ಆಧಾರ್-ಪಾನ್‌ ಕಾರ್ಡ್ ಸಂಯೋಜನೆ ಗಡುವು ಮತ್ತೆ ವಿಸ್ತರಣೆಗೊಳಿಸಲಾಗಿದೆ.

ನವದೆಹಲಿ[ಏ.01]: ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯ ಜೊತೆ ಜೋಡಿಸಲು ನೀಡಿದ್ದ ಗಡುವನ್ನು ಮತ್ತೆ 6 ತಿಂಗಳು ಕಾಲ ವಿಸ್ತರಣೆ ಮಾಡಲಾಗಿದೆ.

ಹೀಗಾಗಿ ಆಧಾರ್‌ಗೆ ಪಾನ್ ಜೋಡಿಸಲು 2019ರ ಸೆ.30ರವರೆಗೂ ಕಾಲಾವಕಾಶ ಸಿಗಲಿದೆ. ಹೀಗೆ ಜೋಡಣೆಗೆ ಗಡುವನ್ನು ವಿಸ್ತರಣೆ ಮಾಡುತ್ತಿರುವುದು ಇದು 6ನೇ ಸಲವಾಗಿದೆ.ಕಳೆದ ವರ್ಷದ ಜೂನ್ ತಿಂಗಳಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಕೇಂದ್ರೀಯ ನೇರ ತೆರಿಗೆ ಮಂಡಳಿ 2019ರ ಮಾ.31ರೊಳಗೆ ಆಧಾರ ಜೊತೆ ಪಾನ್ ಜೋಡಿಸಬೇಕು ಎಂದು ಹೇಳಿತ್ತು.

ಆದರೆ ಇದೀಗ ಮತ್ತೆ ಗಡುವು ವಿಸ್ತರಿಸಲಾಗಿದೆ