Asianet Suvarna News Asianet Suvarna News

PAN Aadhaar Link: ಮಾರ್ಚ್ 31, 2023ರ ತನಕ ಗಡುವು ವಿಸ್ತರಣೆ; ಇಂದಿನಿಂದ ಈ ಕೆಲ್ಸ ಉಚಿತವಲ್ಲ, ದಂಡ ಖಚಿತ!

*ಏಪ್ರಿಲ್ 1ರಿಂದ ಆಧಾರ್ ಜೊತೆ ಪ್ಯಾನ್ ಸಂಖ್ಯೆ ಜೋಡಣೆಗೆ 500ರೂ. ದಂಡ
*2022ರ ಜುಲೈ 1ರ ಬಳಿಕ ಪ್ಯಾನ್ -ಆಧಾರ್ ಜೋಡಣೆ ಮಾಡಿದ್ರೆ 1000ರೂ. ದಂಡ
*ಮಾ.31, 2022ರ ತನಕ ಆಧಾರ್ ಗೆ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯಗೊಳ್ಳುವುದಿಲ್ಲ 

PAN Aadhaar linking deadline extended but fees imposed from April 1 2022
Author
Bangalore, First Published Apr 1, 2022, 11:38 AM IST

ನವದೆಹಲಿ (ಏ.1): ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಗೆ (Aadhaar) ಲಿಂಕ್ ಮಾಡೋ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ 2022ರ ಮಾರ್ಚ್ 31 ಪ್ಯಾನ್-ಆಧಾರ್ ಜೋಡಣೆಗೆ ಕೊನೆಯ ದಿನಾಂಕವಾಗಿತ್ತು. ಆದ್ರೆ ಈಗ ಈ ಅವಧಿಯನ್ನು 2023ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. ಆದ್ರೆ ಇಂದಿನಿಂದ (ಏ.1) ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡೋರಿಗೆ ಶುಲ್ಕ ವಿಧಿಸಲಾಗುತ್ತದೆ.

ಈ ಬಗ್ಗೆ ಮಾಹಿತಿ ನೀಡಿರೋ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT),'ತೆರಿಗೆದಾರರಿಗೆ (Tax payers) ಎದುರಾಗೋ ಅನಾನುಕೂಲತೆಗಳನ್ನು ತಪ್ಪಿಸಲು ಇನ್ನೊಂದು ಅವಕಾಶ ನೀಡಲಾಗಿದ್ದು, ಪ್ಯಾನ್ ಕಾರ್ಡ್ ಆಧಾರ್ ಜೋಡಣೆ ಗಡುವನ್ನು 2023ರ ಮಾರ್ಚ್‌ 31ಕ್ಕೆ ವಿಸ್ತರಿಸಲಾಗಿದೆ. ಪ್ಯಾನ್ -ಆಧಾರ್ ಜೋಡಣೆ ಮಾಡಲು 2022 ಏಪ್ರಿಲ್ 1ರಿಂದ ಮೂರು ತಿಂಗಳುಗಳ ಅವಧಿಯಲ್ಲಿ  ತೆರಿಗೆದಾರರು 500ರೂ. ಶುಲ್ಕ (Fee) ಪಾವತಿಸಬೇಕು. ಆ ಬಳಿಕದ ಅವಧಿಗೆ 1000 ರೂ. ಪಾವತಿಸಬೇಕು. ಆಧಾರ್ ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ ಕಾಯ್ದೆ ಅನ್ವಯ ನಡೆಯೋ  ಆದಾಯ ತೆರಿಗೆ ರಿರ್ಟನ್ ಸಲ್ಲಿಕೆ, ಮರುಪಾವತಿ ಪ್ರಕ್ರಿಯೆ ಮುಂತಾದವನ್ನು ಪೂರ್ಣಗೊಳಿಸಲು ಕ್ರಿಯಾಶೀಲವಾಗಿರುತ್ತದೆ' ಎಂದು ತಿಳಿಸಿದೆ.

PAN Aadhaar Link: ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ!

ಹೀಗಾಗಿ 2022ರ ಏಪ್ರಿಲ್ 1ರಿಂದ ಪ್ಯಾನ್ ಅನ್ನು ಆಧಾರ್ ಗೆ ಲಿಂಕ್ ಮಾಡಲು 500ರೂ. ಖರ್ಚಾಗುತ್ತದೆ. ಒಂದು ವೇಳೆ 2022ರ ಜುಲೈ 1ರ ಬಳಿಕ ಪ್ಯಾನ್ -ಆಧಾರ್ ಜೋಡಣೆ ಮಾಡಿದ್ರೆ 1000ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು 2023ರ ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ 2023ರ ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ.  ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ತೊಂದರೆಯಾಗುತ್ತದೆ.

2020ರಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಎಲ್ಲ ಪ್ಯಾನ್ ಕಾರ್ಡ್ ಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡೋದನ್ನು ಕಡ್ಡಾಯಗೊಳಿಸಿತ್ತು. ಈ ಕೆಲಸಕ್ಕೆ 2021ರ ಜೂನ್ 30ರ ಗಡುವು ನೀಡಿತ್ತು. ಆ ಬಳಿಕ ಈ ಗಡುವನ್ನು 2021ರ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಮತ್ತೆ 2022ರ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿತ್ತು.
ಆದಾಯ ತೆರಿಗೆ ಕಾನೂನಿನ ಪ್ರಕಾರ 2017ರ ಜುಲೈ 1ರಿಂದ ಪ್ರತಿ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯ. ಅದೇರೀತಿ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡೋದನ್ನು ಕೂಡ ಕಡ್ಡಾಯ ಮಾಡಲಾಗಿದೆ. ನಿಗದಿತ ದಿನಾಂಕದೊಳಗೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸೋದಾಗಿಯೂ ಆದಾಯ ತೆರಿಗೆ ಇಲಾಖೆ ಈ ಹಿಂದೆಯೇ ಮಾಹಿತಿ ನೀಡಿತ್ತು.

Deadline extended:ರೈತರಿಗೆ ನೆಮ್ಮದಿಯ ಸುದ್ದಿ; ಪಿಎಂ ಕಿಸಾನ್ ಇ-ಕೆವೈಸಿ ಗಡುವು ಮೇ 22ಕ್ಕೆ ವಿಸ್ತರಣೆ

ಪ್ಯಾನ್-ಆಧಾರ್ ಲಿಂಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಅನೇಕ ವಿಧಾನಗಳನ್ನು ಒದಗಿಸಿದೆ. ಇದರಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್, ಎಸ್ ಎಂಎಸ್, ಎನ್ಎಸ್ ಡಿಎಲ್ (NSDL) ಅಥವಾ ಯುಟಿಐಐಎಲ್ (UTIIL) ಕಚೇರಿಗಳಿಗೆ ಭೇಟಿ ನೀಡೋ ಮೂಲಕ ಪ್ಯಾನ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. 
 

Follow Us:
Download App:
  • android
  • ios