Asianet Suvarna News Asianet Suvarna News

Padma Award: ಪುರಸ್ಕೃತರನ್ನು ಭೇಟಿಯಾದ ಮೋದಿ, ಅಚ್ಚರಿಯ ವಿಚಾರ ಶೇರ್ ಮಾಡಿದ naukri.com ಸಂಸ್ಥಾಪಕ!

* 2020ನೇ ಸಾಲಿನ ಪದ್ಮ ಪ್ರಶಸ್ತಿ ರಾಷ್ಟ್ರಪತಿ ಭವನದಲ್ಲಿ ಪ್ರದಾನ

* ಸಮಾರಂಭದ ಬಳಿಕ ಪ್ರಶಸ್ತಿ ಪುರಸ್ಕೃತರ ಭೇಟಿಯಾದ ಮೋದಿ

* ಯಾರ ಸಹಾಯವೂ ಇಲ್ಲದೆ ಎಲ್ಲರೊಂದಿಗೆ ಮೋದಿ ಆಪ್ತ ಮಾತು

Padma Shree Sanjeev Bikhchandani Tweets Picture with PM Narendra Modi pod
Author
Bangalore, First Published Nov 9, 2021, 3:09 PM IST

ನವದೆಹಲಿ(ನ.09): ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 9 ಕನ್ನಡಿಗರಿಗೆ 2020ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನೀಡಿ ಸೋಮವಾರ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ (President Ram Nath Kovind) ಅವರು ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿಯ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಿಗೆ ಮರಣೋತ್ತರ ಪದ್ಮಭೂಷಣ ಗೌರವ ನೀಡಲಾಯಿತು. ಈಗಿನ ಯತಿಗಳಾದ ವಿಶ್ವಪ್ರಸನ್ನ ಶ್ರೀಪಾದರು ಗೌರವ ಸ್ವೀಕರಿಸಿದರು. ಮಾಜಿ ಕೇಂದ್ರ ಸಚಿವ ಜಾಜ್‌ರ್‍ ಫರ್ನಾಂಡಿಸ್‌ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರದಾನ ಮಾಡಲಾಯಿತು. ಫರ್ನಾಂಡಿಸ್‌ ಅವರ ಪರ ಅವರ ಪತ್ನಿ ಗೌರವ ಸ್ವೀಕರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 141 ಜನರಿಗೆ 2020 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಇವರಲ್ಲಿ, ದೇಶದ ಪ್ರಮುಖ ಉದ್ಯೋಗ ವೆಬ್‌ಸೈಟ್ ನೌಕ್ರಿ ಡಾಟ್ ಕಾಮ್ (Naukri.com) ಸಂಸ್ಥಾಪಕ ಮತ್ತು ಉಪಾಧ್ಯಕ್ಷ ಸಂಜೀವ್ ಬಿಖ್‌ಚಂದಾನಿ (Sanjeev Bikhchandani) ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ (Prime Minister narendra Modi) ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಿದ್ದಾರೆ. ಮೋದಿ ಕೂಡ ಬಿಖ್‌ಚಂದಾನಿ ಅವರನ್ನು ಹಳೆಯ ಸ್ನೇಹಿತನಂತೆ ಭೇಟಿಯಾದರು. ಪ್ರಧಾನಮಂತ್ರಿಯವರು ಪ್ರಶಸ್ತಿ ಪುರಸ್ಕೃತರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿದರು ಮತ್ತು ಅವರೊಂದಿಗೆ ಸೌಹಾರ್ದಯುತವಾಗಿ ಸಂವಾದ ನಡೆಸಿದರು ಎಂಬುವುದು ಉಲ್ಲೇಖನೀಯ. ಹಳೇ ಪರಿಚಯವೇನೋ ಎಂಬಷ್ಟು ಆತ್ಮೀಯತೆಯಿಂದ ಭೇಟಿಯಾದ ಪ್ರಧಾನಿ ಮೋದಿಯವರ ಅರ್ಥಗರ್ಭಿತ ಸಂಭಾಷಣೆಯ ಶೈಲಿಯು ಎಲ್ಲರಿಗೂ ಇಷ್ಟವಾಗಿದೆ.

ಫೋಟೋವನ್ನು ಟ್ವೀಟ್ ಮಾಡಿದ ಬಿಖ್‌ಚಂದಾನಿ

ಬಿಖ್‌ಚಂದಾನಿ ಅವರು ಮೋದಿ ಅವರೊಂದಿಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ ಹಾಗೂ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಪ್ರಶಸ್ತಿ ವಿಜೇತರೊಂದಿಗೆ ಹೇಗೆ ಆಪ್ತರಾಗಿ ಸಂವಾದ ನಡೆಸಿದರು ಎಂದೂ ವಿವರಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರೊಂದಿಗೆ ಮಾತನಾಡಲು ಅಥವಾ ಅವರ ಪರಿಚಯ ಪಡೆಯಲು ಮೋದಿ ಯಾವುದೇ ಸಹವರ್ತಿ ಜೊತೆಗಿಟ್ಟುಕೊಳ್ಳಲಿಲ್ಲ ಅಥವಾ ಗುರುತಿನ ಚೀಟಿ ಇಟ್ಟುಕೊಂಡಿರಲಿಲ್ಲ. ಅವರಿಗೆ ಎಲ್ಲರ ಪರಿಚಯ ಇತ್ತು. ಅವರು ಸ್ಟಾರ್ಟ್‌ಅಪ್‌ಗಳ ಬಗ್ಗೆ ಬುದ್ದಿವಂತರಾಗಿದ್ದರು. ನೌಕ್ರಿ ಜಾಬ್ ಸ್ಪೀಕ್ ಇಂಡೆಕ್ಸ್‌ನಲ್ಲಿ ಉದ್ಯೋಗಗಳ ಏರಿಕೆ ಬಗ್ಗೆ ಮೋದಿ ಸಂತೋಷ ವ್ಯಕ್ತಪಡಿಸಿದರು ಎಂದಿದ್ದಾರೆ.

ಇನ್ನು ನೌಕ್ರಿ ಜಾಬ್ ಸ್ಪೀಕ್ ವರದಿಯಲ್ಲಿ, ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ನೇಮಕಾತಿ ಚಟುವಟಿಕೆಗಳಲ್ಲಿ ಶೇಕಡಾ 57 ರಷ್ಟು ಭಾರಿ ಹೆಚ್ಚಳವಾಗಿದೆ ಎಂಬುವುದು ಉಲ್ಲೇಖನೀಯ. IT, ಹಾಸ್ಪಿಟಾಲಿಟಿ ಸೆಪ್ಟೆಂಬರ್ 2021 ರಲ್ಲಿ ಹೊಸ ದಾಖಲೆಯನ್ನು ಮಾಡಿದೆ. ಶಿಕ್ಷಣ ಕ್ಷೇತ್ರದೊಂದಿಗೆ, ರಿಯಲ್ ಎಸ್ಟೇಟ್‌ನ ಪರಿಸ್ಥಿತಿಯೂ ವೇಗವಾಗಿ ಸುಧಾರಿಸುತ್ತಿದೆ.

ಕಂಪನಿಯು 18 ಗಂಟೆ ಕೆಲಸ ಮಾಡಿ ಕಂಪನಿ ನಿರ್ಮಾಣ

ಸಂಜೀವ್ ಬಿಖ್‌ಚಂದಾನಿ ನೌಕ್ರಿ ಡಾಟ್ ಕಾಮ್ ವೆಬ್‌ಸೈಟ್ ಪ್ರಾರಂಭಿಸಿದಾಗ, ಅವರು ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ದೆಹಲಿಯಲ್ಲಿ ಜನಿಸಿದ ಸಂಜೀವ್ ಅವರ ತಂದೆ ಸರ್ಕಾರಿ ವೈದ್ಯರಾಗಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ಅವರ ಕುಟುಂಬಕ್ಕೂ ಇಂತಹ ಬ್ಯುಸಿನೆಸ್‌ಗೂ ಯಾವುದೇ ಸಂಬಂಧವಿರಲಿಲ್ಲ. ಸಂಜೀವ್ ಅವರ ಪತ್ನಿ ಸುರಭಿ ಆಗ ನೆಸ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಇನ್ನು  Bikhchandani ಕಂಪನಿಯು ಜೀವನ್‌ ಸಾಥಿ ಡಾಟ್‌ ಕಾಂ, 99acres.com ಮತ್ತು Shiksha.com ಅನ್ನು ಸಹ ನಿರ್ವಹಿಸುತ್ತದೆ. ಜೊಮಾಟೊ, ಪಾಲಿಸಿ ಬಜಾರ್, ಶಾಪ್ ಕಿರಣ ಮತ್ತು ಉಸ್ಟ್ರಾ ಮುಂತಾದ ಸ್ಟಾರ್ಟಪ್ ಕಂಪನಿಗಳಲ್ಲೂ ಹೂಡಿಕೆ ಮಾಡಿದೆ. ಬಿಖ್‌ಚಂದಾನಿ ಅವರು 1989 ರಲ್ಲಿ ಐಐಎಂ ಅಹಮದಾಬಾದ್‌ನಿಂದ ಉತ್ತೀರ್ಣರಾಗಿದ್ದಾರೆ. ಅವರ ಕಂಪನಿಯು ಗ್ಯಾರೇಜ್‌ನ ಮೇಲಿರುವ ನೌಕರರು ಉಳಿದುಕೊಳ್ಳುತ್ತಿದ್ದ ಕೋಣೆಯಲ್ಲಿ ಪ್ರಾರಂಭವಾಯಿತು. ಆರಂಭಿಕ ಬಂಡವಾಳ 2,000 ರೂ. ಆದರೆ ಇಂದು ಈ ಕಂಪನಿಯು 4,000 ಜನರನ್ನು ನೇಮಿಸಿಕೊಂಡಿದೆ.

Follow Us:
Download App:
  • android
  • ios