Asianet Suvarna News Asianet Suvarna News

ಓಲಾ ಕ್ಯಾಬ್‌ನಿಂದ ಹೆಚ್ಚು ಶುಲ್ಕ ವಸೂಲಿ: ಗ್ರಾಹಕನಿಗೆ 95 ಸಾವಿರ ರೂ. ಪರಿಹಾರ..!

4 - 5 ಕಿ.ಮೀ. ಪ್ರಯಾಣ ಮಾಡಿದರೂ ಓಲಾ ಕ್ಯಾಬ್ಸ್‌ ಗ್ರಾಹಕರೊಬ್ಬರಿಗೆ ಹೆಚ್ಚು ಬಿಲ್‌ ನೀಡಲು ಒತ್ತಾಯಿಸಿದ್ದಕ್ಕೆ ಗ್ರಾಹಕ ನ್ಯಾಯಾಲಯವು ಬರೋಬ್ಬರಿ 95 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದೆ. 

ola ordered to give 95 thousand compensation for overcharging custommer ash
Author
Bangalore, First Published Aug 20, 2022, 5:06 PM IST

ಗ್ರಾಹಕರೊಬ್ಬರಿಗೆ 95,000 ರೂಪಾಯಿ ಪರಿಹಾರವನ್ನು ನೀಡುವಂತೆ ಹೈದರಾಬಾದ್ ಗ್ರಾಹಕ ನ್ಯಾಯಾಲಯವು ಓಲಾ ಕ್ಯಾಬ್ಸ್‌ಗೆ ಆದೇಶಿಸಿದೆ. ಅಪೂರ್ಣ ಪ್ರಯಾಣಕ್ಕಾಗಿ ಹೆಚ್ಚಿನ ಶುಲ್ಕ ವಿಧಿಸಿದ ಹಿನ್ನೆಲೆ ಇಷ್ಟೊಂದು ಮೊತ್ತದ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯವು ತೀರ್ಪು ನೀಡಿದೆ. ಓಲಾ ಕ್ಯಾಬ್ಸ್‌ನ ಚಾಲಕ ಕೇವಲ ಐದು ಕಿ.ಮೀ. ಮಾತ್ರ ಪ್ರಯಾಣ ಮಾಡಿಸಿದ್ದರು. ಆ ಅಪೂರ್ಣ ಪ್ರಯಾಣಕ್ಕೆ 861 ರೂ.ಗಳನ್ನು ಪಾವತಿಸಲು ಓಲಾ 2021 ರ ಅಕ್ಟೋಬರ್‌ನಲ್ಲಿ ಒತ್ತಾಯ ಮಾಡಿತ್ತು. ಈ ಹಿನ್ನೆಲೆ ದೂರುದಾರ ಜಬೆಜ್ ಸ್ಯಾಮ್ಯುಯೆಲ್ ಹೈದರಾಬಾದ್ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ - III ಮೊರೆ ಹೋಗಿ ಪರಿಹಾರವನ್ನು ಕೋರಿದ್ದರು.

ಸ್ವಲ್ಪ ದೂರ ಪ್ರಯಾಣ ಮಾಡಿದ್ದರೂ ಹೆಚ್ಚಿನ ಶುಲ್ಕ ವಿಧಿಸಿದ್ದಕ್ಕೆ ಗ್ರಾಹಕರಿಗೆ 95,000 ರೂಪಾಯಿ ಪರಿಹಾರ ನೀಡುವಂತೆ ಹೈದರಾಬಾದ್ ಗ್ರಾಹಕ ನ್ಯಾಯಾಲಯವು ಆದೇಶಿಸಿದೆ. ದೂರುದಾರರಿಗೆ 861 ರೂ. ಟ್ರಿಪ್ ಶುಲ್ಕವನ್ನು ಬಡ್ಡಿಯೊಂದಿಗೆ (ವಾರ್ಷಿಕ 12%) ಪಾವತಿಸುವಂತೆ ನಿರ್ದೇಶಿಸಿದೆ. ಇದರ ಜತೆಗೆ, ಮಾನಸಿಕ ಸಂಕಟ ಅನುಭವಿಸಿದ್ದಕ್ಕೆ 88,000 ರೂ. ಮತ್ತು ಕೋರ್ಟ್‌ನ ವಿಚಾರಣೆ ವೆಚ್ಚಕ್ಕೆ 7,000 ರೂ. ನೀಡಲು ಸಹ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. 

ಬರೀ 20 ರೂಪಾಯಿ ಟಿಕೆಟ್‌, ಒಲಾ-ಉಬರ್‌ಗೆ ಟಾಂಗ್‌ ನೀಡಿದ ಬೆಂಗಳೂರು ಪ್ರಯಾಣಿಕ!

ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ಸಲ್ಲಿಸಲಾದ ದೂರಿನಲ್ಲಿ, ಸ್ಯಾಮ್ಯುಯೆಲ್ ಅವರು ಅಕ್ಟೋಬರ್ 19, 2021 ರಂದು ಓಲಾ ಕ್ಯಾಬ್‌ವೊಂದನ್ನು 4 ಗಂಟೆಗಳ ಕಾಲ ಬುಕ್ ಮಾಡಿರುವುದಾಗಿ ಹೇಳಿದ್ದರು. ಅಲ್ಲದೆ, ಸ್ಯಾಮ್ಯುಯೆಲ್, ಅವರ ಪತ್ನಿ ಮತ್ತು ಸಹಾಯಕರೊಬ್ಬರು ಕ್ಯಾಬ್ ಹತ್ತಿದ ನಂತರ, ಅದನ್ನು ಅಶುದ್ಧವಾಗಿರುವುದನ್ನು ಕಂಡುಕೊಂಡರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಹವಾನಿಯಂತ್ರಣವನ್ನು ಆನ್ ಮಾಡುವಂತೆ ಮನವಿ ಮಾಡಿದರೂ ಚಾಲಕ ನಿರಾಕರಿಸಿದ್ದು, ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು 4 - 5 ಕಿ.ಮೀ ಪ್ರಯಾಣಿಸಿದ್ದ ಬಳಿಕ ಕೆಳಗೆ ಇಳಿಯುವಂತೆ ಹೇಳಿದರು. ನಂತರ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಭೇಕಾಯ್ತು ಮತ್ತು ಕೆಲವು ನಿಗದಿತ ಕಾರ್ಯಕ್ರಮಗಳಿಗೂ ತೆರಳಲಿಲ್ಲ ಎಂದು ದೂರುದಾರರು ಹೇಳಿದರು.

ಇನ್ನು, ಅಪೂರ್ಣ ಪ್ರಯಾಣ ಮಾಡಿದರೂ, ರೂ 861 ಬಿಲ್‌ ಕೇಳಿದ್ದಕ್ಕೆ, ತಾನು support@olacabs.com ಗೆ ಇಮೇಲ್ ಮೂಲಕ ದೂರು ನೀಡಿದ್ದೇನೆ ಮತ್ತು  ಗ್ರಾಹಕ ಆರೈಕೆ ಕಾರ್ಯನಿರ್ವಾಹಕರಿಂದ ಕರೆಯನ್ನು ಸ್ವೀಕರಿಸಿದ್ದು, ಅವರು ಉನ್ನತ ಅಧಿಕಾರಿಗೆ ಕರೆಯನ್ನು ವರ್ಗಾಯಿಸಲು ವಿಫಲವಾಗಿದ್ದಾರೆ ಎಂದೂ ಸ್ಯಾಮ್ಯುಯೆಲ್ ಹೇಳಿದ್ದಾರೆ. ಅಲ್ಲದೆ, ಓಲಾ ಕಸ್ಟಮರ್ ಕೇರ್ ಅಧಿಕಾರಿಗಳು ಬಿಲ್ ಪಾವತಿಸುವಂತೆ ಪದೇ ಪದೇ ಕರೆ ಮಾಡುತ್ತಿದ್ದರು ಎಂದು ಸ್ಯಾಮ್ಯುಯೆಲ್ ಹೇಳಿದ್ದು, ನಂತರ ಅವರು ಅದನ್ನು ಜನವರಿ 2022 ರಲ್ಲಿ ಪಾವತಿಸಿದ್ದಾರೆ. ಆದರೂ ಪ್ರಯಾಣಿಸಿದ ನಿಜವಾದ ದೂರಕ್ಕೆ ಕೇವಲ 150 ರಿಂದ 200 ರೂ. ಆಗುತ್ತಿತ್ತಷ್ಟೇ, ಜತೆಗೆ ‘’ಸಂಕಟ, ಕಷ್ಟ, ನೋವು" ಮತ್ತು ನಾವು ಅನುಭವಿಸಿದ ಇತರ ಅನಾನುಕೂಲತೆಗಳು, ಕಂಪನಿಯ ವರ್ತನೆಯು "ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಕ್ಕೆ ಕಾರಣವಾಗುತ್ತದೆ" ಎಂದೂ ಸ್ಯಾಮುಯೆಲ್‌ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ: ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!

ಈ ಹಿನ್ನೆಲೆ ಆಯೋಗವು ತನ್ನ ಜೂನ್ 27 ರ ಆದೇಶದಲ್ಲಿ, ಓಲಾ ಕ್ಯಾಬ್ಸ್ ಕಂಪನಿಯವರು ವಿಚಾರಣೆಗೆ ಹಾಜರಾಗಲು ನ್ಯಾಯಾಲಯದ ಎದುರು ಬಂದಿಲ್ಲ ಎಂದು ಗಮನಿಸಿದೆ. ಅಲ್ಲದೆ, ಓಲಾ ಕ್ಯಾಬ್ಸ್ ಒದಗಿಸಿದ ಸಾರಿಗೆ ಸೇವೆಯ ಕೊರತೆಯು ದೂರುದಾರರಿಗೆ ಕಿರುಕುಳ ಮತ್ತು ಉದ್ವೇಗವನ್ನು ಉಂಟುಮಾಡಿದೆ. ಆದರೂ ಗ್ರಾಹಕರು ಕೇಳಿದ 4,99,000 ರೂ.ಗಳ ಪರಿಹಾರ ವಿಪರೀತವಾಗಿದೆ ಎಂದು ಅದು ಹೇಳಿದೆ. ಆ ನಂತರ ದೂರುದಾರರು 88,000 ರೂ.ಗಳ ಪರಿಹಾರಕ್ಕೆ ಅರ್ಹರಾಗಿದ್ದಾರೆ ಮತ್ತು ಅದರೊಂದಿಗೆ 7000 ರೂ. ಗ್ರಾಹಕ ನ್ಯಾಯಾಲಯದ ವೆಚ್ಚ ನೀಡಬೇಕೆಂದೂ ನಿರ್ದೇಶಿಸಿದ್ದಾರೆ. 

Follow Us:
Download App:
  • android
  • ios