ನಮ್ಮ ಕುಟುಂಬವನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಓಲಾ ಕ್ಯಾಬ್, ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಬೆಂಗಳೂರು ವ್ಯಕ್ತಿ!

ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಮೈಸೂರಿಗೆ ಪ್ರಯಾಣಿಸಲು ಭಾನುವಾರ ಔಟ್ ಸ್ಟೇಷನ್ ರೈಡ್ ಕಾಯ್ದಿರಿಸಿದ್ದರು. ಆದರೆ ಹೆದ್ದಾರಿಯ ಮಧ್ಯದಲ್ಲಿಯೇ ಕಲೆಕ್ಷನ್ ಏಜೆಂಟ್ ಗಳು ಕಾರನ್ನು ತಡೆದು ಚಾಲಕನಿಗೆ ಹಿಂದಿನ ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ವಾಹನವನ್ನು ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದಾಗ ಇಡೀ ಪ್ರಯಾಣ ಹದಗೆಟ್ಟಿತು ಎಂದಿದ್ದಾರೆ.

Bengaluru man shares worst traumatising trip slams Ola cab in Twitter thread san

ಬೆಂಗಳೂರು (ಮೇ. 18): ಬೆಂಗಳೂರಿನ ನಿವಾಸಿಯೊಬ್ಬರು (Bengaluru Man) ತಮ್ಮ ಕುಟುಂಬದೊಂದಿಗೆ ಮೈಸೂರಿಗೆ (Mysore) ಪ್ರಯಾಣಿಸುವ ವೇಳೆ ಪ್ರವಾಸದ ಮಧ್ಯದಲ್ಲಿ ಹೆದ್ದಾರಿಯಲ್ಲಿ ಸಿಕ್ಕಿಹಾಕಿಕೊಂಡ ಕೆಟ್ಟ ಘಟನೆಯನ್ನು ಟ್ವಿಟರ್ ಥ್ರೆಡ್ ನಲ್ಲಿ ವಿವರಿಸಿದ್ದಾರೆ. ತಮ್ಮ ಪ್ರವಾಸವನ್ನು ಹದಗೆಡಿಸಿದ ಓಲಾ ಕ್ಯಾಬ್  (Ola Cab) ಅನ್ನು ಟ್ವಿಟರ್ ಥ್ರೆಡ್ ಅಲ್ಲಿ ಕಟು ಶಬ್ದಗಳಲ್ಲಿ ಟೀಕೆ ಮಾಡಿರುವ ಬೆಂಗಳೂರು ವ್ಯಕ್ತಿ, ವಿಕಾಸ್ ಗೌಡ (Vikas Gowda) ತಮ್ಮ ಅತ್ಯಂತ ಕೆಟ್ಟ ಹಾಗೂ ಆಘಾತಕಾರಿ ಅನುಭವಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ.

'ನಗದು ಅಥವಾ ಓಲಾ ಹಣ' ಪಾವತಿಗೆ ಸಂಬಂಧಿಸಿದ ವಿವಾದಗಳು, ಪುನರಾವರ್ತಿತ ರದ್ದತಿ ಅಥವಾ ದೀರ್ಘಾವಧಿಯ ಅವಧಿಗಳಿಗೆ ಸಂಬಂಧಿಸಿದ ವಿವಾದಗಳಾಗಿರಬಹುದು, ಕ್ಯಾಬ್ ಅಗ್ರಿಗೇಟರ್‌ಗಳೊಂದಿಗಿನ ತಮ್ಮ ಭಯಾನಕ ಅನುಭವಗಳ ಬಗ್ಗೆ ಟ್ವಿಟರ್ ನಲ್ಲಿ ಟೀಕೆ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ನಡುವಿದೆ.

ಆಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವ ವೇಳೆ ಮತ್ತು ಅಂಥ ಕ್ಯಾಬ್ ಸೇವೆಗಳಲ್ಲಿ ಪ್ರಯಾಣಿಸುವ ವೇಳೆ ಬಹುತೇಕ ಮಂದಿ ಕಹಿ ಅನುಭವಗಳನ್ನು ಎದುರಿಸಿದ ನಿದರ್ಶನಗಳಿಗೆ ಅಂಥದ್ದೊಂದು ಘಟನೆಯನ್ನು ವಿಕಾಸ್ ಗೌಡ ಹಂಚಿಕೊಂಡಿದ್ದಾರೆ.

ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಬರೆದಿರುವ ವಿಕಾಸ್, "ಹೊರಸ್ಥಳದ ಪ್ರವಾಸದಲ್ಲಿದ್ದ ನಾನು, ಪೋಷಕರೊಂದಿಗೆ ಮೈಸೂರಿಗೆ ಹಿಂತಿರುಗಲು ಓಲಾ ಕ್ಯಾಬ್ ಅನ್ನು ಬುಕ್ ಮಾಡಿದ್ದೆ. ಒಂದೂವರೆ ಗಂಟೆಯ ಪ್ರಯಾಣದಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವು 'ದುಷ್ಕರ್ಮಿಗಳು' ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದರು. ಅವರು ರೌಡಿಗಳು/ಕಲೆಕ್ಷನ್ ಏಜೆಂಟ್‌ಗಳಾಗಿದ್ದು. ಚಾಲಕನಿಗೆ ಹಿಂದಿನ ಕಂತುಗಳನ್ನು ಆ ಕ್ಷಣದಲ್ಲಿ ಪಾವತಿಸುವಂತೆ ಬೆದರಿಕೆ ಹಾಕಿದ್ದರು. ಇಲ್ಲದಿದ್ದರೆ ಅವರು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದರು. ಇದೇ ವೇಳೆ ಅವರು, ಕಾರಿನಲ್ಲಿದ್ದ ನನ್ನ ಕುಟುಂಬಕ್ಕೆ ಕಾರಿನಿಂದ ಇಳಿದು, ಮೈಸೂರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.

ಓಲಾ ತುರ್ತು ಸೇವೆಗಳ ತಂಡವನ್ನು ಸಂಪರ್ಕಿಸಲು ಅವರು ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು ಎಂದು ವಿಕಾಸ್ ಆರೋಪಿಸಿದ್ದಾರೆ. ತಂಡದ ಸದಸ್ಯರು ರೈಡ್ ಅನ್ನು ರದ್ದುಪಡಿಸಲು ಮತ್ತು ಹೊಸದನ್ನು ಬುಕ್ ಮಾಡಲು ಹೇಳಿದ್ದರು ಎಂದು ಬರೆದಿದ್ದಾರೆ. ಇದರ ನಡುವೆ ಹಲವು ಬಾರಿ ಆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸುವಂತೆ ನನ್ನಲ್ಲಿ ಕೇಳಿದ್ದರು ಎಂದೂ ಆರೋಪಿಸಿದ್ದರು. ಇಷ್ಟೆಲ್ಲ ಕೇಳಿದ ಬಳಿಕ ಅವರು, ಇದು ಹೊರಸ್ಥಳದ ಬುಕ್ಕಿಂಗ್ ಆಗಿರುವ ಕಾರಣ, ನಾವು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು ಎಂದಿದ್ದಾರೆ.

Ola EV ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿವರ್ಸಗೇರ್‌ ಎಡವಟ್ಟು, ವೃದ್ಧನ ತಲೆಗೆ 10 ಹೊಲಿಗೆ!

ಆ  ಬಳಿಕ ಓಲಾ ನನ್ನನ್ನು ಸಂಪರ್ಕ ಮಾಡಿತಾದರೂ, ಟ್ರಿಪ್ ಅನ್ನು ಕೊನೆ ಮಾಡುವ ಸಲುವಾಗಿ ಒಟಿಪಿ ಕೇಳುವ ಬಗ್ಗೆ ಮಾತ್ರ. ಇವರಿಗೆ ಜನರಿಗೆ ಒಂಚೂರೂ ಕಾಳಜಿಯಿಲ್ಲ. ನನ್ನ ಕುಟುಂಬದ ಸದಸ್ಯರ ಬಗ್ಗೆಯೂ ಕೇಳಿರಲಿಲ್ಲ ಎಂದಿದ್ದಾರೆ. "ಇದು ಅವರ ತುರ್ತು ಪ್ರತಿಕ್ರಿಯೆ ತಂಡದ ಗುಣಮಟ್ಟವಾಗಿದ್ದರೆ, ರೈಡ್ ಹೆಲಿಂಗ್ ಸ್ಪೇಸ್‌ನಲ್ಲಿ ಸಂಭವಿಸಿದ ಎಲ್ಲಾ ಅಹಿತಕರ ಘಟನೆಗಳ ನಂತರ, ಮಹಿಳೆಯರು, ಕುಟುಂಬಗಳು ಮತ್ತು ಸಾಮಾನ್ಯವಾಗಿ ಜನರಿಗೆ ನಮ್ಮ ಕ್ಯಾಬ್ ಸವಾರಿಗಳನ್ನು ಸುರಕ್ಷಿತವಾಗಿಸುವುದರಿಂದ ನಾವು ಇನ್ನೂ ಬಹಳ ದೂರದಲ್ಲಿದ್ದೇವೆ" ಎಂದು ಅವರು ಹೇಳಿದರು.

ಗ್ರಾಹಕರ ದೂರು ಇತ್ಯರ್ಥಪಡಿಸದಿದ್ದರೆ ಕಠಿಣ ಕ್ರಮ: ಓಲಾ, ಊಬರ್‌ಗೆ ಸರ್ಕಾರದ ವಾರ್ನಿಂಗ್

ಓಲಾ ಇದನ್ನು 'ಹೆಚ್ಚುವರಿ ದೂರದ ದರ' ಎಂದು ಕರೆಯುವುದರೊಂದಿಗೆ ಸವಾರಿಗಾಗಿ ಹೆಚ್ಚುವರಿ ಶುಲ್ಕವನ್ನು ಸಹ ವಿಧಿಸಿದೆ ಎಂದು ಗೌಡ ಹೇಳಿದ್ದಾರೆ. ವಿಕಾಸ್ ಗೌಡ ಅವರ ಥ್ರೆಡ್ಸ್ ಗೆ, ಇನ್ನೂ ಅನೇಕರು ಇದೇ ರೀತಿಯ ಅನುಭವಗಳನ್ನು ದಾಖಲಿಸಿದ್ದಾರೆ. ಇನ್ನೂ ಕೆಲವರು ಓಲಾ ಹಾಗೂ ಉಬರ್ ಯುಗ ಮುಕ್ತಾಯವಾಗುತ್ತಿದೆ ಎಂದಿದ್ದಾರೆ. ಕೋವಿಡ್ ಪೂರ್ವದ ಸಮಯದಲ್ಲಿ ನಗರದಲ್ಲಿದ್ದ 1 ಲಕ್ಷ ಕ್ಯಾಬ್‌ಗಳಿಗೆ ಹೋಲಿಸಿದರೆ ಇಂದು ಕೇವಲ 30,000 ಕ್ಯಾಬ್‌ಗಳು ರಸ್ತೆಗಳಲ್ಲಿವೆ. ಇದು ಕೂಡ ಸಮಸ್ಯೆಗೆ ಕಾರಣವಾಗಿದೆ.

Latest Videos
Follow Us:
Download App:
  • android
  • ios