Asianet Suvarna News Asianet Suvarna News

ಆದಾಯ ತೆರಿಗೆ ಹೊಸ ಪೋರ್ಟಲ್ ಮೂಲಕ 2 ಕೋಟಿಗೂ ಅಧಿಕ ITR ಸಲ್ಲಿಕೆ!

  • ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್ ಸಮಸ್ಯೆ ನಿವಾರಣೆ
  • ಇದುವರೆಗೆ 13.44 ಕೋಟಿ ಮಂದಿ  ಪೋರ್ಟಲ್‌ಗೆ ಲಾಗ್ ಇನ್ 
  • ಜೂನ್ 7 ರಂದು ಲಾಂಚ್ ಮಾಡಿದ್ದ ಹೊಸ ತೆರಿಗೆ ಪೋರ್ಟಲ್‌
Over 2 crore Income Tax Returns filed on e Filing portal of Income Tax Department ckm
Author
Bengaluru, First Published Oct 14, 2021, 5:31 PM IST

ನವದೆಹಲಿ(ಅ.14):  ದೇಶದ ಆದಾಯ ತರಿಗೆ(Income Tax) ಸಲ್ಲಿಕೆ, ಹಿಂಪಡೆಯುವಿಕೆ ಸೇರಿದಂತೆ ಟ್ಯಾಕ್ಸ್ ಸಂಬಂಧಿತ ಕಾರ್ಯಗಳು ಸುಲಭವಾಗಿ ಸಾಗಲು ಕೇಂದ್ರ ಆದಾಯ ತೆರಿಗೆ ಇಲಾಖೆ ಜೂನ್ 7 ರಂದು ಹೊಸ ಪೋರ್ಟಲ್(Portal) ಬಿಡುಗಡೆ ಮಾಡಿತ್ತು. ಆದರೆ ಈ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಆದಾಯ ತೆರಿಗೆ ರಿಟರ್ನ್ಸ್(Income tax retunrs) ಸಲ್ಲಿಕೆ ಸಮಸ್ಯೆಯಾಗಿತ್ತು. ಇದೀಗ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ಇದುವರೆಗೆ 2 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಸಲಾಗಿದೆ. 

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕ ಡಿ.31ಕ್ಕೆ ವಿಸ್ತರಿಸಿದ ಕೇಂದ್ರ!

ಆದಾಯ ತೆರಿಗೆ ಇಲಾಖೆ ಜೂನ್ ತಿಂಗಳಲ್ಲಿ ಹೊಸ ವೆಬ್‌ಸೈಟ್ ಬಿಡುಗಡೆ ಮಾಡಿತ್ತು. ಈ ಸುಲಭ ಸುಲಭವಾಗಿ ಆದಾಯ ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಪೋರ್ಟಲ್ ತಾಂತ್ರಿಕ ಸಮಸ್ಯೆಯಿಂದ ತೆರಿದಾರರು ತೀವ್ರ ತೊಂದರೆಗೆ ಸಿಲುಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಆದಾಯ ತೆರಿಗೆ ರಿಟರ್ನ್ಸ ಸಲ್ಲಿಕೆ ಗಡುವು ವಿಸ್ತರಿಸಿತ್ತು. ಇದೀಗ ಸಮಸ್ಯೆ ನಿವಾರಣೆಯಾಗಿ ತೆರಿಗಾರರು ಸುಲಭವಾಗಿ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. 

ಅಕ್ಟೋಬರ್ 13ರ ವರೆಗೆ ಆದಾಯ ತೆರಿಗೆ ಇಲಾಖೆ ಹೊಸ ಪೋರ್ಟಲ್ ಮೂಲಕ 2 ಕೋಟಿ ರೂಪಾಯಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಮಾಡಲಾಗಿದೆ. ಇದುವರೆಗೆ 13.44 ಕೋಟಿ ಮಂದಿ ಪೋರ್ಟಲ್ ಮೂಲಕ ಲಾಗಿನ್ ಆಗಿ, ITR ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 1.70 ಕೋಟಿ ರೂಪಾಯಿಗೂ ಹೆಚ್ಚು ರಿಟರ್ನ್ಸ್ ಇ ವೆರಿಫೈ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಆಧಾರ ಒಟಿಪಿ ಆಧಾರಿತವಾಗಿ  ಇ ವೆರಿಫೈ ಮಾಡಲಾಗಿದೆ. 

ಆದಾಯ ತೆರಿಗೆ ಕಾಯ್ದೆಯ ಅಡಿಯ ಹಲವು E ಫಾರ್ಮ್ ಫೈಲಿಂಗ್ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

ವೆರಿಫೈ ಮಾಡಲಾದ ITR ಒಂದು ಮತ್ತು 4ರಲ್ಲಿ 1.06 ಕೋಟಿ  ITR ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನು 36.22 ಲಕ್ಷ ರೂಪಾಯಿ ರೀಫಂಡ್ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಇನ್ನು  ITR 2 ಮತ್ತು 3 ರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

 

1.83 ಲಕ್ಷ 15CA ಮತ್ತು 37,870 15CB ಫಾರ್ಮ್ ಸಲ್ಲಿಸಲಾಗಿದೆ. 21.40 ಲಕ್ಷಕ್ಕೂ ಹೆಚ್ಚು ಇ-ಪ್ಯಾನ್‌ಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಹಂಚಲಾಗಿದೆ. ನೋಂದಣಿ ಮತ್ತು ಅನುಸರಣೆಗಾಗಿ ಕಾನೂನು ಉತ್ತರಾಧಿಕಾರಿ ಕಾರ್ಯವನ್ನು ಸಕ್ರಿಯಗೊಳಿಸಲಾಗಿದೆ. 9.08 ಲಕ್ಷ ಟಿಡಿಎಸ್, 1.20 ಲಕ್ಷ 10 ಎ ಫಾರ್ಮ್, 1.98 ಲಕ್ಷ 10e ಫಾರ್ಮ್ ಸಲ್ಲಿಸಲಾಗಿದೆ. ಈ ಕುರಿತು ಹೊಸ ಪೋರ್ಟಲ್ ವಿವರ ನೀಡಿದೆ. ಇದರ ಜೊತೆಗೆ ವಿಡಿಯೋ ಕಾನ್ಫೆರೆನ್ಸಿಂಗ್, ಫೈಲಿಂಗ್ ಪ್ರಕ್ರಿಯೆ ಸಕ್ರಿಯಗೊಳಿಸಲಾಗಿದೆ. 

ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ

ಎಲ್ಲಾ ತೆರಿಗೆದಾರರು ಫಾರ್ಮ್ 26ASನ್ನು ಇ ಫೈಲಿಂಗ್ ಮೂಲಕ ಟಿಡಿಎಸ್ ಹಾಗೂ ತೆರಿಗೆ ಪಾವತಿ ನಿಥರತೆ ಪರಿಶೀಲಿಸು ಸೂಚಿಸಿದೆ. ಇದೇ ವೇಳೆ ITR ಪೂರ್ವ ಭರ್ತಿ ಪ್ರಯೋಜನ ಪಡೆಯಲು ಆದಾಯ ತೆರಿಗೆ ಇಲಾಖೆ ಒತ್ತಾಯಿಸಿದೆ. AY 2021-22ರ   ಆದಾಯ ತೆರಿಗೆ ರಿಟರ್ನ್ಸ್ ಇನ್ನೂ ಸಲ್ಲಿಸದ ಎಲ್ಲ ತೆರಿಗೆದಾರರು ತಮ್ಮ ರಿಟರ್ನ್ಸ್ ಅನ್ನು ಬೇಗನೆ ಸಲ್ಲಿಸುವಂತೆ ಕೋರಲಾಗಿದೆ.

Follow Us:
Download App:
  • android
  • ios