನು ಇ-ವರ್ಗಾವಣೆ (e-transfer) ಮಾಡಬಹುದು. ಅಂಚೆ ಇಲಾಖೆ ಈಗ ಖಾತೆದಾರರಿಗೆ ನೆಫ್ಟ್ (NEFT) ಹಾಗೂ ಆರ್ ಟಿಜಿಎಸ್ (RTGS) ಸೌಲಭ್ಯ ಕಲ್ಪಿಸಿದೆ.

ಅಂಚೆ ಕಚೇರಿ ಉಳಿತಾಯ ಬ್ಯಾಂಕ್  (POSB) ಗ್ರಾಹಕರಿಗೆ ಮೇ 18ರಿಂದ ನೆಫ್ಟ್ (NEFT) ಹಾಗೂ ಮೇ 31ರಿಂದ ಆರ್ ಟಿಜಿಎಸ್ (RTGS) ಸೌಲಭ್ಯ ಕಲ್ಪಿಸಲಾಗುವುದು ಎಂದು ಅಂಚೆ ಇಲಾಖೆ ಇತ್ತೀಚೆಗೆ  ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಈ ಸೌಲಭ್ಯಗಳಿಂದ ಗ್ರಾಹಕರು ಸುಲಭವಾಗಿ ಹಣವನ್ನು ಬ್ಯಾಂಕ್ ಖಾತೆಗಳಿಂದ ಪಿಒಎಸ್ ಬಿ ಖಾತೆಗಳಿಗೆ ಹಾಗೂ ಪಿಒಎಸ್ ಬಿ (POSB) ಖಾತೆಯಿಂದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬಹುದು. 

ಲಂಕಾ: ಪೆಟ್ರೋಲ್‌ 420 ರು.ಗೆ, ಡೀಸೆಲ್‌ 400 ರು.ಗೆ ಏರಿಕೆ!

ನೆಫ್ಟ್ ಅಂದ್ರೇನು?
ನೆಫ್ಟ್ (NEFT) ಅಂದ್ರೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್. ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಇದನ್ನು ಬಳಸಲಾಗುತ್ತದೆ. ಇದು ಆನ್ಲೈನ್ (Online) ವರ್ಗಾವಣೆ ವ್ಯವಸ್ಥೆಯಾಗಿದೆ. ಆನ್ ಲೈನ್ (Online) ಅಥವಾ ನೆಟ್ ಬ್ಯಾಂಕಿಂಗ್  (net banking) ಮೂಲಕ ನೆಫ್ಟ್ ಸೌಲಭ್ಯ ಬಳಸಿಕೊಳ್ಳಬಹುದು. ಬ್ಯಾಂಕ್ (Bank) ಶಾಖೆಗೆ ಭೇಟಿ ನೀಡಿ ಕೂಡ ನೆಫ್ಟ್ ಸೌಲಭ್ಯ ಬಳಸಿಕೊಳ್ಳಬಹುದು. ಈ ವ್ಯವಸ್ಥೆಯು  24X7X365 ಲಭ್ಯವಿರುತ್ತದೆ. ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಗೆ (Post office) ರಜೆಯಿದ್ದರೂ ಈ ಸೌಲಭ್ಯ ಬಳಸಿಕೊಳ್ಳಬಹುದು. ನೆಫ್ಟ್ ಮೂಲಕ ಹಣ ವರ್ಗಾಯಿಸಿದರೆ ಫಲಾನುಭವಿ ಅದೇ ದಿನ ಅಥವಾ ಮರುದಿನ ಹಣ ಪಡೆಯುತ್ತಾರೆ. 

ಆರ್ ಟಿಜಿಎಸ್ ಅಂದ್ರೇನು?
ಆರ್ ಟಿಜಿಎಸ್ (RTGS) ಅಂದ್ರೆ ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್. ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ರೆ ತಕ್ಷಣ ಲಭಿಸುತ್ತದೆ. ಈ ಸೌಲಭ್ಯ ಕೂಡ 24X7X365 ಲಭ್ಯವಿದೆ. ನೆಟ್ ಬ್ಯಾಂಕಿಂಗ್  (Net banking) ಮೂಲಕ ಅಥವಾ ಬ್ಯಾಂಕು (Bank) ಇಲ್ಲವೆ ಅಂಚೆ ಕಚೇರಿಗೆ ತೆರಳಿ ಈ ಸೌಲಭ್ಯ ಬಳಸಿಕೊಳ್ಳಬಹುದು. ನೆಟ್ ಬ್ಯಾಂಕಿಂಗ್ ಮೂಲಕ ಮಾಡಿದ್ರೆ ಯಾವುದೇ ಶುಲ್ಕವಿಲ್ಲ. ಇದರ ಮೂಲಕ ಅತ್ಯಂತ ತ್ವರಿತವಾಗಿ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಬಹುದು. 

ನೆಫ್ಟ್ ವಹಿವಾಟು ಶುಲ್ಕ
10,000 ರೂ. ತನಕದ ವಹಿವಾಟಿಗೆ  250ರೂ. +ಜಿಎಸ್ ಟಿ (GST)
10,000 ರೂ. ನಿಂದ ಮೇಲ್ಪಟ್ಟು 1ಲಕ್ಷ ರೂ. ತನಕದ ವಹಿವಾಟಿಗೆ 5ರೂ. + ಜಿಎಸ್ ಟಿ (GST)
1 ಲಕ್ಷ ರೂ.ನಿಂದ ಮೇಲ್ಪಟ್ಟು 2 ಲಕ್ಷ ರೂ. ತನಕದ ವಹಿವಾಟಿಗೆ 15ರೂ. + ಜಿಎಸ್ ಟಿ (GST)
2 ಲಕ್ಷ ರೂ. ಮೇಲ್ಪಟ್ಟ ವಹಿವಾಟಿಗೆ  25ರೂ.+ ಜಿಎಸ್ ಟಿ (GST)

SBI Customers Alert: ನಕಲಿ ಎಸ್ ಎಂಎಸ್ ಬಗ್ಗೆ ಎಚ್ಚರ, ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ: ಎಸ್ ಬಿಐ ಗ್ರಾಹಕರಿಗೆ ಪಿಐಬಿ ಸಲಹೆ

ವಹಿವಾಟಿನ ಮಿತಿ
ನೆಫ್ಟ್  (NEFT) ಮೂಲಕ ಪ್ರತಿ ವಹಿವಾಟಿನ (transaction) ಕನಿಷ್ಠ ಮಿತಿ 1 ರೂ. ಹಾಗೂ ಗರಿಷ್ಠ ಮಿತಿ 15 ಲಕ್ಷ ರೂ. ಇ-ಬ್ಯಾಂಕಿಂಗ್ ಹಾಗೂ ಎಂ-ಬ್ಯಾಂಕಿಂಗ್ ಮೂಲಕ ನೆಫ್ಟ್ ದಿನದ ವಹಿವಾಟಿನ ಮಿತಿ 10ಲಕ್ಷ ರೂ. ಒಂದು ದಿನದಲ್ಲಿ ಗರಿಷ್ಠ 5 ನೆಫ್ಟ್ ವಹಿವಾಟು ನಡೆಸಬಹುದು. ವಂಚನೆ ಪ್ರಕರಣಗಳ ಅಪಾಯ ತಗ್ಗಿಸಲು ಇ-ಬ್ಯಾಂಕಿಂಗ್ (eBanking) ಹಾಗೂ ಎಂ ಬ್ಯಾಂಕಿಂಗ್ (m-Banking) ನೆಫ್ಟ್ (NEFT) ಸೇವೆಯ ಸಮಯದಲ್ಲಿ ಬದಲಾವಣೆಯಿದೆ. ಹೀಗಾಗಿ ರಾತ್ರಿ 8ರಿಂದ ಬೆಳಗ್ಗೆ 8ರ ತನಕ  ಇ-ಬ್ಯಾಂಕಿಂಗ್/ಎಂ-ಬ್ಯಾಂಕಿಂಗ್ ಮೂಲಕ ನೆಫ್ಟ್ (NEFT) ವಹಿವಾಟಿನ (transaction) ಗರಿಷ್ಠ ಮಿತಿ (Limit) 2 ಲಕ್ಷ ರೂ. 

Follow Us:
Download App:
  • android
  • ios