Asianet Suvarna News Asianet Suvarna News

ನಿಮ್ಮ ಧಮ್ಮಯ್ಯ ಸಿಲ್ಕ್ ರೋಡ್ ಬೇಡ: ಅಂಗಲಾಚಿದ ಪಾಕ್!

ಒನ್ ಬೆಲ್ಟ್ ಒನ್ ರೋಡ್ ಯೋಜನೆ ಬೇಡ ಅಂತಿದೆ ಪಾಕ್! ಚೀನಾದ ಸಾಲದ ಸುಳಿಗೆ ಸಿಕ್ಕು ಒದ್ದಾಡುತ್ತಿರುವ ಪಾಕಿಸ್ತಾನ! ಅರೇಬಿಯನ್ ಸಮುದ್ರದ ರೈಲ್ವೇ ಹಳಿ ಯೋಜನೆ ಏನಾಗುತ್ತೆ?! ಅಧಿಕ ವೆಚ್ಚ ಮಾಡಲು ಹಿಂದೇಟು ಹಾಕುತ್ತಿರುವ ಇಮ್ರಾನ್ ಸರ್ಕಾರ

Pakistan is in Debt Trap, refusing Chinese Silk Road Projects
Author
Bengaluru, First Published Sep 30, 2018, 3:38 PM IST

ಇಸ್ಲಾಮಾಬಾದ್(ಸೆ.30): ಚೀನಾ-ಪಾಕಿಸ್ತಾನ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಗೆ ಕುತ್ತು ಬಂದಿದ್ದು, ಪಾಕಿಸ್ತಾನಕ್ಕೆ ದುಬಾರಿ ಸಾಲದ ಶೂಲದ ಭೀತಿ ಎದುರಾಗಿದ್ದರಿಂದ ಯೋಜನೆಯಿಂದ ಹಿಂದೆ ಸರಿಯುವ ಲಕ್ಷಣ ಕಂಡುಬರುತ್ತಿದೆ.

ಚೀನಾ-ಪಾಕ್ ಒಪ್ಪಂದದ ಅನ್ವಯ ಪಾಕಿಸ್ತಾನದಲ್ಲಿ ಚೀನಾ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ. ಆದರೆ ಈ ಅಭಿವೃದ್ಧಿ ಕಾರ್ಯಗಳೇ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖವಾಗಿ ಅರೇಬಿಯನ್ ಸಮುದ್ರದ ರೈಲ್ವೇ ಹಳಿ ಯೋಜನೆ ತಡವಾದ ಕಾರಣ 8.2 ಬಿಲಿಯನ್ ಡಾಲರ್ ಹೆಚ್ಚುವರಿ ಸಾಲದ ಹೊಣೆ ಪಾಕ್ ಸರ್ಕಾರದ ಮೇಲೆ ಬಿದ್ದಿದೆ. 

ಕರಾಚಿ ಮತ್ತು ಪೇಶಾವರ ನಡುವಿನ ಈ ಮೆಗಾ ರೈಲು ಹಳಿ ಸಂಪರ್ಕ ಜೋಡಣೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಅಂಗವಾಗಿದ್ದು, ಇದೀಗ ಈ ಯೋಜನೆಗಾಗಿ ಪಾಕ್ ಸರ್ಕಾರ ದುಬಾರಿ ಹಣ ವ್ಯಯಿಸುವಂತಾಗಿದೆ. ಆದರೆ ಈ ಯೋಜನೆಗೆ ಅಧಿಕ ವೆಚ್ಚ ಮಾಡಲು ನೂತನ ಇಮ್ರಾನ್ ಖಾನ್ ಸರ್ಕಾರ ಹಿಂದೇಟು ಹಾಕುತ್ತಿದ್ದು, ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಎನ್ನಲಾಗಿದೆ.

Follow Us:
Download App:
  • android
  • ios