ದೇಶದ ಅಗ್ರ ಆನ್‌ಲೈನ್‌ ಫರ್ನಿಚರ್‌ ಸ್ಟೋರ್‌ಗಳಲ್ಲಿ ಒಂದಾದ ಪೆಪ್ಪರ್‌ಫ್ರೈನ ಸಹಸಂಸ್ಥಾಪಕ ಅಂಬರೀಷ್‌, ಸೋಮವಾರಸ ಹೃದಯಾಘಾತದಿಂದ ಸಾವು ಕಂಡಿದ್ದಾರೆ. 

ನವದೆಹಲಿ (ಆ.8): ದೇಶದ ಪ್ರಮುಖ ಆನ್‌ಲೈನ್‌ ಫರ್ನಿಚರ್‌ ಸ್ಟೋರ್‌ಗಳಲ್ಲಿ ಒಂದಾದ ಪೆಪ್ಪರ್‌ ಫ್ರೈನ ಸಹ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿದ್ದ ಅಂಬರೀಷ್‌ ವೇದಾಂತಂ ಮೂರ್ತಿ ಸೋಮವಾರ ನಿಧನರಾದರು. ಲೇಹ್‌ನಲ್ಲಿ ಸೋಮವಾರ ರಾತ್ರಿ 49 ವರ್ಷದ ಅಂಬರೀಷ್‌ ಮೂರ್ತಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ಕಂಪನಿಯ ಇನ್ನೊಬ್ಬ ಸಹಸಂಸ್ಥಾಪಕ ಅಶಿಶ್‌ ಶಾ ಮಂಗಳವಾರ ಬೆಳಗ್ಗೆ ಟ್ವಿಟರ್‌ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ.ಆಪ್ತ ಮೂಲಗಳ ಪ್ರಕಾರ, ಲಡಾಕ್‌ ಪ್ರವಾಸಕ್ಕೆ ತೆರಳಿದ್ದ ಅವರಿಗೆ ಲೇಹ್‌ನಲ್ಲಿ ಸೋಮವಾರ ರಾತ್ರಿ ಹೃದಯಾಘಾತವಾಗಿದೆ. 2012ರಲ್ಲಿ ಆಶೀಶ್‌ ಶಾ ಜೊತೆಗೂಡಿ ಮುಂಬೈನಲ್ಲಿ ಆನ್‌ಲೈನ್‌ ಫರ್ನಿಚರ್‌ ಸ್ಟೋರ್‌ ಹಾಗೂ ಹೋಮ್‌ ಡೆಕೋರ್‌ ಕಂಪನಿ ಪೆಪ್ಪರ್‌ ಫ್ರೈ ಅನ್ನು ಸ್ಥಾಪನೆ ಮಾಡಿದ್ದರು. ಇಂದು ಇವರ ಕಂಪನಿ 500 ಮಿಲಿಯನ್‌ ಡಾಲರ್‌ ಮೌಲ್ಯದ ಬೃಹತ್‌ ಕಂಪನಿಯಾಗಿ ಬೆಳೆದಿದೆ. ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕಲ್ಕತ್ತಾದ ಮಾಜಿ ವಿದ್ಯಾರ್ಥಿಯಾಗಿದ್ದ ಅಂಬರೀಷ್‌ ಮೂರ್ತಿ, ಟ್ರಕ್ಕಿಗ್‌ನ ಉತ್ಸಾಹಿಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಈಗಾಗಲೇ ಅವರು ಎರಡು ಕ್ರಾಸ್‌ ಕಂಟ್ರಿ ಬೈಕಿಂಗ್‌ ಟ್ರಿಪ್‌ಗಳನ್ನೂ ಮಾಡಿದ್ದರು. ಪೆಪ್ಪರ್‌ ಫ್ರೈ ಕಂಪನಿ ಸ್ಥಾಪನೆ ಮಾಡುವ ಮೂಲಕ ಜಾಗತಿಕ ಈ ಕಾಮರ್ಸ್‌ ದೈತ್ಯ ಕಂಪನಿಗಳಲ್ಲಿ ಒಂದಾದ ಇಬೇಯ ಕಂಟ್ರಿ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು.

'ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಕಂಪನಿಯ ಆತ್ಮ ಸಂಗಾತಿ ಅಂಬರೀಶ್ ಮೂರ್ತಿ ಅವರು ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯ ಸ್ತಂಭನದಿಂದ ಅವರನ್ನು ಕಳೆದುಕೊಂಡಿದ್ದೇವೆ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ' ಎಂದು ಆಶಿಶ್‌ ಶಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಡೆಲ್ಲಿ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದ ಅಂಬರೀಷ್‌ ಮೂರ್ತಿ, ಐಐಎಂ ಕಲ್ಕತ್ತಾದಲ್ಲಿ ಎಂಬಿಎ ಪಡಡೆದುಕೊಂಡಿದ್ದರು. 27 ವರ್ಷಗಳ ಹಿಂದೆ ಕ್ಯಾಡಬರಿ ಕಂಪನಿಗೆ ಮ್ಯಾನೇಜ್‌ಮೆಂಟ್‌ ಟ್ರೇನಿಯಾಗಿ ಸೇರಿಕೊಳ್ಳುವ ಮೂಲಕ ವಾಣಿಜ್ಯ ಜಗತ್ತಿಗೆ ಕಾಲಿರಿಸಿದ್ದರು. ಅಂದಾಜು ಐದೂವರೆ ವರ್ಷಗಳ ಕಾಲ ಅವರು ಚಾಕೋಲೇಟ್‌ ಉತ್ಪಾದಕ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಅವರು ಹಣಕಾಸು ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇಂದು ಐಸಿಐಸಿಐ ಪ್ರುಡೆನ್ಶಿಯಲ್‌ ಆಗಿರುವ ಐಸಿಐಸಿಐ ಎಎಂಸಿ ಜೊತೆ ಅಂದಾಜು ಎರಡು ವರ್ಷಗಳ ಕಾಲ ಮಾರ್ಕೆಟಿಂಗ್‌ ವಿಭಾಗದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.

ದೇವರು ಅವರಿಬ್ಬರಿಗೆ ವರ ಕೊಟ್ಟು, ಈಗ ಒಂದು ಕೊಂಡಿಯನ್ನು ಕಿತ್ತುಕೊಂಡಿದ್ದಾನೆ: ನಟ ಧರ್ಮ

ಆ ಬಳಿಕ ಲೆವಿ ಸ್ಟ್ರಸ್‌ ಇಂಡಿಯಾದ ಇಂಡಿಯಾ ಮ್ಯಾನೇಜರ್‌ ಆಗಿದ್ದ ಅವರು ಬೆಂಗಳೂರಿನಲ್ಲಿ ಕೆಲ ಮಾಡಿದ್ದರು. 2003ರಲ್ಲಿ ಲೆವಿ ಸ್ಟ್ರಸ್‌ ತೊರೆದ ಬಳಿಕ, ದೇಶದಲ್ಲಿ ಮ್ಯೂಚುವಲ್‌ ಫಂಡ್‌ ಕಂಪನಿಗಳಿಗೆ ಸಹಾಯ ನೀಡುವ ತಮ್ಮದೇ ಆದ ಒರಿಜಿನ್‌ ರಿಸೋಸರ್ಸ್‌ ಕಂಪನಿಯನ್ನು ಆರಂಭಿಸಿದ್ದರು. ಆದರೆ, ಇದು ಹೆಚ್ಚು ಕಾಲ ಬಾಳಲಿಲ್ಲ. 2005ರಲ್ಲಿ ಕಂಪನಿಯನ್ನು ಇವರು ಮುಚ್ಚಿದ್ದರು. ಬಳಿಕ ಬ್ರಿಟಾನಿಯಾ ಕಂಪನಿಯ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಸೇರಿದ್ದರು. ಏಳು ತಿಂಗಳು ಇಲ್ಲಿ ಕೆಲಸ ಮಾಡಿದ ಬಳಿಕ ಭಾರತ, ಮಲೇಷ್ಯಾ ಹಾಗೂ ಫಿಲಿಪ್ಪಿನ್ಸ್‌ ವಿಭಾಗದ ಇಬೇ ಕಂಟ್ರಿ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು.

RIP Spandana Vijay: ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ, ಐಸಿಎಂಆರ್‌ ಅಧ್ಯಯನ!

ಈ ವೇಳೆ ಪರಿಚಯವಾಗಿದ್ದ ಆಶೀಶ್‌ ಶಾ ಜೊತೆಗೂಡಿ 2012ರಲ್ಲಿ ಪೆಪ್ಪರ್‌ ಫ್ರೈ ಆನ್‌ ಲೈನ್‌ ಫರ್ನಿಚರ್‌ ಸ್ಟೋರ್‌ಅನ್ನು ಆರಂಭಿಸಿದ್ದರು.ಮುಂಬೈನಲ್ಲಿ ಸ್ಥಾಪಿಸಲಾದ ಪೆಪ್ಪರ್‌ಫ್ರೈ, 500 ನಗರಗಳಿಗೆ ಫರ್ನಿಚರ್‌ ಗೂಡ್ಸ್‌ಗಳನ್ನು ತಲುಪಿಸುತ್ತದೆ ಮತ್ತು 20 ನಗರಗಳಲ್ಲಿ ಮೂರು ಗೋದಾಮುಗಳು ಮತ್ತು 60 ಎಕ್ಸ್‌ಪರ್ಟ್‌ ಸ್ಟುಡಿಯೋಗಳನ್ನು ಹೊಂದಿದೆ. ಕಂಪನಿಗಳ ಬಗ್ಗೆ ಮಾಹಿತಿ ನೀಡುವ ಕ್ರಂಚ್‌ಬೇಸ್ ಪ್ರಕಾರ, ಪೆಪ್ಪರ್‌ಫ್ರೈ ತನ್ನ ಆರಂಭದಿಂದಲೂ $245.3 ಮಿಲಿಯನ್ (ಸುಮಾರು ₹1,770 ಕೋಟಿ) ಸಂಗ್ರಹಿಸಿದೆ. 2020ರ ಆರಂಭದಲ್ಲಿ, ಇದು ಫೆವಿಕಾಲ್‌ನ ಮೂಲ ಕಂಪನಿಯಾದ ಪಿಡಿಲೈಟ್ ಇಂಡಸ್ಟ್ರೀಸ್ ನೇತೃತ್ವದಲ್ಲಿ $40 ಮಿಲಿಯನ್ ಫಂಡಿಂಗ್ ಪಡೆದುಕೊಂಡಿತು.