ಯುಕ್ಲೀನ್ ಲಾಂಡ್ರಿ ಬಗ್ಗೆ ಅನೇಕರಿಗೆ ತಿಳಿದಿರಬಹುದು. ಆದರೆ, ಈ ಸಂಸ್ಥೆಯ ಸ್ಥಾಪಕ ಅರುಣಾಭ್ ಸಿನ್ಹಾ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ.ಅಂದು ಐಐಟಿ ಬಾಂಬೆ ಶುಲ್ಕ ಪಾವತಿಸಲು ತಾಯಿ ಬ್ರಾಸ್ಲೆಟ್ ಮಾರಿದ್ದ ಅರುಣಾಭ್ ಸಿನ್ಹಾ, ಇಂದು ಶತಕೋಟಿ ಕಂಪನಿಯ ಒಡೆಯ. ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಅರುಣಾಭ್ ಸಿನ್ಹಾಯಶೋಗಾಥೆ.
Business Desk:ಎಂಬಿಎ ಚಾಯ್ ವಾಲಾನಿಂದ ಹಿಡಿದು ಬಿಟೆಕ್ ಪಾನಿಪುರಿವಾಲಿ ತನಕ ಅನೇಕ ಸ್ಟಾರ್ಟ್ ಅಪ್ ಗಳ ಯಶಸ್ಸಿನ ಕಥೆಗಳನ್ನು ನೀವು ಕೇಳಿರಬಹುದು. ಆದರೆ, ನೀವು ಐಐಟಿ ಲಾಂಡ್ರಿವಾಲಾ ಕಥೆ ಕೇಳಿದ್ದೀರಾ? ಬಾಲ್ಯದಿಂದಲೇ ಆರ್ಥಿಕ ಮುಗ್ಗಟ್ಟಿನಲ್ಲೇ ಬೆಳೆದ ಈ ಹುಡುಗ ಇಂದು ವಾರ್ಷಿಕ 110 ಕೋಟಿ ರೂ. ವ್ಯವಹಾರ ನಡೆಸುವ ಕಂಪನಿಯೊಂದರ ಒಡೆಯ. ಈತನ ಹೆಸರು ಅರುಣಾಭ್ ಸಿನ್ಹಾ. ಭಾರತದ ಯಶಸ್ವಿ ಸ್ಟಾರ್ಟ್ ಅಪ್ ಗಳಲ್ಲೊಂದಾದ ಐಐಟಿ ಲಾಂಡ್ರಿವಾಲಾದ ಸ್ಥಾಪಕ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಅರುಣಾಭ್ ಸಿನ್ಹಾ ಓದಿನಲ್ಲಿ ಚುರುಕಾಗಿದ್ದರೂ ಹಣಕಾಸಿನ ಮುಗ್ಗಟ್ಟಿನಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ, ಅವೆಲ್ಲವನ್ನೂ ಮೆಟ್ಟಿ ನಿಂತು ಐಐಟಿ ಬಾಂಬೆಯಂತಹ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮಾಡಿ ವಾರ್ಷಿಕ 84ಲಕ್ಷ ರೂ. ಪ್ಯಾಕೇಜ್ ಹೊಂದಿರುವ ಉದ್ಯೋಗ ತೊರೆದು ದೇಶಾದ್ಯಂತ ಜನಪ್ರಿಯತೆ ಗಳಿಸಿರುವ 'ಯುಕ್ಲೀನ್' ಲಾಂಡ್ರಿಸಂಸ್ಥೆ ಸ್ಥಾಪಿಸಿರೋದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಅಲ್ಲದೆ, ಇದು ಅನೇಕ ಯುವಜನರಿಗೆ ಪ್ರೇರಣಾದಾಯಿ ಕೂಡ.
ಬಾಲ್ಯದಲ್ಲಿ ಕಾಡಿದ ಆರ್ಥಿಕ ಮುಗ್ಗಟ್ಟು
ಬಿಹಾರದ ಭಾಗಲ್ಪುರ್ ಮೂಲದ ಅರುಣಾಭ್ ಸಿನ್ಹಾ ಅವರ ತಂದೆ ಉದ್ಯೋಗ ಕಾರಣಕ್ಕೆ ಜೇಮ್ ಷೆಡ್ ಪುರ್ ಕ್ಕೆ ಸ್ಥಳಾಂತರಗೊಂಡಿದ್ದರು. ಇಲ್ಲಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಆದರೆ, ಅವರ ವೇತನ ತುಂಬಾ ಕಡಿಮೆ ಇತ್ತು. ಈ ಕಾರಣದಿಂದಲೇ ಅರುಣಾಭ್ ಸಿನ್ಹಾ ಅವರ ಕುಟುಂಬ ಜೆಮ್ ಷೆಡ್ ಪುರದ ಸಣ್ಣ ಹಳ್ಳಿಯೊಂದರಲ್ಲಿ ವಾಸವಿದ್ದರು. ಇಲ್ಲಿಂದ ಶಾಲೆಗೆ ಹೋಗಲು ಅವರು ಪ್ರತಿದಿನ 5 ಕಿ.ಮೀ. ನಡೆಯಬೇಕಿತ್ತು. ಎಂಟನೇ ತರಗತಿಯಲ್ಲಿರುವಾಗ ಅರುಣಾಬ್ ಸಿನ್ಹಾ ಐಐಟಿ ಸೇರುವ ನಿರ್ಧಾರ ಕೈಗೊಳ್ಳುತ್ತಾರೆ. ಐಐಟಿ ಜೆಇಇ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಇನ್ನು ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಪಿಯುಸಿಯಲ್ಲಿರುವಾಗ ಮಕ್ಕಳಿಗೆ ಟ್ಯೂಷನ್ ಕೂಡ ನೀಡುತ್ತಿದ್ದರು.
ಆಗ ಇನ್ಫೋಸಿಸ್‌ನ ಆಫೀಸ್ ಬಾಯ್, ಈಗ ಎರಡು ಸ್ಟಾರ್ಟಪ್ ಮಾಲೀಕ!
ಐಐಟಿ ಶುಲ್ಕ ಪಾವತಿಗೆ ತಾಯಿ ಬ್ರಾಸ್ಲೆಟ್ ಮಾರಾಟ
ಕಠಿಣ ಪರಿಶ್ರಮದ ಫಲ ಎಂಬಂತೆ ಅರುಣಾಬ್ ಸಿನ್ಹಾ ಅವರಿಗೆ ಬಾಂಬೆ ಐಐಟಿಯಲ್ಲಿ ಮೆಟಲರ್ಜಿ ವಿಭಾಗದಲ್ಲಿ ಸೀಟ್ ಸಿಗುತ್ತದೆ. ಆದರೆ, ಪ್ರತಿ ಸೆಮಿಸ್ಟರ್ ಗೆ 50 ಸಾವಿರ ರೂ. ಶುಲ್ಕ ಪಾವತಿಸಬೇಕಿತ್ತು. ಆದರೆ, ಇಷ್ಟು ದೊಡ್ಡ ಮೊತ್ತ ಭರಿಸೋದು ಅವರ ಕುಟುಂಬಕ್ಕೆ ಕಷ್ಟದ ಕೆಲಸವಾಗಿತ್ತು. ಆದರೆ, ಮಗನ ವಿದ್ಯಾಭ್ಯಾಸ ಹಾಳಾಗಬಾರದು ಎಂಬ ಕಾರಣಕ್ಕೆ ಅವರ ತಾಯಿ ತನ್ನ ಬ್ರಾಸ್ಲೆಟ್ ಮಾರಿ ಶುಲ್ಕ ಪಾವತಿಸಲು ಹಣ ನೀಡಿದ್ದರು. ನಂತರದ ಸೆಮಿಸ್ಟರ್ ಗೆ ಅವರ ಮಾವ ಶುಲ್ಕ ಪಾವತಿಸಿದ್ದರು. ಐಐಟಿಯಲ್ಲಿ ಪದವಿ ಪೂರ್ಣಗೊಂಡ ಬಳಿಕ ಅರುಣಾಬ್ ಸಿನ್ಹಾ ಫ್ರಾನ್ ಗ್ಲೋಬಲ್ ಎಂಬ ಸಂಸ್ಥೆ ಕಂಪನಿ ಸ್ಥಾಪಿಸುತ್ತಾರೆ. 2015ರಲ್ಲಿ ಈ ಕಂಪನಿಯನ್ನು ಮಾರಿ ಟ್ರೀಬೋ ಹೋಟೆಲ್ ಗಳಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ವಾರ್ಷಿಕ 84ಲಕ್ಷ ರೂ. ಪ್ಯಾಕೇಜ್ ಇತ್ತು.
Deepika Padukone: ಬ್ಯುಸಿನೆಸ್ ನಲ್ಲೂ ಹಣ ಹೂಡಿ ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ ಬುದ್ಧಿವಂತ ನಟಿ!
ಯುಕ್ಲೀನ್ ಸ್ಥಾಪನೆಗೆ ಪ್ರೇರಣೆ ಸಿಕ್ಕಿದ್ದು ಹೀಗೆ
ಹೋಟೆಲ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಶೇ.60ರಷ್ಟು ದೂರುಗಳು ಲಾಂಡ್ರಿಗೆ ಸಂಬಂಧಿಸಿದ್ದಾಗಿವೆ. ಇದು ಸ್ವಂತ ಲಾಂಡ್ರಿ ಉದ್ಯಮ ಸ್ಥಾಪಿಸಲು ಅರುಣಾಭ್ ಸಿನ್ಹಾ ಅವರಿಗೆ ಪ್ರೇರಣೆಯಾಯಿತು. ಈ ಕ್ಷೇತ್ರದಲ್ಲಿ ಅವಕಾಶಗಳಿರೋದನ್ನು ಗಮನಿಸಿದ ಸಿನ್ಹಾ, ಯುಕ್ಲೀನ್ (UClean) ಲಾಂಡ್ರಿ ಉದ್ಯಮ ಪ್ರಾರಂಭಿಸಿದರು. ಇದರಲ್ಲಿ ಇವರ ಪತ್ನಿ ಗುಂಜನ್ ಸಿನ್ಹಾ ಕೂಡ ಕೈಜೋಡಿಸಿದರು. ಯುಕ್ಲೀನ್ ಮೊದಲ ಮಳಿಗೆಯನ್ನು ದೆಹಲಿಯ ವಸಂತ್ ಕುಂಜ್ ನಲ್ಲಿ ಪ್ರಾರಂಭಿಸಿದರು. ಆದರೆ, ಇವರ ಹೆತ್ತವರು ಲಾಂಡ್ರಿ ಉದ್ಯಮ ಪ್ರಾರಂಭಿಸುವ ಯೋಚನೆಗೆ ವಿರುದ್ಧವಾಗಿದ್ದರು. ಆದರೆ, 5 ವರ್ಷಗಳಲ್ಲಿ ಇವರ ಸ್ಟಾರ್ಟ್ ಅಪ್ ಸಾಕಷ್ಟು ಬೆಳವಣಿಗೆ ದಾಖಲಿಸಿತು. ಇಂದು ದೇಶದ 113 ನಗರಗಳಲ್ಲಿ 390ಕ್ಕೂ ಅಧಿಕ ಯುಕ್ಲೀನ್ ಮಳಿಗೆಗಳಿವೆ. ಈ ಕಂಪನಿಯ ವಾರ್ಷಿಕ ವಹಿವಾಟು 110 ಕೋಟಿ ರೂ.
