ಬುಲೆಟ್ ಪ್ರೂಫ್ ಕಾರಿಗೆ ಹೀಗೂ ಪ್ರಮೋಷನ್ : ತನ್ನ ಉತ್ಪನ್ನದ ಬಗ್ಗೆ ಅದೆಂಥಾ ವಿಶ್ವಾಸ ನೋಡಿ
ಟೆಕ್ಸಾಸ್ ಆರ್ಮೊರಿಂಗ್ ಕಾರ್ಪೋರೇಷನ್ (TAC) ಎಂಬ ಸಂಸ್ಥೆಯ ಸಿಒಒ ಮರ್ಸಿಡಿಸ್ ಬೆಂಜ್ ಬುಲೆಟ್ ಫ್ರೂಪ್ ಕಾರನ್ನು ತಪಾಸಣೆ ಮಾಡುವ ವೇಳೆ ಸ್ವತಃ ಕಾರಿನೊಳಗೆ ಕುಳಿತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್ : ಬುಲೆಟ್ ಫ್ರೂಪ್ ಕಾರಿನ ಗ್ಲಾಸ್ ನಿಜವಾಗಿಯೂ ಬುಲೆಟ್ ಫ್ರೂಪ್ ಆಗಿ ಕೆಲಸ ಮಾಡುತ್ತಾ? ಇದನ್ನು ತಪಾಸಣೆ ಮಾಡೋದು ಹೇಗೆ ಎಂಬ ಕುತೂಹಲ ಅನೇಕರಿಗೆ ಇರುತ್ತದೆ. ಬುಲೆಟ್ ಫ್ರೂಪ್ ಕಾರು ತಯಾರಿಕಾ ಸಂಸ್ಥೆ ಅದಕ್ಕೆ ವಿವಿಧ ರೀತಿಯ ಕಸರತ್ತಿನ ಮೂಲಕ ನಮ್ಮ ಉತ್ಪನ್ನದ ಬುಲೆಟ್ ಫ್ರೂಪ್ ಕಾರು ಪಕ್ಕಾ ಬುಲೆಟ್ ಫ್ರೂಪ್ ಆಗಿದೆ ಎಂದು ತೋರಿಸುತ್ತಾರೆ. ಬುಲೆಟ್‌ನಿಂದ ಗುಂಡು ಹಾರಿಸಿ ತೋರಿಸುತ್ತಾರೆ. ಆದರೆ ಹೀಗೆ ತಪಾಸಣೆ ಮಾಡುವಾಗ ಕಂಪನಿಯ ಸಿಇಒ ಕಾರಿನ ಒಳಗೆ ಕೂತು ಈ ಸಾಹಸಕ್ಕೆ ಮುಂದಾಗುವುದು ತೀರಾ ಕಡಿಮೆ. ಆದರೆ ಅಮೆರಿಕಾದ ಟೆಕ್ಸಾಸ್ ಮೂಲದ ಬುಲೆಟ್ ಫ್ರೂಪ್ ಕಾರು ತಯಾರಿಕಾ ಸಂಸ್ಥೆಯ ಸಿಇಒ ಅದನ್ನು ಮಾಡಿ ತೋರಿಸಿದ್ದು, ಅವರ ಕೆಲಸದ ಬಗೆಗಿನ ನಂಬಿಕೆ ಅವರ ಕೆಲಸಗಾರರ ಮೇಲೆ ಅವರಿಟ್ಟ ವಿಶ್ವಾಸಾರ್ಹತೆಗೆ ಇದು ಸಾಕ್ಷಿಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೆಕ್ಸಾಸ್ ಆರ್ಮೊರಿಂಗ್ ಕಾರ್ಪೋರೇಷನ್ (TAC) ಎಂಬ ಸಂಸ್ಥೆಯ ಸಿಒಒ ಮರ್ಸಿಡಿಸ್ ಬೆಂಜ್ ಬುಲೆಟ್ ಫ್ರೂಪ್ ಕಾರನ್ನು ತಪಾಸಣೆ ಮಾಡುವ ವೇಳೆ ಸ್ವತಃ ಕಾರಿನೊಳಗೆ ಕುಳಿತಿದ್ದಾರೆ. ಈ ವೇಳೆ ಹೊರಗಿನಿಂದ ಕಾರಿನ ಬುಲೆಟ್ ಫ್ರೂಪ್ ಗ್ಲಾಸ್‌ಗಳಿಗೆ ಗುಂಡು ಹಾರಿಸಲಾಗುತ್ತದೆ. ಆದರೆ ಗ್ಲಾಸ್ ಮಾತ್ರ ಒಡೆದಿಲ್ಲ. ಒಂದು ವೇಳೆ ಒಡೆದಿದ್ದರೆ ಕತೆ ಏನು? ಎಂಬ ಆತಂಕ ಎಲ್ಲರದ್ದು, ಆದರೆ ಟಿಎಸಿ ಸಿಇಒ ಟ್ರೆಂಟ್ ಕಿಂಬಲ್ ಅವರಿಗೆ ಮಾತ್ರ ಇದರ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಹಲವು ಬಾರಿ ಗುಂಡು ಹಾರಿಸಿದ ಬಳಿಕವೂ ಗ್ಲಾಸ್ ಒಡೆಯದೇ ಏನೂ ಆಗದೇ ಟಿಎಸಿ ಸಿಇಒ ಟ್ರೆಂಟ್ ಕಿಂಬಲ್ ಹೊರಗಿಳಿದು ಬರುತ್ತಾರೆ.
Shah Rukh Khan: ಶಾರುಖ್ ಖಾನ್‌ನ ಬುಲೆಟ್ ಪ್ರೂಫ್ ಲಿಮೋಸಿನ್‌ನಲ್ಲಿ ಬಂದ VVIP ಯಾರು ಗೊತ್ತಾ?
ಹಳೆಯ ವಿಡಿಯೋ ಇದಾಇದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುಗರನ್ನು ಸ್ತಬ್ಧಗೊಳಿಸಿದೆ. ಇಂಟೆಂರೆಸ್ಟಿಂಗ್ ಇಂಜಿನಿಯರ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಟೆಕ್ಸಾಸ್ ಆರ್ಮೊರಿಂಗ್ ಕಾರ್ಪೋರೇಷನ್ ಸಿಇಒ ಬುಲೆಟ್ ಫ್ರೂಪ್ ಮರ್ಸಿಡಿಸ್ ಬೆಂಜ್ (bulletproof Mercedes Benz) ಕಾರಿನ ಒಳಭಾಗದಲ್ಲಿ ಕುಳಿತಿರುವಾಗ ಹೊರಗಿನಿಂದ ಎಕೆ 47 ಗನ್‌ನಿಂದ ಗುಂಡು ಹಾರಿಸಲಾಗುತ್ತದೆ.
ಟೆಕ್ಸಾನ್ ಆರ್ಮೊರ್ಡ್ ವಾಹನ ಸಂಸ್ಥೆ ತನ್ನ ಉತ್ಪನ್ನಕ್ಕೆ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಮಾರ್ಕೆಟಿಂಗ್ ಮಾಡುತ್ತಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಟಿಎಸಿ ಸಿಇಒ ಟ್ರೆಂಟ್ ಕಿಂಬಲ್ (Trent Kimball) ಕಾರೊಳಗೆ ಕುಳಿತ ನಂತರ ಅದರ ಬುಲೆಟ್ ಫ್ರೂಪ್ ಗಾಜಿಗೆ ಎಕೆ -47 ಗನ್‌ನಿಂದ 8 ರಿಂದ 10 ಸುತ್ತುಗಳ ಗುಂಡಿನ ಸುರಿಮಳೆಗೈಯ್ಯಲಾಗುತ್ತದೆ. ಅಷ್ಟಾದರೂ ಗಾಜು ಒಡೆಯದೇ ಟ್ರೆಂಟ್ ಆರಾಮದಾಯಕವಾಗಿ ಕಾರಿನಿಂದಿಳಿದು ಬರುತ್ತಾರೆ.
ಈ ವಿಡಿಯೋವನ್ನು 2014ರಲ್ಲಿ ಮೊದಲ ಬಾರಿಗೆ ಈ ಸಂಸ್ಥೆ ಮೊದಲ ಬಾರಿಗೆ ಬಿಡುಗಡೆ ಮಾಡಿತ್ತು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಸಂಸ್ಥೆಯ ಮಾರಾಟ ಮತ್ತು ರಫ್ತು ಅನುಸರಣೆ ವ್ಯವಸ್ಥಾಪಕ ಲಾರೆನ್ಸ್ ಕೊಸುಬ್ (Lawrence Kosub) ಅವರು ಈ ಕಾರಿನ ಮೇಲೆ ಪರೀಕ್ಷಾರ್ಥ ಗುಂಡಿನ ದಾಳಿ ಮಾಡಿದ್ದರು. ಅವರು ಆಕ್ರಮಣಕಾರಿ ರೈಫಲ್ ಬಳಕೆ ಬಗ್ಗೆ ಹೆಚ್ಚು ತಿಳಿದಿದ್ದಾರೆ. ಎಷ್ಟು ಗುಂಡು ಹಾರಿಸಿದರು ಯಾವೊಂದು ಗುಂಡು ಕೂಡ ಕಾರಿನ ಗಾಜನ್ನು ಒಡೆಯಲು ಸಾಧ್ಯವಾಗಿಲ್ಲ.
ಬುಲೆಟ್ ಪ್ರೂಫ್ ಕವಚ ತೆಗೆಸಿ ಕಾಶ್ಮೀರದಲ್ಲಿ ಅಮಿತ್ ಭಾಷಣ!
ಈ ವಿಡಿಯೋವನ್ನು 4.8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಅನೇಕರು ಸಿಇಒ ಅವರ ಧೈರ್ಯ ಹಾಗೂ ನಂಬಿಕೆಯನ್ನು ಮೆಚ್ಚಿದ್ದಾರೆ. ಆತ್ಮವಿಶ್ವಾಸವೇ ದೊಡ್ಡ ಉತ್ಪನ್ನ ಈ ರೀತಿ ನಿಲ್ಲಲ್ಲು ತುಂಬಾ ಆತ್ಮವಿಶ್ವಾಸ ಬೇಕು ಎಂದು ಈ ವಿಡಿಯೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ತನ್ನ ಉತ್ಪನ್ನದ ಬಗ್ಗೆ ತನ್ನ ಕೆಲಸಗಾರರ ಬಗ್ಗೆ ಇಷ್ಟೊಂದು ಧೃಡ ವಿಶ್ವಾಸವಿಟ್ಟ ಈತ ತುಂಬಾ ಇಷ್ಟವಾದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಫಾಕ್ಸ್ ನ್ಯೂಸ್ ಪ್ರಕಾರ, ಟೆಕ್ಸಾಸ್ ಅರ್ಮೊರಿಂಗ್ ಕಾರ್ಪೋರೇಷನ್ ಅಮೆರಿಕಾದ ( US) ಸ್ಯಾನ್ ಅಂಟೊನಿಯೊದಾದ್ಯಂತ (San Antonio) ಬುಲೆಟ್ ಫ್ರೂಪ್ ವಾಹನಗಳನ್ನು ಪೂರೈಕೆ ಮಾಡುತ್ತದೆ. ಅಲ್ಲದೇ ಪ್ರಸ್ತುತ ಕಾರುಗಳನ್ನು ಬುಲೆಟ್ ಫ್ರೂಪ್ ಆಗಿ ಉನ್ನತೀಕರಣಗೊಳಿಸುತ್ತದೆ.