ಇಸ್ಲಾಮಾಬಾದ್‌[ಅ.05]: ಆರ್ಥಿಕತೆ ಕುಸಿದಾಗ ಉದ್ಯಮಿಗಳ ಜೊತೆ ವಿತ್ತ ಸಚಿವರು ಸಭೆ ನಡೆಸುವುದು, ಅವರಿಗೆ ಧೈರ್ಯ ಹೇಳುವುದು ಸಾಮಾನ್ಯ. ಅಚ್ಚರಿಯ ವಿಷಯವೆಂದರೆ ಪಾಕಿಸ್ತಾನದಲ್ಲಿ ಈ ವಿಷಯವನ್ನು ಸೇನಾ ಮುಖ್ಯಸ್ಥ ಖ್ವಾಮರ್‌ ಜಾವೇದ್‌ ಬಜ್ವಾ ವಹಿಸಿಕೊಂಡಿದ್ದಾರೆ!

ನಿಜ, ಆರ್ಥಿಕ ಹಿಂಜರಿತ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲಿರುವ ಉದ್ಯಮ ವಲಯಕ್ಕೆ ನೆರವು ನೀಡಿ ಎಂದು ಹಲವು ಸಮಯದಿಂದ ಉದ್ಯಮಿಗಳು ಪ್ರಧಾನಿ ಇಮ್ರಾನ್‌ಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಇದಕ್ಕೆ ಕಿವಿಗೊಟ್ಟಿಲ್ಲ ಎಂದು ಬೇಸತ್ತಿರುವ ಉದ್ಯಮಿಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರೆ.

ಹೀಗಾಗಿ ಅವರ ಮನವೊಲಿಸುವ ನಿಟ್ಟಿನಲ್ಲಿ ಸ್ವತಃ ಬಜ್ವಾ ಅವರೇ ಪ್ರಮುಖ ಉದ್ಯಮಿಗಳೊಂದಿಗೆ ಸಭೆ ನಡೆಸಿ ಅವರಿಗೆ ನೆರವಿನ ಭರವಸೆ ನೀಡಿದ್ದಾರೆ. ಬಜ್ವಾ ಅವರು ಪ್ರಧಾನಿ ಇಮ್ರಾನ್‌ ನೇತೃತ್ವದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸದಸ್ಯರು ಕೂಡಾ ಹೌದು.